ನವದೆಹಲಿ: ಸಂಸತ್ ಮಳೆಗಾಲದ ಅಧಿವೇಶನವನ್ನು ಜುಲೈ 18ರಿಂದ ಆಗಸ್ಟ್ 10ರವರೆಗೂ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಈ ಕುರಿತಂತೆ ಮಾತನಾಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್, ಒಟ್ಟು 18 ದಿನಗಳ ಕಾಲ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಸಂವಿಧಾನದ(123) ತಿದ್ದುಪಡಿ ಮಸೂದೆ 2017ಕ್ಕೆ ಅನುಮೋದನೆ ಪಡೆಯಲು ಸರ್ಕಾರ ಉದ್ದೇಶಿಸಿದೆ ಎಂದು ತಿಳಿಸಿದ ಅವರು, ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ(ಎನ್‌ಸಿಬಿಸಿ)ಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವಲ್ಲಿ ಹೆಜ್ಜೆಯಿಡಲಾಗುವುದು ಎಂದಿದ್ದಾರೆ.
ತ್ರಿವಳಿ ತಲಾಖ್, ಟ್ರಾಂನ್ಜೆಂಡರ್ ಮಸೂದೆ ಸೇರಿದಂತೆ ಹಲವು ಮಸೂದೆಗಳ ಮಂಡನೆ, ಚರ್ಚೆ ಹಾಗೂ ಅನುಮೋದನೆಗೆ ಉದ್ದೇಶಿಸಲಾಗಿದೆ ಎಂದರು.
ಇನ್ನು, 18 ದಿನಗಳ ಕಾಲ ನಡೆಯುವ ಅಧಿವೇಶನಕ್ಕೆ ಎಲ್ಲ ರಾಜಕೀಯ ಪಕ್ಷಗಳು ಉತ್ತಮ ಸಹಕಾರ ನೀಡುತ್ತವೆ ಎಂದು ಸರ್ಕಾರ ನಂಬಿದೆ ಎಂದಿದ್ದಾರೆ.
Discussion about this post