ಕಲ್ಪ ಮೀಡಿಯಾ ಹೌಸ್ | ಮುಂಜಾನೆ ಸುವಿಚಾರ |
ನಮ್ಮ ಕೆಲಸದ ಮಾರ್ಗ ಮತ್ತೊಬ್ಬರಿಗೆ ಹಿಡಿಸದೆ ಇರಬಹುದು, ನಾವು ಮಾಡುವ ಕೆಲಸವನ್ನು ಮಾತ್ರ ಬಿಡಬಾರದು.
ಹಿಡಿದ ಕೆಲಸ ಮುಗಿಸುವವರೆಗೂ ಬಿಡಬಾರದು. ನಾವು ಮಾಡುವ ಕೆಲಸದ ರೀತಿ ನಮ್ಮ ಕೆಲಸವನ್ನು ನೋಡಿ ಅಸಮಾಧಾನ ಪಡಿಸುವವರು, ಆಡಿ ಕೊಂಡು ನಗುವವರು, ತಪ್ಪನ್ನು ಹುಡುಕಿ ಹಾಸ್ಯ ಮಾಡುವವರು ಇದ್ದೇ ಇರುತ್ತಾರೆ. ನಮ್ಮ ಸಂಕಲ್ಪ ದೃಢವಾಗಿಟ್ಟುಕೊಂಡು ಉತ್ತಮ ಕೆಲಸ ಮಾಡುವಾಗ ಬರುವ ಯಾವುದೇ ಅಡೆ ತಡೆ ತೊಂದರೆಗಳಿಂದ ವಿಚಲಿತರಾಗದೆ ಕಾರ್ಯವನ್ನು ಮುನ್ನಡೆಸಬೇಕು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 























