ಕಲ್ಪ ಮೀಡಿಯಾ ಹೌಸ್ | ಮೊಳಕಾಲ್ಮೂರು |
ಬಗರು ಹುಕುಂನಲ್ಲಿ, ಅರಣ್ಯ ಹಕ್ಕು ಅರ್ಜಿದಾರರಲ್ಲಿ ಪರಿಗಣಿಸಲಾಗುತ್ತಿಲ್ಲ. ಸ್ವತಂತ್ರ ಬಂದು 75 ವರ್ಷಗಳಾದರೂ ಈ ವ್ಯಾಪ್ತಿಯಲ್ಲಿ ಬರುವ ಅರಣ್ಯ ಪ್ರದೇಶ ಗಡಿಯನ್ನು ಗುರುತು ಮಾಡಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಪಟ್ಟಣದ ತಾಲೂಕು ಆಡಳಿತ ಸೌಧದ ಅವರಣದಲ್ಲಿ ಅಖಿಲ ಭಾರತ ಕಿಸಾನ್ ಸಭಾ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ತಹಸಿಲ್ದಾರ್ ಎಂ.ವಿ. ರೂಪ ಅವರಿಗೆ ಮನವಿ ಸಲ್ಲಿಸಲಾಯಿತು.
ಸಿಪಿಐ ನ ತಾಲೂಕ ಕಾರ್ಯದರ್ಶಿ ಕಾ.ಜಾಫರ್ ಷರೀಫ್ ಮಾತನಾಡಿ, ವಲಯ ಅರಣ್ಯಾಧಿಕಾರಿಗಳು ತಕ್ಷಣ ಗಡಿ ಗುರುತು ಮಾಡಿ ಅರಣ್ಯದೊಳಗೆ ಬರುವ ಫಲಾನುಭವಿಗಳಿಗೆ ಅರಣ್ಯ ಹಕ್ಕು ಸಾಗುವಳಿ ಕೊಡುವುದರ ಜೊತೆಗೆ ಅರಣ್ಯದಿಂದ ಹೊರಗುಳಿಯುವ ಅರ್ಜಿ ಫಲಾನುಭವಿಗಳಿಗೆ ಬಗರ್ ಹುಕುಂ ಅರ್ಜಿದಾರರಂದು ಪರಿಗಣಿಸಬೇಕು ಹೊಸದಾಗಿ ಫಾರಂ ನಂಬರ್ 57ರ ಅರ್ಜಿ ಫಲಾನುಭವಿಗಳ ರೈತರ ಜಮೀನಿಗೆ ಕಂದಾಯ ಇಲಾಖೆಯಿಂದ ಸರ್ವೆ ಮಾಡಲು ಕಳುಹಿಸಿ ಕೊಡಬೇಕು ಇದಕ್ಕೆಲ್ಲ ಪರಿಹಾರವೆಂಬಂತೆ ಕ್ಷೇತ್ರ ಶಾಸಕರನ್ನು ಮತ್ತು ಬಗರ್ ಹುಕುಂ ಸಮಿತಿ ಸಭೆಯನ್ನು ಕರೆದು ರೈತರಿಗೆ ಸಾಗುವಳಿ ಪತ್ರ ವಿತರಿಸಬೇಕು ಎಂದರು.

Also read: ಗಂಗಾ ಕಲ್ಯಾಣ ಕೊಳವೆ ಬಾವಿ ವಿದ್ಯುದೀಕರಣ ಎರಡು ತಿಂಗಳಲ್ಲಿ ಪೂರ್ಣಗೊಳಿಸಿ: ಸಿಎಂ ಸೂಚನೆ
ಈ ಸಂದರ್ಭದಲ್ಲಿ ಯರ್ರಿಸ್ವಾಮಿ, ಬಿ. ವೆಂಕಟೇಶ್, ಕೆ. ಬಿ. ಪಾಪಣ್ಣ, ಲಿಂಗರಡ್ಡಿ, ಜಗನ್ನಾಥ, ಲೋಕೇಶ್ ನರಸಿಂಹ, ವೀರಣ್ಣ, ನಾಗಣ್ಣ, ಯಲ್ಲಪ್ಪ. ಕರಿಯಣ್ಣ.ಎಂ.ರಮೇಶ್ ಸಣ್ಣ ಮಾರಣ್ಣ ಇನ್ನು ಮುಂತಾದವರಿದ್ದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಡಿಆರ್ ಎಫ್ ಓ ಪಿ. ಎನ್. ನಿಂಗರಾಜ್ ಉಪಸ್ಥಿತರಿದ್ದರು.











Discussion about this post