ಕಲ್ಪ ಮೀಡಿಯಾ ಹೌಸ್ | ಮುಂಬೈ |
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಾಲಿಡೇ ಕ್ಯಾಲೆಂಡರ್ ಪ್ರಕಾರ ಡಿಸೆಂಬರ್ ತಿಂಗಳಿನಲ್ಲಿ ಬರೋಬ್ಬರಿ 12 ದಿನಗಳ ಕಾಲ ಬ್ಯಾಂಕ್’ಗಳಿಗೆ ರಜೆ ಇರಲಿದೆ.
ಎರಡನೆಯ ಶನಿವಾರ, ನಾಲ್ಕನೆಯ ಶನಿವಾರ ಹಾಗೂ ಭಾನುವಾರಗಳು ಈ 12 ದಿನಗಳ ರಜೆಯ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ. ಈ ಡಿಸೆಂಬರ್ ತಿಂಗಳಿನಲ್ಲಿ ವಿಶೇಷ ದಿನಗಳಿರುವುದರಿಂದ ಬ್ಯಾಂಕ್ ರಜೆ ಇರುತ್ತದೆ. ಆದರೆ, ಎಲ್ಲಾ ಬ್ಯಾಂಕುಗಳಲ್ಲಿ ಹಾಗೂ ಎಲ್ಲಾ ರಾಜ್ಯಗಳಲ್ಲಿ 12 ದಿನಗಳ ಕಾಲ ರಜೆ ಇರುವುದಿಲ್ಲ.
ರಾಜ್ಯದಿಂದ ರಾಜ್ಯಕ್ಕೆ ಬ್ಯಾಂಕ್ ರಜೆಗಳು ಬದಲಾಗಲಿವೆ. ಗೆಜೆಟೆಡ್ ರಜಾದಿನಗಳು ಮಾತ್ರ ದೇಶದಾದ್ಯಂತ ಎಲ್ಲಾ ಬ್ಯಾಂಕ್’ಗಳಿಗೆ ಅನ್ವಯವಾಗಲಿವೆ. ಗೆಜೆಟೆಡ್ ರಜಾದಿನಗಳಲ್ಲಿ ಶನಿವಾರ ಮತ್ತು ಭಾನುವಾರಗಳು ಸೇರಿವೆ.
ಹೀಗಿದೆ ಬ್ಯಾಂಕ್ ರಜಾ ದಿನಗಳ ಪಟ್ಟಿ:
ಡಿ.3: ಫೀಸ್ಟ್ ಆಫ್ ಸೇಂಟ್ ಫ್ರಾನ್ಸಿಸ್ ಗ್ಸೇವಿಯರ್
ಡಿ.18: ಯು ಸೋಸೋ ಥಾಮ್ ಡೆತ್ ಆನಿವರ್ಸರಿ
ಡಿ.24: ಕ್ರಿಸ್’ಮಸ್ ಈವ್
ಡಿ.25: ಕ್ರಿಸ್’ಮಸ್
ಡಿ.27: ಕ್ರಿಸ್’ಮಸ್ ಸೆಲೆಬ್ರೇಷನ್
ಡಿ.30: ಯು ಕಿಯಾಂಗ್ ನಾಂಗ್’ಬಹ್
ಡಿ.31: ನ್ಯೂ ಇಯರ್ ಈವ್
ಈ ಮೇಲ್ಕಂಡ ರಜೆಗಳ ಹೊರತಾಗಿ ಡಿಸೆಂಬರ್ ತಿಂಗಳ ರಜೆ ಪಟ್ಟಿಯಲ್ಲಿ ಎರಡನೆಯ ಶನಿವಾರ, 4ನೆಯ ಶನಿವಾರ ಹಾಗೂ ಭಾನುವಾರಗಳು ಸೇರಿವೆ.
ಡಿ.5- ಭಾನುವಾರ
ಡಿ.11- ಎರಡನೆಯ ಶನಿವಾರ
ಡಿ.12- ಭಾನುವಾರ
ಡಿ.19- ಭಾನುವಾರ
ಡಿ.25- ನಾಲ್ಕನೆಯ ಶನಿವಾರ ಕ್ರಿಸ್’ಮಸ್
ಡಿ.26- ಭಾನುವಾರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post