ಕಲ್ಪ ಮೀಡಿಯಾ ಹೌಸ್ | ಮುಂಬೈ |
ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಕರೆ ಮಾಡಿದ ಮಹಿಳೆಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ 34 ವರ್ಷದ ಮಹಿಳೆಯೊಬ್ಬರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುತ್ತೇವೆ. ಇದಕ್ಕಾಗಿ ಯೋಜನೆ ಸಿದ್ದವಾಗಿದ್ದು, ಅಸ್ತ್ರ (ವೆಪನ್) ಸಿದ್ದವಾಗಿವೆ ಎಂದು ಬೆದರಿಕೆ ಹಾಕಿದ್ದಾರೆ.
ಮಾಹಿತಿಯ ಅನ್ವಯ ಕರೆ ಮಾಡಿದ ಮಹಿಳೆ ಪ್ರಧಾನಿಯನ್ನು ಕೊಲ್ಲಲು ಯೋಜನೆ ರೂಪಿಸಿದ್ದರು ಎಂದು ಹೇಳಲಾಗಿದೆ. ಕರೆಯ ಜಾಡನ್ನು ಹಿಡಿದು ತನಿಖೆ ನಡೆಸಿದ ಪೊಲೀಸರು ಬೆದರಿಕೆ ಕರೆ ಮಾಡಿದ 34 ವರ್ಷದ ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Also read: ಘೋರಾತಿಘೋರ | ಆಸ್ಪತ್ರೆ ಟಾಯ್ಲೆಟ್’ನಲ್ಲಿ ನವಜಾತ ಶಿಶು ಎಸೆದು ಫ್ಲಶ್ ಮಾಡಿದ ರಾಕ್ಷಸರು
ಈಕೆಯಿಂದ ಹೆಚ್ಚಿನ ಮಾಹಿತಿಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದೇ ವೇಳೆ ಪ್ರಾಥಮಿಕ ವರದಿಗಳಂತೆ ಕರೆ ಮಾಡಿದ ಮಹಿಳೆ ಮಾನಸಿಕವಾಗಿ ತೊಂದರೆಗೊಳಗಾಗಬಹುದು ಎಂದು ಹೇಳಲಾಗಿದೆ. ಆದರೆ ಅಧಿಕಾರಿಗಳು ಪ್ರಮಾಣಿತ ತನಿಖಾ ಕಾರ್ಯವಿಧಾನಗಳನ್ನು ಅನುಸರಿಸುತ್ತಿದ್ದಾರೆ.
ಪೊಲೀಸರು ಸಂಪೂರ್ಣ ತನಿಖೆಯನ್ನು ಪ್ರಾರಂಭಿಸಿದ್ದು, ಶಂಕಿತರನ್ನು ಪತ್ತೆಹಚ್ಚುವಾಗ ಎಲ್ಲಾ ಪ್ರೋಟೋಕಾಲ್’ಗಳನ್ನು ಅನುಸರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post