ಕಲ್ಪ ಮೀಡಿಯಾ ಹೌಸ್ | ಮುಂಬೈ |
ಕಾಲಿವುಡ್ ನಟಿ ಆಕಾಂಕ್ಷಾ ಮೋಹನ್ Actress Akanksha Mohan ಮುಂಬೈನ ಲಾಡ್‌ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಎರಡು ವಾರಗಳ ಹಿಂದೆಯಷ್ಟೇ ಬಿಡುಗಡೆ ಆಗಿರುವ ಹಿಂದಿ ಸಿನಿಮಾ ‘ಸಿಯಾ’ದ ನಾಯಕಿ ಆಕಾಂಕ್ಷಾ ಮುಂಬೈನ ವೆರ್ಸೋವಾದಲ್ಲಿರುವ ಹೋಟೆಲ್ ನಲ್ಲಿ ಸೆಪ್ಟಂಬರ್ 28 ರಂದು ರೂಮ್ ಪಡೆದಿದ್ದರು. ಸೆ.30ರಂದು ಶವವಾಗಿ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿತ್ತು. ಆದರೆ, ಶವ ಸಿಕ್ಕ ರೂಮ್ ನಲ್ಲಿ ಡೆತ್ ನೋಟ್ ಕೂಡ ಪತ್ತೆಯಾಗಿದ್ದು ತನ್ನ ಸಾವಿಗೆ ತಾನೇ ಕಾರಣ ಎಂದು ಅದರಲ್ಲಿ ಬರೆದಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ ಸೆ.28ರಂದು ಬೆಳಗ್ಗೆ ಎರಡು ದಿನಗಳವರೆಗೆ ಆಕಾಂಕ್ಷಾ ರೂಮ್ ಬುಕ್ ಮಾಡಿದ್ದರು. ಎರಡು ದಿನಗಳ ಬಳಿಕವೂ ರೂಮ್ ಬಾಗಿಲು ತೆರೆಯದೇ ಇರುವ ಕಾರಣಕ್ಕಾಗಿ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಬಂದ ಬಳಿಕೆ ಬಾಗಿಲು ತೆರೆದರು ಆಕಾಂಕ್ಷಾ ಬಾಡಿ ಪತ್ತೆಯಾಗಿದೆ. ಅಲ್ಲಿಯೇ ಇದ್ದ ಡೆತ್ ನೋಟ್ ನಲ್ಲಿ ನನಗೆ ನೆಮ್ಮದಿ ಬೇಕು. ಹಾಗಾಗಿ ಸಾಯುತ್ತಿದ್ದೇನೆ. ನನ್ನ ಕ್ಷಮಿಸಿ, ನನ್ನ ಸಾವಿಗೆ ಯಾರೂ ಕಾರಣವಲ್ಲ’ ಎಂದು ಬರೆದಿದ್ದಾರೆ.
Also read: ಜಾತಕ ದೋಷ ಪರಿಹರಿಸಿಕೊಳ್ಳಲು ಜೈಲು ಬಾಡಿಗೆಗೆ ದೊರೆಯಲಿದೆ! ಎಲ್ಲಿ ಗೊತ್ತಾ? ಇಲ್ಲಿದೆ ಮಾಹಿತಿ
ಮುಂಬೈ ನಗರದ ಲೋಖಂಡವಾಲಾ ಪ್ರದೇಶದ ಯಮುನಾ ನಗರದ ಸೊಸೈಟಿಯಲ್ಲಿ ಆಕಾಂಕ್ಷಾ ಒಂಟಿಯಾಗಿ ವಾಸವಿದ್ದರು ಎಂದು ಹೇಳಲಾಗುತ್ತಿದೆ. ಅಲ್ಲದೇ, ಮಾನಸಿಕ ಖಿನ್ನತೆಗೂ ಅವರು ಒಳಗಾಗಿದ್ದರು ಎನ್ನಲಾಗಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















