ಕಲ್ಪ ಮೀಡಿಯಾ ಹೌಸ್ | ಮುಂಬೈ |
ಬಹು ಭಾಷಾ ಗಾಯಕಿ, ಇಂಡಿಯನ್ ಪಾಪ್ ಐಕಾನ್ ಉಷಾ ಉತ್ತುಪ್ #Usha Uthup ಅವರ ಪತಿ ಜಾನಿ ಚಾಕೋ ಉತ್ತುಪ್ (೭೮) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಜಾನಿ ಚಾಕೋ ಕೋಲ್ಕತಾದ ನಿವಾಸದಲ್ಲಿ ಮನೆ ನೋಡುವಾಗ ಸ್ಥಳದಲ್ಲಿ ಕುಸಿದು ಬಿದ್ದಿದ್ದರು ಎನ್ನಲಾಗಿದೆ. ತತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ ಎನ್ನಲಾಗಿದೆ.
Also read: ತಾಯಿಯ ಕೈಯಿಂದ ಜಾರಿ ಬಿದ್ದು 8 ತಿಂಗಳ ಮಗು ಸಾವು | ಘಟನೆ ನಡೆದಿದ್ದೆಲ್ಲಿ?
ಜಾನಿ ಚಾಕೋ ಅವರು ಉಷಾ ಉತ್ತುಪ್ ಅವರ ಎರಡನೇ ಪತಿ ಆಗಿದ್ದು, ಟೀ ಪ್ಲಾಂಟೇಶನ್ ನೋಡಿಕೊಳ್ಳುತ್ತಿದ್ದರು. ಈ ಜೋಡಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. ಜುಲೈ 9ರಂದು ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಸ್ಥರು ತಿಳಿಸಿದ್ದಾರೆ.
ಪ್ರಸ್ತುತ ವರ್ಷ ಉಷಾ ಉತ್ತುಪ್ ಅವರಿಗೆ ಸಂಗೀತ ಕ್ಷೇತ್ರದಲ್ಲಿ ನೀಡಿರುವ ಕೊಡುಗೆಗಾಗಿ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣ ನೀಡಿ ಗೌರವಿಸಲಾಗಿತ್ತು. ಕನ್ನಡ, ತಮಿಳು, ಹಿಂದೆ, ತೆಲುಗು, ಮಲಯಾಳಂ, ಒಡಿಯಾ ಮತ್ತು ಬೆಂಗಾಲಿ ಭಾಷೆಯಲ್ಲಿ ಹಲವು ಗೀತೆಗಳನ್ನು ಹಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post