ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಜಯದಶಮಿ ಅಂಗವಾಗಿ ರಾಷ್ಟೀಯ ಸ್ವಯಂ ಸೇವಕ ಸಂಘದ ತಾನಾಜಿ ಶಾಖೆ ವತಿಯಿಂದ ನಗರದಲ್ಲಿ ಪಥ ಸಂಚಲನ ನಡೆಯಿತು.
ನಗರದ ಕರ್ನಾಟಕ ಸಂಘದಿಂದ ಪ್ರಾರಂಭವಾಗಿ ನಗರದ ಪ್ರಮುಖ ನಗರದಲ್ಲಿ ಪಥ ಸಂಚಲನವು ನಡೆಯಿತು.
ಸಂಸದ ಬಿ.ವೈ. ರಾಘವೇಂದ್ರ ಅವರು ಗಣವೇಶ ಧರಿಸಿ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು. ಹಿರಿಯ ಸ್ವಯಂ ಸೇವಕರಾದ ಭಾಮಾ ಶ್ರೀಕಂಠ, ಗಿರೀಶ್ ಕಾರಂತ್, ಮುಖ್ಯ ಶಿಕ್ಷಕ್ ಪಣೀಶ್, ನಗರ ಕಾರ್ಯವಾಹ ಚೇತನ್ ಮತ್ತು ಸ್ವಯಂ ಸೇವಕರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post