ಕಲ್ಪ ಮೀಡಿಯಾ ಹೌಸ್
ಮುಂಬೈ: ವಸತಿ ಕಟ್ಟಡ ಕುಸಿದ ಪರಿಣಾಮ ಏಳು ಮಂದಿ ಸಾವಿಗೀಡಾಗಿರುವ ಘಟನೆ ನಿನ್ನೆ ರಾತ್ರಿ ಮಹಾರಾಷ್ಟ್ರದ ಠಾಣೆ ಪ್ರದೇಶದಲ್ಲಿ ನಡೆದಿದೆ.
ಕಟ್ಟಡದ ಸ್ಲ್ಯಾಬ್ ಕುಸಿದ ಕಾರಣ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದು, ಠಾಣೆಯ ಉಲ್ಲಾಸ್ ನಗರದಲ್ಲಿ ನಡೆದ ಈ ದುರಂತದಲ್ಲಿ ಕಟ್ಟಡದ ಅವಶೇಷಗಳ ಕೆಳಗಿ ಸಿಲುಕಿಕೊಂಡಿದ್ದ ಏಳು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನಷ್ಟು ಮಂದಿ ಸಿಲುಕಿ ಕೊಂಡಿರುವುದಾಗಿ ಶಂಕಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಠಾಣೆ ಪಾಲಿಕೆ ಮಾಹಿತಿ ನೀಡಿದೆ.
ನೆಹರೂ ಚೌಕ್ ಪ್ರದೇಶದಲ್ಲಿರುವ ಸಾಯಿ ಸಿದ್ದಿ ಕಟ್ಟಡದ ೪ನೆಯ ಮಹಡಿ ಸ್ಲ್ಯಾಬ್ ಕುಸಿದ ಕಾರಣ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರಾದೇಶಿಕ ವಿಪತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥ ಸಂತೋಷ್ ಕದಮ್ ತಿಳಿಸಿದ್ದಾರೆ. ಸ್ಥಳದಲ್ಲಿ ರಕ್ಷಣಾ ತಂಡಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿಯವರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post