ಕಲ್ಪ ಮೀಡಿಯಾ ಹೌಸ್ | ನವದೆಹಲಿ/ಉತ್ತರ ಪ್ರದೇಶ |
ಉತ್ತರ ಪ್ರದೇಶದ ಪ್ರಶಾಂತ್ ವಿಹಾರ್ #Prashanth Vihar ಪ್ರದೇಶದ ಪಿವಿಆರ್ #PVR ಬಳಿಯಲ್ಲಿ ಇಂದು ಭಾರೀ ಸ್ಫೋಟ ಸಂಭವಿಸಿದ್ದು, ವ್ಯಕ್ತಿಯೊಬ್ಬರಿಗೆ ಗಾಯಗಳಾಗಿರುವ ಘಟನೆ ನಡೆದಿದೆ.
ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ #Arvind Kejriwal ಅವರು ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಸಮಯದಲ್ಲಿ ದೆಹಲಿಯು ವಿಶ್ವದ ಅತ್ಯಂತ ಅಸುರಕ್ಷಿತ ನಗರ ಎಂದು ಹೇಳುವ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಸ್ಫೋಟದಲ್ಲಿ ಒಬ್ಬ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಪ್ರಶಾಂತ್ ವಿಹಾರ್ ಪ್ರದೇಶದಿಂದ ಇಂದು ಬೆಳಗ್ಗೆ 11.48 ಕ್ಕೆ ಸ್ಫೋಟದ ಕುರಿತು ಕರೆ ಸ್ವೀಕರಿಸಲಾಗಿದೆ. ಅಗ್ನಿಶಾಮಕ ಟೆಂಡರ್’ಗಳು ಸ್ಥಳಕ್ಕೆ ತಲುಪಿದ್ದು, ಕಾರ್ಯಾಚರಣೆ ನಡೆಸಿವೆ.
Also read: ಮೋದಿ ಹತ್ಯೆಗೆ ಯೋಜನೆ, ಗನ್ ಸಿದ್ದವಾಗಿದೆ! ಬೆದರಿಕೆ ಕರೆ ಮಾಡಿದ ಮಹಿಳೆ ಅರೆಸ್ಟ್
ದೆಹಲಿ ಪೊಲೀಸ್ ಮೂಲಗಳ ಪ್ರಕಾರ, ಅ.20 ರಂದು ಪ್ರಶಾಂತ್ ವಿಹಾರ್ ಸಿಆರ್’ಪಿಎಫ್ ಶಾಲೆಯ ಬಳಿ ಸಂಭವಿಸಿದ ಸ್ಫೋಟವನ್ನು ಹೋಲುತ್ತದೆ. ಆದರೆ ಇದು ಕಡಿಮೆ ತೀವ್ರತೆಯ ಸ್ಫೋಟ ಎಂದು ವರದಿಯಾಗಿದೆ.
ಸ್ಫೋಟದಿಂದಾಗಿ ಶಾಲೆಯ ಗೋಡೆ ಮತ್ತು ಕಿಟಕಿ ಗಾಜುಗಳು ಧ್ವಂಸಗೊAಡಿವೆ. ಘಟನೆಯನ್ನು ಭಯೋತ್ಪಾದನೆ ಸೇರಿದಂತೆ ಹಲವು ಕೋನಗಳಿಂದ ತನಿಖೆ ನಡೆಸಲಾಗಿದ್ದು, ಸಿಗರೇಟ್’ನಿಂದಾಗಿ ಸ್ಫೋಟ ಸಂಭವಿಸಿದೆ ಎಂಬುದು ಇದೀಗ ಬಹಿರಂಗವಾಗಿದೆ. ವ್ಯಕ್ತಿಯೊಬ್ಬ ತನ್ನ ನಾಯಿಯನ್ನು ನಡೆದುಕೊಂಡು ಹೋಗುತ್ತಿದ್ದಾಗ ತಾನು ಸೇದುತ್ತಿದ್ದ ಸಿಗರೇಟಿನ ಉಳಿದ ಭಾಗವನ್ನು ಆಕಸ್ಮಿಕವಾಗಿ ಕಸದ ರಾಶಿಗೆ ಎಸೆದಿದ್ದಾನೆ ಎಂದೂ ಸಹ ವರದಿಯಾಗಿದೆ.
ಇದು ಸುಧಾರಿತ ಸ್ಪೋಟಕ ಸಾಧನ(ಐಇಡಿ) ಎಂದು ಶಂಕಿಸಲಾಗಿದ್ದು, ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ಕಂದು ಬಣ್ಣದ ಪ್ಯಾಕೆಟ್’ನಲ್ಲಿ ಸುತ್ತಿದ ಸ್ಫೋಟಕವನ್ನು ಮೂರು ರಾಸಾಯನಿಕಗಳಾದ ಹೈಡ್ರೋಜನ್ ಪೆರಾಕ್ಸೈಡ್, ಬೋರೇಟ್ ಮತ್ತು ನೈಟ್ರೇಟ್ ಸುಮಾರು 2 ಕೆಜಿಗಿಂತ ಹೆಚ್ಚು ತೂಕದ ಮಿಶ್ರಣವನ್ನು ಬಳಸಿ ತಯಾರಿಸಲಾಗಿದೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post