ಕಲ್ಪ ಮೀಡಿಯಾ ಹೌಸ್ | ಮುಂಜಾನೆ ಸುವಿಚಾರ |
ಮನುಷ್ಯನಿಗೆ ರೂಪ, ಅಧಿಕಾರ, ಬುದ್ದಿವಂತಿಕೆ, ಸಂಪತ್ತು ಎಲ್ಲದರದ್ದು ಅಭಿಮಾನ ಇರುತ್ತದೆ. ಅಭಿಮಾನ ಇದ್ದಷ್ಟು ಒಳ್ಳೆಯದು, ಆದರೆ ಅದೇ ಅಭಿಮಾನವು ದುರಭಿಮಾನ ಅಥವಾ ಅಹಂಕಾರವಾಗಿ ಪರಿವರ್ತನೆಗೊಂಡರೆ ಅದು ಬಹಳ ನಷ್ಟವನ್ನುಂಟು ಮಾಡುತ್ತದೆ.
ಮೊದಲಿಗೆ ಜನರ ಮನಸಲ್ಲಿ ನಮ್ಮ ಬಗ್ಗೆ ಇದ್ದ ಗೌರವ ಆದರ ವಿಶ್ವಾಸಗಳನ್ನು ಕಡಿಮೆ ಮಾಡಿ ನಮ್ಮ ವ್ಯಕ್ತಿತ್ವದ ಮೌಲ್ಯ ಕಡಿಮೆ ಮಾಡುತ್ತದೆ. ವಿನಮ್ರತೆ ಮತ್ತು ಸರಳತೆ ಜೀವನದಲ್ಲಿ ಉತ್ತಮ ಮನುಷ್ಯನನ್ನಾಗಿ ಮಾಡಿ ಜನರ ಪ್ರೀತಿ ವಿಶ್ವಾಸಗಳಿಸಿ ಮನ್ನಣೆ ಪಡೆಯುವಂತೆ ಮಾಡುತ್ತದೆ.
ಸಹೃದಯತೆಯಿಂದ ಎಲ್ಲರೊಂದಿಗೂ ಪ್ರೀತಿ ವಿಶ್ವಾಸಗಳಿಂದ ನಗುನಗುತ್ತ ಇದ್ದು ಸರಳ ಜೀವನ ನಡೆಸಿದರೆ ಜೀವನ ಉತ್ತಮವಾಗುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post