ಭೋಪಾಲ್: ಬಿಜೆಪಿ ಸರ್ಕಾರ ರಾಷ್ಟ್ರದಲ್ಲಿ ಅಸ್ಥಿತ್ವಕ್ಕೆ ಬಂದ ನಂತರ ಗೋ ಮಾತೆಗೆ ಪ್ರಾಶಸ್ತ್ಯ ದೊರೆಯಲು ಆರಂಭವಾಗಿದ್ದು ಒಳ್ಳೆಯ ಬೆಳವಣಿಗೆಯೇ. ಇದಕ್ಕೆ ಪೂರಕವಾಗಿ ಮಹಾರಾಷ್ಟ್ರದಲ್ಲಿ ಗೋ ಸಚಿವಾಲಯವನ್ನೇ ಆರಂಭಿಸುವಂತೆ ಕೂಗು ಎದ್ದಿದೆ.
ಈ ಕುರಿತಂತೆ ಆಗ್ರಹಿಸಿರುವ ಅಲ್ಲಿನ ಸಂಪುಟ ದರ್ಜೆ ಸಚಿವ ಅಖಿಲೇಶ್ವರಾನಂದ ಅವರು, ರಾಜ್ಯದಲ್ಲಿ ಗೋ(ಹಸು) ಸಚಿವಾಲಯ ಸೃಜನೆಗೆ ಶೀಘ್ರ ಮುಖ್ಯಮಂತ್ರಿಗಳ ಕ್ರಮಕೈಗೊಳ್ಳಬೇಕು ಎಂದಿದ್ದಾರೆ.
ಮಧ್ಯಪ್ರದೇಶ ಕೌ ಪ್ರೊಟೆಕ್ಷನ್ ಬೋಡ್ ಅಧ್ಯಕ್ಷರಾಗಿದ್ದ ಅಖಿಲೇಶ್ವರಾನಂದ ಅವರನ್ನು ಕಳೆದ ವಾರವಷ್ಟೇ ಸಂಪುಟ ದರ್ಜೆ ಸಚಿವರನ್ನಾಗಿ ಆಯ್ಕೆ ಮಾಡಲಾಗಿದೆ.
ಇದರ ಬೆನ್ನಲ್ಲೇ ಗೋ ರಕ್ಷಣೆ ಕುರಿತಾಗಿ ಕೂಗು ಬಲವಾಗುತ್ತಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಸಾಂವಿಧಾನಿಕ ಕ್ರಮ ಕೈಗೊಂಡು ಗೋ ಸಚಿವಾಲಯವನ್ನು ಸೃಜಿಸಬೇಕು. ಮುಖ್ಯಮಂತ್ರಿಗಳು ಸ್ವತಃ ಕೃಷಿಕರಾದ್ದರಿಂದ ಅವರಿಗೆ ಇದು ಅರ್ಥವಾಗುತ್ತದೆ. ಸಾರ್ವಜನಿಕರೂ ಸಹ ಇದನ್ನು ಸ್ವಾಗತಿಸಿದ್ದಾರೆ. ನನ್ನ ಈ ಅಭಿಪ್ರಾಯಕ್ಕೆ ಸಾರ್ವಜನಿಕ ಬೆಂಬಲವೂ ಸಹ ಇದೆ ಎಂದಿದ್ದಾರೆ.
Discussion about this post