ನ್ಯೂಯಾರ್ಕ್: ರೋವನ್ ಅಟ್ಕಿನ್ಸನ್ ಅಂದರೆ ಮಿಸ್ಟರ್ ಬೀನ್ ಕಾರು ಅಪಘಾತದಲ್ಲಿ ಮೃತರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ಹರಿದಾಡುತ್ತಿವೆ. ವಾಸ್ತವ ಎಂದರೆ, ಅವರು ಸತ್ತಿಲ್ಲ ಎಂಬುದು ಸತ್ಯ.
ಈ ಹಿಂದೆ 2017ರಲ್ಲೂ ಸಹ ಇದೇ ರೀತಿ ಸುದ್ದಿಯನ್ನು ಹಬ್ಬಿಸಲಾಗಿತ್ತು. ಚಿತ್ರೀಕರಣದ ಸ್ಟಂಟ್ ಮಾಡುವ ವೇಳೆ ಕಾರು ಅಪಘಾತವಾಗಿ ಮಿಸ್ಟರ್ ಬೀನ್ ಸತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಇದನ್ನು ಲಕ್ಷಾಂತರ ಮಂದಿ ಸಾಮಾಜಿಕ ಜಾಲತಾನದಲ್ಲಿ ಹಂಚಿಕೊಂಡಿದ್ದರು. ಆದರೆ, ಇಂದಿಗೂ ಮಿಸ್ಟರ್ ಬೀನ್ ಅಂದರೆ ರೋವನ್ ಅಟ್ಕಿನ್ಸನ್ ಬದುಕಿದ್ದಾರೆ ಎಂಬುದು ಸತ್ಯ.
ಈ ಕುರಿತಂತೆ ರೋವನ್ ಅಟ್ಕಿನ್ಸನ್ ಆಪ್ತರೊಬ್ಬರು ಟ್ವೀಟ್ ಮಾಡಿದ್ದು, ನಾನು ರೋವನ್ ಜೊತೆಯಲ್ಲಿ ಮಾತನಾಡಿದ್ದೇನೆ. ಅವರೇ ಸ್ವತಃ ತಾನು ಸತ್ತಿಲ್ಲ ಎಂಬುದನ್ನು ಎರಡು ಬಾರಿ ಖಚಿತಪಡಿಸಿಕೊಂಡಿದ್ದಾರೆ. ಅವರು ಸತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
I have it on good authority that Rowan Atkinson is not dead. He even double checked himself this morning…#RowanAtkinson #ThursdayThoughts pic.twitter.com/3p1ifw4Epj
— Nolene Dougan #TrustAllWomen #NowForNI #MAIGA (@NoleneDougan) July 19, 2018
ಸುಳ್ಳು ಸುದ್ದಿ ಯಾತಕ್ಕಾಗಿ ಹಬ್ಬುತ್ತಿದೆ ಗೊತ್ತಾ?
ವಾಸ್ತವವಾಗಿ ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವುದು ಒಂದು ಮೋಸದ ಜಾಲ. ಈ ರೀತಿ ಸುದ್ದಿಯನ್ನು ಇಂಟರ್‌ನೆಟ್‌ನಲ್ಲಿ ಹರಿಯ ಬಿಟ್ಟು ಅದನ್ನು ಓಪನ್ ಹಾಗೂ ಶೇರ್ ಮಾಡಿದವರ ಕಂಪ್ಯೂಟರ್‌ಗೆ ವೈರಸ್ ಹರಡಿಸುವ ಜಾಲ. ಅತ್ಯಂತ ಪ್ರಮುಖವಾಗಿ, ಶೇರ್ ಮಾಡುವವರ ಅಕೌಂಟ್ ಮೂಲಕ ಅವರ ಕ್ರೆಡಿಟ್ ಕಾರ್ಡ್ ಮಾಹಿತಿ ಕದಿಯುವ ದೊಡ್ಡ ಜಾಲ ಅದು.
ಇದಕ್ಕಾಗಿ ಈ ಸುದ್ದಿಯನ್ನು ಫಾಕ್‌ಸ್ ನ್ಯೂಸ್ ಲಿಂಕ್ ನಕಲು ಮಾಡಿ ಬ್ರೇಕಿಂಗ್ ನ್ಯೂಸ್ ಮಾದರಿಯಲ್ಲಿ ಪ್ರಕಟ ಮಾಡಲಾಗುತ್ತದೆ. ಇದರ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ದೊಡ್ಡ ಜಾಲವೇ ಅಡಗಿದೆ. ಹೀಗಾಗಿ, ಇಂತಹ ತಪ್ಪು ಮಾಹಿತಿಯನ್ನು ಹರಡಬೇಡಿ.
Discussion about this post