ಕಲ್ಪ ಮೀಡಿಯಾ ಹೌಸ್ | ಮೂಡಲಗಿ |
ತಾಲೂಕಿನ ಪಟಗುಂದಿ ಗ್ರಾಮದ ಕಡುಬಡತನದಲ್ಲಿ ಜನಿಸಿದ ಬಾಹುಬಲಿ ಅಣ್ಣಪ್ಪ ಹೊಸಮನಿ ದೇಶದ ಕಠೀಣ ಪರೀಕ್ಷೆಗಳಲ್ಲಿ ಒಂದಾದ “ಚಾರ್ಟೆಡ್ ಅಕೌಂಟೆಂಟ್ ಆಫ್ ಇಂಡಿಯಾ” ಪರೀಕ್ಷೆಯಲ್ಲಿ CA Exam ಉತ್ತಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದಾನೆ.
ಕಡು ಬಡತನದಲ್ಲಿ ಜನಿಸಿದ ಯುವಕ ಪ್ರೌಢ ಮತ್ತು ಪದವಿ ಶಿಕ್ಷಣವನ್ನು ಮೂಡಲಗಿಯ ಎಂ.ಇ.ಎಸ್ ಕಾಲೇಜಿನಲ್ಲಿ ಬಿ.ಕಾಮ್ ಪದವಿ ಪೂರೈಸಿ ನಂತರ ಸತತ 4 ವರ್ಷಗಳ ಹಗಲಿರುಳು ಪರಿಶ್ರಮದಿಂದ ಯಾವುದೇ ಕೋಚಿಂಗ್ ಪಡೆಯದೇ,ಸ್ವ ವಿದ್ಯಾಭ್ಯಾಸದಿಂದ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾರೆ. ಇದರಿಂದ ಪಟಗುಂದಿ ಗ್ರಾಮಕ್ಕೆ, ಮೂಡಲಗಿ ತಾಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















