ಕಲ್ಪ ಮೀಡಿಯಾ ಹೌಸ್ | ಮುಂಬೈ |
ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಮತ್ತೆ ಹೆಚ್ಚಿಸಿದ್ದು, ಇದರ ಪರಿಣಾಮ ಗ್ರಾಹಕರಿಗೆ ಬಿಸಿ ತಟ್ಟಲಿದೆ.
Monetary Policy Statement by Shri Shaktikanta Das, RBI Governor – February 08, 2023 https://t.co/KGPgzXbpWN
— ReserveBankOfIndia (@RBI) February 8, 2023
ಈ ಕುರಿತಂತೆ ಇಂದು ತ್ರೈಮಾಸಿಕ ವಿತ್ತೀಯ ನೀತಿಯನ್ನು ಪ್ರಕಟಿಸಿದ ಆರ್’ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು, ರೆಪೋ ದರವನ್ನು 25 ಮೂಲಾಂಕ ಏರಿಕೆ ಮಾಡಿ, ರೆಪೋ ದರವನ್ನು ಶೇ.6.5ಕ್ಕೆ ನಿಗದಿಪಡಿಸಲಾಗಿದೆ ಎಂದಿದ್ದಾರೆ.
ಜಾಗತಿಕ ಆರ್ಥಿಕತೆಯು ಕೆಲವು ತಿಂಗಳುಗಳ ಹಿಂದೆ ಇದ್ದಂತೆ ಈಗ ಕಠಿಣವಾಗಿ ಕಾಣುತ್ತಿಲ್ಲ. ಹಣದುಬ್ಬರದ ನಡುವೆ ಪ್ರಮುಖ ಆರ್ಥಿಕತೆಗಳಲ್ಲಿನ ಬೆಳವಣಿಗೆಯ ನಿರೀಕ್ಷೆಗಳು ಸುಧಾರಿಸಿದೆ. ಆದರೂ ಹಣದುಬ್ಬರವು ಇನ್ನೂ ಪ್ರಮುಖ ಆರ್ಥಿಕತೆಗಳಲ್ಲಿ ಗುರಿಗಿಂತ ಉತ್ತಮವಾಗಿದೆ. 2023-24ರ 4ನೆಯ ತ್ರೈಮಾಸಿಕದಲ್ಲಿ ಹಣದುಬ್ಬರ ಸರಾಸರಿ 5.6% ಎಂದು ನಿರೀಕ್ಷಿಸಲಾಗಿದೆ ಎಂದಿದ್ದಾರೆ.
Also read: ಟರ್ಕಿ ಭೂಕಂಪನ: ಸಾವಿನ ಸಂಖ್ಯೆ 8 ಸಾವಿರಕ್ಕೆ ಏರಿಕೆ, ಅವಶೇಷಗಳಡಿಯಿಂದ ಚಿತ್ಕಾರ
ರಿಸರ್ವ್ ಬ್ಯಾಂಕ್ 2023-24ಕ್ಕೆ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 6.4 ಎಂದು ನಿರೀಕ್ಷಿಸಿದೆ. 2023-24 ರ ನೈಜ ಜಿಡಿಪಿ ಬೆಳವಣಿಗೆಯು 6.4% ರಷ್ಟಾಗಿದೆ. ಮೊದಲ ತ್ರೈಮಾಸಿಕದಲ್ಲಿ ಶೇಕಡಾ 7.8, ಎರಡನೆಯ ತ್ರೆÊಮಾಸಿಕದಲ್ಲಿ ಶೇಕಡಾ 6.2, ಮೂರನೆಯ ತ್ರೆÊಮಾಸಿಕದಲ್ಲಿ ಶೇಕಡಾ 6 ಮತ್ತು ನಾಲ್ಕನೆಯ ತ್ರೈಮಾಸಿಕದಲ್ಲಿ ಶೇಕಡಾ 5.8ರಷ್ಟು ನಿರೀಕ್ಷಿಸಲಾಗಿದೆ ಎಂದರು.
ಇನ್ನು, ರೆಪೋ ದರದ ಏರಿಕೆಯಿಂದಾಗಿ ಗೃಹ ಸಾಲ, ವೈಯಕ್ತಿಕ ಸಾಲದ ಬಡ್ಡಿ ಹಾಗೂ ಆರ್’ಬಿಐನಿಂದ ಸಾಲದ ಬಡ್ಡಿ ಏರಿಕೆಯಾಗುವ ಸಾಧ್ಯತೆಯಿದ್ದು, ಇದರ ಬಿಸಿ ನೇರವಾಗಿ ಗ್ರಾಹಕರ ತಟ್ಟಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post