ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕುಡಿಯಲು ಹಣಕೊಡದ ಕಾರಣಕ್ಕೆ ಮದ್ಯವ್ಯಸನಿ ಮೊಮ್ಮಗ ತನ್ನ ಅಜ್ಜಿಯನ್ನು ಕುಡುಗೋಲಿನಿಂದ ಹೊಡೆದು ಕೊಲೆ ಮಾಡುವುದರ ಜೊತೆಗೆ ಅದೇ ಬೀದಿಯ ಮತ್ತೊಬ್ಬ ಮುದುಕಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತಾಲೂಕಿನ ತಾಶ್ಕೆಂಟ್ ನಗರದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.
ಹೊಸಮನೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ತಾಷ್ಕೆಂಟ್ ನಗರದಲ್ಲಿ ಬುದವಾರ ಬೆಳಿಗ್ಗೆ ಸುಮಾರು 11 ಗಂಟೆ ಸಮಯದಲ್ಲಿ ಗಾರೆ ಕೆಲಸ ಮಡುವ ಅರುಣ್ ಕುಮಾರ್ ಎಂಬ 28ವರ್ಷ ವಯಸ್ಸಿನ ಯುವಕ ಮದ್ಯ-ಗಾಂಜಾ ಸೇವನೆಗೆ ತನ್ನ ಅಜ್ಜಿ ಕಾಳಿಯಮ್ಮ (75)ನ ಬಳಿ ಹಣ ಕೇಳಿದ್ದಾನೆ. ಆಕೆ ಹಣ ಕೊಡಲು ನಿರಾಕರಿಸಿದ ಕಾರಣ ಕುಡುಗೋಲಿನಿಂದ ಆಕೆಯ ತಲೆಗೆ ಮತ್ತು ಕುತ್ತಿಗೆಗೆ ಹೊಡೆದ ಕಾರಣ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಅವರ ಸಂಬಂಧಿ ಪಾಪಮ್ಮ(72)ಅವರ ಮೇಲೆಯೂ ಸಹ ಮಾರಣಾಂತಿಕ ಹಲ್ಲೆನಡೆಸಿದ ಪರಿಣಾಮ ಆಕೆ ತೀವ್ರವಾಗಿ ಅಸ್ವಸ್ಥಗೊಂಡಿದ್ದು ಆಕೆಯನ್ನು ಭದ್ರಾವತಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.
ಹೊಸಮನೆ ಪೋಲಿಸ್ ಠಾಣೆಯ ಪೋಲಿಸರು ಘಟನಾ ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮಕೈಗೊಂಡಿದ್ದಾರೆ.
Discussion about this post