ನವದೆಹಲಿ: ವಿಐಎಸ್’ಎಲ್ ಕಾರ್ಖಾನೆಗೆ 150.00 ಎಕರೆ ಗಣಿ ಮೀಸಲಿರಿಸಲು ಕೇಂದ್ರ ಸರ್ಕಾರದ ಅನುಮೋದನೆ ಕೂಡಲೇ ನೀಡುವಂತೆ ಮತ್ತು DISINVESTMENT ಲಿಸ್ಟ್’ನಿಂದ ಕೈ ಬಿಟ್ಟು ಅಗತ್ಯವಿರುವ ಬಂಡವಾಳ ತೊಡಗಿಸಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತಂತೆ ನಿಯೋಗದೊಂದಿಗೆ ನವದೆಹಲಿಯಲ್ಲಿ ಕೇಂದ್ರದ ಉಕ್ಕು ಸಚಿವ ಚೌಧರಿ ಬೀರೇಂದ್ರ ಸಿಂಗ್ ಮತ್ತು ಗಣಿ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ಎಸ್’ಎಐಎಲ್ ಅಧ್ಯಕ್ಷ ಅನಿಲ್ ಕುಮಾರ್ ಚೌಧರಿ ಅವರನ್ನು ಭೇಟಿಮಾಡಿ ವಿಐಎಸ್’ಎಲ್’ಗೆ ರಮನದುರ್ಗ ಪ್ರದೇಶದಲ್ಲಿ 150.00 ಎಕರೆ ಗಣಿ ಮಂಜೂರಾತಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಗಣಿ ಮಂಜೂರಾತಿಗಾಗಿ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸಿದ್ದು ಕೂಡಲೇ ಕೇಂದ್ರ ಗಣಿ ಮಂತ್ರಾಲಯದಿಂದ ಅನುಮೋದನೆ ನೀಡಬೇಕು ಹಾಗೂ ಬಂಡವಾಳ ಹಿಂತೆಗತದ ತೀರ್ಮಾನದಿಂದ ಕೈ ಬಿಟ್ಟು ಅಗತ್ಯವಿರುವ ಬಂಡವಾಳ ತೊಡಗಿಸುವಂತೆ ಮನವಿ ಸಲ್ಲಿಸಿ ಚರ್ಚಿಸಿದರು.
ಗಣಿ ಮಾತ್ರವಲ್ಲದೇ, ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ತಿಂಗಳಿಗೆ ೨೦ ದಿವಸ ಕೆಲಸ ಒದಗಿಸಬೇಕು ಎಂದು ಸಹ ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಸಚಿವರು ಗಣಿ ಮತ್ತು ಉಕ್ಕು ಸಚಿವಾಲಯ ಜಂಟಿ ಸಭೆ ಸೇರಿ ಗಣಿ ಮಂಜೂರಾತಿಗೆ ಅನುಮೋದನೆ ನೀಡಲಾಗುವುದು ಎಂದು ತಿಳಿಸಿದರು.. ಸೈಲ್ ಛರ‍್ಮನ್ ವಿಐಎಸ್’ಎಲ್ ಕಾರ್ಖಾನೆಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ದುರ್ಗಾಪುರ ಮತ್ತು ಭಿಲಾಯ್ ಕಾರ್ಖಾನೆಯಿಂದ ಹಂತ ಹಂತವಾಗಿ ನೀಡಲಾಗುವುದು. ಗುತ್ತಿಗೆ ಕಾರ್ಮಿಕರಿಗೆ ಇನ್ನು ಹೆಚ್ಚಿನ ಕೆಲಸ ನೀಡಲು ಶ್ರಮಿಸಲಾಗುವುದು ಹಾಗೂ ಆದಷ್ಟೂ ಶೀಘ್ರದಲ್ಲಿ ಭದ್ರಾವತಿಗೆ ಭೇಟಿ ನೀಡುವುದಾಗಿ ಭರವಸೆ ನೀಡಿದ್ದಾರೆ.
ಸಂಸದರೊಂದಿಗೆ ಭದ್ರಾವತಿ ನಗರ ಬಿಜೆಪಿ ಅಧ್ಯಕ್ಷ ಆನಂದ್ ಕುಮಾರ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಮಂಗೋಟ್ ರುದ್ರೇಶ್, ವಿಐಎಸ್’ಎಲ್ ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್, ಪ್ರಧಾನ ಕಾರ್ಯದರ್ಶಿ ಬಸಂತ್ ಕುಮಾರ್, ಸದಸ್ಯ ಪ್ರದೀಪ್ ಕುಮಾರ್ ಇದ್ದರು.
#ವಿಐಎಸ್’ಎಲ್_ಉಳಿಸಿ_ಭದ್ರಾವತಿ_ಉಳಿಸಿ

















