2014ರಲ್ಲಿ ಐತಿಹಾಸಿಕ ದಿಗ್ವಿಜಯ ಸಾಧಿಸಿ, ಪ್ರಧಾನಿಯಾದ ನರೇಂದ್ರ ಮೋದಿ ವಿಶ್ವದ ಮುಂದೆ ಭಾರತವನ್ನು ಯಾವ ಸ್ಥಾನಕ್ಕೆ ಕರೆದೊಯ್ದರು ಎಂಬುದೇ ಈಗ ವೈಭವ ಒಂದು ಇತಿಹಾಸವಾಗಿದೆ. ಅದೇ ರೀತಿ 2019ರಲ್ಲೂ 2014ರ ಇತಿಹಾಸ ಮರುಕಳಿಸಿ, ಮೋದಿ ಮತ್ತೆ ಪ್ರಧಾನಿಯಾಗುತ್ತಾರಾ ಎಂಬ ವಿಚಾರದಲ್ಲಿ ಜ್ಯೋರ್ತಿವಿಜ್ಞಾನಂ ಖ್ಯಾತಿಯ ಪ್ರಕಾಶ್ ಅಮ್ಮಣ್ಣಾಯ ಅವರ ಅದ್ಬುತ ವಿಶ್ಲೇಷಣೆ ಓದಿ
ಮುಂಬರುವ 2019ರ ಲೋಕಸಭಾ ಚುನಾವಣೆಯ ಫಲಿತಾಂಶದ ಕುತೂಹಲ ಕೇವಲ ಭಾರತೀಯರಿಗೆ ಮಾತ್ರವಲ್ಲ. ಇಡಿಯ ಪ್ರಪಂಚಕ್ಕೇ ಕುತೂಹಲವಾಗಿರುತ್ತದೆ ಎನ್ನುವುದನ್ನು ಆರಂಭದಲ್ಲೇ ಹೇಳಿ ಬಿಡುತ್ತೇನೆ.
ಭಾರತದಲ್ಲಂತೂ ಮೋದಿ ವಿರೋಧಿ ಎಣ್ಣೆ-ಶೀಗೆಗಳೆಲ್ಲ ಒಂದಾಗಿ ಹೊಸ ರಂಗಸ್ಥಳ ತಯಾರು ಮಾಡುತ್ತಿವೆ. ಹೊಡ್ಕೊಂಡವರು, ಬಡ್ಕೊಂಡವರುರು, ಕದ್ಕೊಂಡವರು, ಉಗ್ಸಿಕೊಂಡವರೆಂಬ ಬೇಧಭಾವ ಸದ್ಯಕ್ಕೆ ಮರೆತು ಒಂದಾಗುತ್ತಿದ್ದಾರೆ. ಈಗ ಇಲ್ಲಿ ಮೋದಿಗೆ ಎದಿರಾಗಿರುವುದು ಒಂದೇ ಶಕ್ತಿಯಾಗಿರುತ್ತದೆ. ಇದರ ಫಲಶ್ರುತಿ ಏನಾದೀತು? ಮೋದಿ ಮತ್ತೆ ಪ್ರಧಾನ ಮಂತ್ರಿಯಾದರೆ ಏನಾದೀತು ಎಂಬ ಭಯ ಮೋದಿಯವರ ವಿರೋಧಿಗಳಿಗಾದರೆ, ಮೋದಿಯ ಭಕ್ತರಿಗೆ ಮೋದಿಯವರ ಎರಡನೆಯ ಇನ್ಸಿಂಗ್ಸ್ ಏನೇನು ಸ್ಕೋರ್ ಮಾಡಬಹುದು ಎಂಬ ಕುತೂಹಲ.
2019ರಲ್ಲಿ ಬಿಜೆಪಿಗೆ ಎಷ್ಟು ಸ್ಥಾನ ಬರಲಿವೆ?
2019ರ ಮಹಾಚುನಾವಣೆಯು ಇಷ್ಟರವರೆಗೆ ನಡೆದ ಮಹಾಚುನಾವಣೆಗಳಲ್ಲಿ ಮರೆಯಲಾಗದ ಒಂದು ಚುನಾವಣೆಯಾಗುತ್ತದೆ. ಮೋದಿ ಮತ್ತು ಅಮಿತ್ ಷಾ ಅವರ ಜಾತಕ ಕುಂಡಲಿಯ ಪ್ರಕಾರ, ಚುನಾವಣಾ ಕಾಲದ ಗ್ರಹಗತಿಯ ವಾತಾವರಣ ಪ್ರಕಾರ, ಸಾಮಾನ್ಯ ದೃಷ್ಟಿಕೋನದ ಪ್ರಕಾರ, ಸದ್ಯದ ಎಣ್ಣೆ-ಶೀಗೆ ಮೈತ್ರಿಗಳ ಒಕ್ಕೂಟ ಪ್ರಕಾರ ಮೋದಿಯವರು 285 ಸ್ಥಾನಗಳನ್ನಂತೂ ಬಿಜೆಪಿ ಪಕ್ಷಕ್ಕೆ ತಂದುಕೊಡುವುದಂತೂ ಖಚಿತ.
ಇದಕ್ಕೆ ಕಾರಣಗಳು ಅನೇಕ ದೃಷ್ಟಿಕೋನಗಳಲ್ಲಿದೆ. ಅದೇನಿದ್ದರೂ ಮುಂದಿನ ಪಂಚಾಂಗದ ಪ್ರಕಾರ ಮೋದಿಯವರು ಪ್ರಧಾನಮಂತ್ರಿಯಾಗಿ ಬರುವುದಂತೂ ನಿಶ್ಚಿತ. ಯಾಕೆಂದರೆ ಧನು ರಾಶಿಯ ಶನಿಯೂ ಬಲಿಷ್ಟನು, ವೃಶ್ಚಿಕ ಧನು ರಾಶಿ ಸಂಚಾರದ ಗುರುವೂ ಬಲಿಷ್ಟನು, ಉಚ್ಚ ಆರೋಹಿ ರಾಹು ಕೇತುಗಳೂ ಬಲಿಷ್ಟರು ಆಗಿರುವುದೇ ಮೋದಿಯವರ ಗೆಲುವಿಗೆ ಪೂರಕ ವಾತಾವರಣ.
ಅದೇನು ಬಿಜೆಪಿಗೆ ಮಾತ್ರ ಗ್ರಹಗಳ ಫಲವೋ? ಎಂದು ಕೇಳಬಹುದು. ಗ್ರಹಗಳು ಯಾವತ್ತೂ ಯಾರಿಗೂ ಕೆಡುಕು ಮಾಡುವುದಿಲ್ಲ. ಎಲ್ಲಾ ಗ್ರಹರೂ ಉತ್ತಮ ಫಲ ನೀಡುವವರೇ ಆಗಿರುತ್ತಾರೆ. ಯಾಕೆಂದರೆ ಅವರ ರಷ್ಮಿಕಿರಣಗಳಿಗೊಂದು ಧರ್ಮವಿದೆ. ಆ ಧರ್ಮಕ್ಕೆ ವಿರೋಧಿಸಿದವರಿಗೆ, ಗ್ರಹಸ್ಥಿತಿ ಉತ್ತಮ ಇದ್ದರೂ ಫಲ ನೀಡುವುದಿಲ್ಲ. ಬಿಜೆಪಿಯ ತತ್ವವು ಗ್ರಹರ ಗುಣಕ್ಕೆ ತಕ್ಕಂತೆ ಕಾಣುತ್ತದೆ.
ಬಿಜೆಪಿಯಲ್ಲಿ ಇರುವವರೆಲ್ಲರೂ ಉತ್ತಮ ಎಂದು ಹೇಳುವುದೂ ಇಲ್ಲ ಅಥವಾ ಬಿಜೆಪಿಯೇತರ ಪಕ್ಷದವರೆಲ್ಲರೂ ಅಧಮರು ಎಂದೂ ಹೇಳುವುದಿಲ್ಲ. ಅದರೊಳಗಿದ್ದ ಉತ್ತಮರಿಗೆ ಉತ್ತಮ ಫಲ ನೀಡುತ್ತದೆ. ಬಿಜೆಪಿಯೊಳಗಿದ್ದ ಅಧಮರಿಗೆ ಅನಿಷ್ಟ ಫಲವೂ ಸಿಗಬಹುದು. ಆದರೆ ಶೇಕಡಾವಾರು ಪ್ರಮಾಣ ನೋಡಿದಾಗ ಬಿಜೆಪಿಗೇ ಬಹುಮತ ಕಾಣುತ್ತದೆ. ಗ್ರಹರ ಧರ್ಮ ಎಂದರೆ ಜಗತ್ತಿನ ಸಕಲರಿಗೂ ತಮ್ಮ ರಷ್ಮಿಯಲ್ಲಿ ಬೇಧ ಮಾಡದಿರುವುದು. ರವಿಯು ಕಳ್ಳರಿಗೂ ತನ್ನ ಬೆಳಕು ನೀಡುತ್ತಾನೆ, ಸಜ್ಜನರಿಗೂ ನೀಡುತ್ತಾನೆ. ಅದು ರವಿಯ ಧರ್ಮ. ಹಾಗೆಯೇ ಬಿಜೆಪಿ ತತ್ವವು ಭಾರತೀಯ ಪರಂಪರೆಯನ್ನು ಮತ್ತೆ ಪ್ರಕಾಶಕ್ಕೆ ತರುವ ಸಂಕಲ್ಪಿತ ಧರ್ಮ ಮಾರ್ಗದಲ್ಲಿದೆ.
ಕಾಂಗ್ರೆಸ್ ಭಾರತೀಯ ಧರ್ಮಕ್ಕೆ ವಿರೋಧಿಯೇ?
ಹೌದು ಎನ್ನಬಹುದು. ಯಾಕೆಂದರೆ ಕೇವಲ ಅಯೋಧ್ಯೆಯ ವಿಚಾರವನ್ನೇ ನೋಡಿ. ಅದು ಈಗಲೂ ಬಾಬರನ ಪರವಾಗಿಯೇ ಇದೆ ಅಥವಾ ಬಾಬರ ಭಕ್ತರಿಗೆ ಬೆಂಬಲವಾಗಿಯೇ ಇದೆ. ತ್ರಿವಳಿ ತಲಾಕ್ ನಂತಹ ಅನಿಷ್ಟ ಪದ್ಧತಿಯ ಪರವಾಗಿಯೇ ಇದೆ. ದೇವಸ್ಥಾನಗಳ ನಿಧಿಗಳ(ತಿರುವನಂತಪುರ) ಶೋಧನೆಗೆ ಹೊರಟಿತ್ತು, ಪಾಪಿಗಳ ಜಯಂತಿಗೆ ಮುಂದಾಗಿತ್ತು, ಭಾರತ ದೇಶವನ್ನೇ ವಿಭಜನೆ ಮಾಡಿದ್ದ ಕಾಂಗ್ರೆಸ್, ಧರ್ಮ ವಿಭಜನೆಗೂ ಮುಂದಾಯಿತು. ಈಗ ತನ್ನ ಬಲ ಶೂನ್ಯತೆಗೆ ತಲುಪಿದಾಗ ಅಳಿದುಳಿದ ತುಂಡು ತುಂಡು ಪ್ರಾದೇಶಿಕ, ರಾಷ್ಟ್ರೀಯ ಪಕ್ಷಗಳನ್ನು ಒಟ್ಟು ಹಾಕಿ ಮೋದಿಯವರ ವಿರುದ್ಧ ಕದನಕ್ಕೆ ಮುಂದಾಗಿದೆ.
ಜ್ಯೋತಿಷ್ಯದಲ್ಲಿ ಪಾಪಗ್ರಹರು, ರವಿಯೊಡನೆ ಸೇರಿದ ಗ್ರಹರೂ ಪಾಪಗ್ರಹರಾಗುತ್ತಾರೆ ಎಂದು ಹೇಳಿದಂತೆ, ಕಾಂಗ್ರೆಸಿನ ಜತೆ ಸೇರಿರುವ ಪಕ್ಷಗಳಿಗೂ ಪಾಪತ್ವ ಬರುತ್ತದೆ. ಹಾಗಾಗಿ ಒಂದೆಡೆ ಪಾಪ ಗ್ರಹರು, ಇನ್ನೊಂದೆಡೆ ಶುಭಗ್ರಹರ ಗ್ರಹಯುದ್ಧವಾಗಿದೆ. ಇದರಲ್ಲಿ ಗೆಲುವು ಶುಭಗ್ರಹರದ್ದೇ ಆಗುತ್ತದೆ.
ಮೋದಿಗೆ ಹೆದರಿದ್ದಾರೆ ವಿರೋಧಿಗಳು
ಎರಡನೆಯ ಬಾರಿ ಮೋದಿಯವರು ಪ್ರಧಾನ ಮಂತ್ರಿಯಾದಾಗ ಏನೇನು ಸಾಧನೆ ಮಾಡಬಹುದು ಎಂಬ ಲೆಕ್ಕಾಚಾರ ಈಗಾಗಲೇ ವಿರೋಧಿಗಳಿಗೆ ಮನದಟ್ಟಾಗಿರುವುದರಿಂದಲೇ ಯಾವ ಕೃತ್ಯಕ್ಕೂ ತಯಾರಾಗಿರುವಂತೆ ಕಾಣುತ್ತದೆ. ಕರ್ಣಾರ್ಜುನ ಹಗೆಗಳನ್ನು ಮರೆತು ಒಟ್ಟು ಸೇರುತ್ತಿದ್ದಾರೆ. ಪಾಕ್ ಭಯೋತ್ಪಾದಕರ ನಂಟನ್ನೂ ಬೆಳೆಸುತ್ತಾ ದೇಶಕ್ಕೇ ಮಾರಕವಾಗಿ ಮೋದಿಯ ಪತನವನ್ನು ನೋಡುತ್ತಿದ್ದಾರೆ.
ಮಗ ಸತ್ತರೂ ಪರವಾಗಿಲ್ಲ, ಸೊಸೆ ವಿಧವೆಯಾಗಬೇಕು ಎಂಬಂತಿದೆ ಇವರ ಚಿಂತನೆ. ತಮ್ಮ ತಮ್ಮ ನೈಜ ಸಿದ್ಧಾಂತಗಳಿಗೆ ತಿಲಾಂಜಲಿಯನ್ನಿಟ್ಟು ಒಂದಾಗುತ್ತಿದ್ದಾರೆ. ಆದರೆ ನೀವೇ ಯೋಚಿಸಿ ನೋಡಿ. ಈ ಗುಂಪು ಏನಾದರೂ ಮೋದಿಯವರನ್ನು ಕೆಳಗಿಳಿಸಿದರೆ, ಈಗಿನ ಕರ್ನಾಟಕದ ಪರಿಸ್ಥಿತಿಗಿಂತಲೂ ಹೀನವಾಗಿ ದೇಶವ್ಯಾಪಿ ಬಂಡುಕೋರರು ನುಸುಳಬಹುದು. ನಂತರದ ದಿನಗಳಲ್ಲಿ ಶತಗತಾಯ ಹೋರಾಡಿ, ಬಲಿದಾನಿಗಳಾಗಿ ಆಡಳಿತಕ್ಕೆ ಬಂದರೂ ಭಾರತದ ಉತ್ತರ ದ್ರುವ ಚೂರಾಗಿ ಹೋಗುವುದು ಖಂಡಿತ.
ಮೋದಿಯವರಲ್ಲೇಕೆ ಭಯ?
ಮುಂದಿನ ದಿನಗಳಲ್ಲಿ ಮೋದಿಯವರು ಹಳೇ ಫೈಲುಗಳ ವಿಲೇವಾರಿ ಮಾಡಬಹುದು. ಕಳ್ಳರ, ಕಾಳಸಂತೆಯ sourceಗಳನ್ನು Cut ಮಾಡಬಹುದು. ಅನಧಿಕೃತವಾಗಿ ಸಂಪಾದಿಸಿದಂತಹ ಬಹುಭೂಮಿ ಧನಿಕರ ಭೂಮಿಯು ಸರಕಾರದ ಪಾಲಾಗಿ ಬಡವರಿಗೆ ಹಂಚಿಕೆಯಾದೀತು.
ಕೋರ್ಟುಗಳಲ್ಲಿ ಈಗಾಗಲೇ ತೀರ್ಮಾನವಾಗಿ ಇರುವ ಆದೇಶಗಳು ಅನುಷ್ಟಾನಕ್ಕೆ ಬರಬಹುದು. ಏಕರೂಪ ಶಾಸನ ತಂದು ಅಲ್ಪಸಂಖ್ಯಾತ ಸಜ್ಜನ ಪ್ರಜೆಗಳ ಮತಗಳು ಶಾಶ್ವತವಾಗಿ ಬಿಜೆಪಿ ಪಾಲಾದೀತು. ವಿದೇಶಿ ಆಕ್ರಮಣಕಾರಿ ಭಯೋತ್ಪಾದಕರ ನಿರ್ನಾಮಕ್ಕೆ ಮೋದಿಯವರ ಸಹಾಯ ಇನ್ನಷ್ಟು ಬಲವನ್ನು ನೀಡಬಹುದು.
ಇಂತಹ ನೂರಾರು ಶಾಸನಗಳು ಬಂದರೆ ಮುಂದೆ ಹಲವಾರು ದಶಕಗಳವರೆಗೆ ಯಾವ ವಿರೋಧ ಪಕ್ಷಗಳೂ ತಲೆಯೆತ್ತದು. ಇಂತಹ ಸೂಚನೆಗಳು ಸಿಕ್ಕಿರುವುದರಿಂದಲೇ, ಕರ್ನಾಟಕದ ದೊಡ್ಡಗೌಡರು ವಯಸ್ಸನ್ನು ಲೆಕ್ಕಿಸದೆ ಸಂಘಟನೆಗಿಳಿದಿರೋದು. ಈಶಾನ್ಯ ಭಾರತದ ದೀದಿ ಎಂದೇ ಹೆಸರಾದ ಮಮತ ಬ್ಯಾನರ್ಜಿಯ account close ಆದೀತು. ತುಂಡರ ಸೊತ್ತಿಗೆಯ TDP, AAP ಹೇಳ ಹೆಸರಿಲ್ಲದಂತೆ ಮಾಯವಾದೀತು. ಈ ಭಯದಿಂದಲೇ ಇವರೆಲ್ಲ ತಮ್ಮ ತಮ್ಮ ಹಳೇ ದ್ವೇಶ ಬದಿಗಿಟ್ಟು(ಮರೆಯುವುದಿಲ್ಲ!) ಒಂದಾಗ ಹೊರಟಿದ್ದಾರೆ.
ಎಚ್ಚರ ಭಾರತೀಯರೇ. 2019 ನಮ್ಮ ದೇಶದ ಸನಾತನ ಪರಂಪರೆಯ ಹಿಂದುತ್ವದ ನಿರ್ಣಾಯಕ ಪರ್ವ. ನಿಮ್ಮ ಜವಾಬ್ದಾರಿಯು ಮತ್ತೆ ಭಾರತವನ್ನು ಪ್ರಕಾಶಿಸುವಂತೆ ಮಾಡಬೇಕು. ಇಲ್ಲವೆಂದರೆ ದೀಪವೇ ಆರಿಹೋದೀತು.
Discussion about this post