ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಧರ್ಮರಾಜ ಯುಧಿಷ್ಟಿರನು ಸತ್ಯವಂತನಾಗಿಯೂ ಇರಬೇಕು
ನನ್ನ ಮಗನ ದಾಸನಾಗಿಯೂ ಇರಬೇಕು
ಇದು ರಾಜಾ ದೃತರಾಷ್ಟ್ರನ ಹೆಬ್ಬಯಕೆ
ಸಂಜಯನು ದ್ರೋಣಾಚಾರ್ಯರ ಯುದ್ಧವನ್ನು ವರ್ಣನೆ ಮಾಡುತ್ತಿದ್ದ. ದ್ರುಪದನ ವಧೆಯ ವಿಚಾರ ಕೇಳಿ ಆ ಪುತ್ರವ್ಯಾಮೋಹಿ ದೃತರಾಷ್ಟ್ರ ಉಬ್ಬಿಹೋದ. ಅರ್ಥಾತ್ ಪಾಂಡವ ಸೇನಾಧಿಪತಿಯ ವಧೆಯೂ ಆಯ್ತು, ಪಾಂಡವರ ಸೋಲು ಖಚಿತವೂ ಆಯ್ತಲ್ಲವೇ? ಇದಕ್ಕೆ ಹೇಳುವುದು ಸ್ವಾರ್ಥ ಎಂದು.
ಕೃಷ್ಣನು ಅರ್ಜುನನೊಡನೆ,’ ಹೇ ಪಾರ್ಥಾ ಆಚಾರ್ಯರ ರಣತಂತ್ರ ನೋಡುತ್ತಿದ್ದರೆ ಅವರನ್ನು ಸೋಲಿಸುವುದು ಕಷ್ಟವೆ’ ಎಂದನು.
’ಹೌದು ವಾಸುದೇವಾ. ನಮ್ಮ ಸೋಲು ಖಚಿತ’ ಎಂದ ಅರ್ಜುನ. ’ ಹಾಗೆಂದು ನಾನು ಹೇಳಿದೆನೇ ಪಾರ್ಥಾ? ನಾನು ಹೇಳಿದ್ದು ಸೋಲಿಸುವುದು ಕಷ್ಟ ಎಂದಷ್ಟೆ. ನೀನು ನಿರ್ಧಾರಕ್ಕೇ ಬಂದುಬಿಟ್ಟೆ. ಹೀಗಿ ಸೋಲೊಪ್ಪಿಕೊಳ್ಳಿ. ಜೀವ ದಾನವಾದರೂ ಸಿಗುತ್ತೆ. ಆದರೆ ಇದಕ್ಕೆ ನಾನು ಮಾತ್ರ ಸಾಕ್ಷಿಯಾಗಲಾರೆ’ ಎಂದು ವ್ಯಂಗ್ಯವಾಡಿದ ಆ ಭಗವಂತ.
’ಹಾಗಾದರೆ ನಾನೇನು ಮಾಡಲಿ ಕೃಷ್ಣಾ? ನೀನೇ ಉಪಾಯ ಹೇಳಬೇಕು’ ಎಂದ ಅರ್ಜುನ.
ಹೇ ಪಾರ್ಥಾ, ನೀನು ಕುಳಿತದ್ದು ಧರ್ಮ ರಥದಲ್ಲಿ, ನಾನು ಆ ಧರ್ಮರಥದಲ್ಲಿ ಸಾರಥಿ, ಧರ್ಮ ಉಳಿಸಬೇಕಾದರೆ ಅಧರ್ಮದ ಮಾರ್ಗವೂ ಬೇಕಲ್ಲವೇ? ’ಅರ್ಥವಾಗಲಿಲ್ಲ ಭಗವಂತಾ ನಿನ್ನ ಮಾತು’ ಎಂದ ಅರ್ಜುನ. ಆಗ,’ ಹೇ ಧನುರ್ಧಾರೀ, ದ್ರೋಣರಿಗೆ ಪುತ್ರವ್ಯಾಮೋಹ ಜಾಸ್ತಿ. ಅಶ್ವತ್ಥಾಮ ಸತ್ತು ಹೋದ ಎಂದು ಘೋಷಿಸಿದರೆ ನಿಶ್ಚಿತವಾಗಿಯೂ ಆಯುಧ ಕೆಳಗೆ ಇಡುತ್ತಾನೆ. ದ್ರೋಣರ ಸಾಹಸ ಕೌರವರಿಗಾಗಿ ಅಲ್ಲ ಪಾರ್ಥಾ. ಮಗನ ವ್ಯಾಮೋಹಕ್ಕಾಗಿ. ಅಶ್ವತ್ಥಾಮನು ದುರ್ಯೋಧನನನ್ನು ಬಿಟ್ಟು ಒಂದು ಕ್ಷಣವೂ ಇರಲಾರ. ದ್ರೋಣನು ಮಗನಿಗಾಗಿ ಯಾವ ಹೇಯ ಕೃತ್ಯವನ್ನೂ ಮಾಡಲು ತಯಾರಿರುವವನು. ಅದಕ್ಕಾಗಿಯೇ ನಿನ್ನ ಮಗ ಅಭಿಮನ್ಯುವನ್ನು ಮೋಸದಿಂದ ಮುಗಿಸಿದ’ ಎಂದನಾ ಭಗವಂತ.
’ಆದರೆ ಸಾಯಿಸದಿರುವ ಅಶ್ವತ್ಥಾನನ್ನು ಸತ್ತ ಎಂದು ಹೇಗೆ ಸುಳ್ಳು ಹೇಳಲಿ. ಇದು ಮೋಸದ ತಂತ್ರಗಾರಿಕೆಯಲ್ಲವೇ? ನಾನು ಸೋಲನ್ನಾದರೂ ಒಪ್ಪಬಲ್ಲೆ, ರಣದಲ್ಲಿ ಮಡಿಯಲೂ ತಯಾರಿರುವೆ. ಆದರೆ ಗೆಲುವಿಗೋಸ್ಕರ ಸುಳ್ಳು ಹೇಳಲು ನನ್ನ ಮನವೊಪ್ಪದು’ ಎಂದು ಖಿನ್ನನಾದ ಪಾರ್ಥ.’ ಸೋಲು ಗೆಲುವನ್ನು ನಿರ್ಧರಿಸಲು ನೀನಾರು? ನಿನ್ನ ಕರ್ಮವನ್ನು ಮಾತ್ರ ಮಾಡಲು ಈ ಕರ್ಮಭೂಮಿಯಲ್ಲಿ ನಿನಗೆ ಹಕ್ಕಿರುವುದು,’ ಎನ್ನುತ್ತಾ ಧರ್ಮರಾಜನಿಗೆ,’ ಹೇ ಧರ್ಮನಂದನಾ, ನೀನಾದರೂ ಧರ್ಮ ರಕ್ಷಣೆಗಾಗಿ ಮಿಥ್ಯ ನುಡಿಯುವೆಯಾ’ ಎಂದ. ಧರ್ಮರಾಯ ಒಪ್ಪಿದ. ಭೀಮಸೇನ ಅಶ್ವತ್ಥಾಮ ಎಂಬ ಆನೆಯನ್ನು ವಧಿಸಿದ. ಧರ್ಮರಾಯ ಅಶ್ವತ್ಥಾಮ ಹತಃ ಎಂದು ಘೋಷಣೆಯನ್ನೂ ಮಾಡಿದ. ದ್ರೋಣ ಪುತ್ರವಿಯೋಗದ ವಾರ್ತೆ ಕೇಳಿ ಶಸ್ತ್ರತ್ಯಾಗವನ್ನೂ ಮಾಡಿದ. ದೃಷ್ಟದ್ಯುಮ್ನನಿಂದ ಶಿರವನ್ನೂ ಕಳೆದುಕೊಂಡು ಧರೆಗುರುಳಿದ.
’ಏನೂ,? ಸತ್ಯಾತ್ಮ ಯುಧಿಷ್ಟಿರ ಸುಳ್ಳು ನುಡಿದನೇ? ಸತ್ಯಸಂದನಾಗಿ ಸುಳ್ಳು ನುಡಿದುಬಿಟ್ಟನಾ ಯುಧಿಷ್ಟಿರಾ? ಛೆ ಎಂತಹ ಹೀನ ಕೆಲಸ ಮಾಡಿದ?’ಎಂದು ದೃತರಾಷ್ಟ್ರ ಶಾಪ ಹಾಕಿದ.
ಅವರೆಲ್ಲ ಮಾಡಿದ್ದೇನು? ಅಧರ್ಮದಲ್ಲಿ ರಾಜ್ಯ ದಾಹದಲ್ಲಿ ಮಾಡಬಾರದ್ದನ್ನು ಮಾಡಬಹುದಂತೆ. ಆದರೆ ಧರ್ಮ ರಕ್ಷಣೆಗಾಗಿ ಅಧರ್ಮದ ಮಾರ್ಗ ಬಳಸಬಾರದಂತೆ!!
ಇಂದು ಮೋದಿಯವರಿಗೂ ಇದೇ ಗತಿ. ಮೋದಿಯವರು ಸತ್ಯಮಾರ್ಗದಲ್ಲಿ ನಡೆಯಬೇಕಂತೆ. CAAದಂತಹ ಕಾನೂನು ತರಬಾರದಂತೆ. ದೇಶದಾದ್ಯಂತ ಮಾರಕ ಕಾಯಿಲೆ ಬಂದಾಗ lock down India ಮಾಡಬಾರದಂತೆ. ದೇವಸ್ಥಾನ ಮುಚ್ಚಿಸಬೇಕಂತೆ, ಮಸೀದಿ ಮುಚ್ಚಿಸಬಾರದಂತೆ. ದೆಹಲಿಯಲ್ಲಿ ಮುಸ್ಲಿಮರ ಮಸೀದಿಯಲ್ಲಿ ಮುಸ್ಲಿಮರು ಸಾವಿರ ಸಂಖ್ಯೆಯಲ್ಲಿ ಸೇರಬಹುದಂತೆ. ಅವರನ್ನು ತಡೆಯಬಾರದಂತೆ. ವ್ಯವಸ್ಥಿತ ಕೊರೋನ ಜಿಹಾದಿ ಮಾಡಬಹುದಂತೆ. ವಂದೇ ಮಾತರಂ ವಿರೋಧಿಸಬಹುದಂತೆ. ರಾಷ್ಟ್ರ ಗೀತೆಗೆ, ರಾಷ್ಟ್ರ ಧ್ವಜಕ್ಕೆ ಅವಮಾನಿಸಬಹುದಂತೆ. ಹಿಂದೂ ದೇವತೆಗಳನ್ನು ತುಚ್ಛವಾಗಿ ಕಾಣಬಹುದಂತೆ. ಜಿಹಾದಿಗಳು ಹಿಂದುಗಳ ಮಾರಣ ಹೋಮ ಮಾಡಬಹುದಂತೆ. ಗೋವನ್ನು ನಡು ಬೀದಿಯಲ್ಲಿ ಕಡಿಯಬಹುದಂತೆ. ಅದು ಅವರ ಆಹಾರವಂತೆ. ಆದರೆ ಇದನ್ನೆಲ್ಲ ತಡೆಯಬಾರದಂತೆ. ಇದುವೇ ದೇಶದ್ರೋಹಿ ವಿಪಕ್ಷಗಳ ನಿಷ್ಟೆ.
ಆದರೆ ಮೋದಿಯವರೇ, ನಿಮ್ಮಲ್ಲಿ ದೇಶಪ್ರೇಮಿಗಳು ವಿಶ್ವಾಸ ನಂಬಿಕೆ ಇಟ್ಟಿದ್ದಾರೆ. ನೀವು ಯಾವ ಅಧರ್ಮ ಮಾರ್ಗ ಬಳಸಿದರೂ ನಮ್ಮದೇನೂ ಅಡ್ಡಿಯಿಲ್ಲ. ದೇಶದ್ರೋಹಿಗಳನ್ನು ಮಟ್ಟ ಹಾಕಲೇ ಬೇಕು. ಇದು ದೇಶಪ್ರೇಮಿಗಳ ಒಕ್ಕೊರಲ ಧ್ವನಿ.
ಜೈ ಭಾರತಾಂಬೆ
Get in Touch With Us info@kalpa.news Whatsapp: 9481252093
Discussion about this post