ಕಲ್ಪ ಮೀಡಿಯಾ ಹೌಸ್ | ಕಾರವಾರ |
ಶಾಲಾ ವಿದ್ಯಾರ್ಥಿನಿಯರ ದುರಂತ ಸಾವಿನ ನಂತರ ನಿರ್ಬಂಧ ವಿಧಿಸಲಾಗಿದ್ದ ಸುಪ್ರಸಿದ್ದ ಪ್ರವಾಸಿ ತಾಣ ಮುರ್ಡೇಶ್ವರ ಬೀಚ್ #MurdeshwaraBeach ಮತ್ತೆ ಓಪನ್ ಆಗಿದೆ.
ಕಡಲ ತೀರದಲ್ಲಿ ಕೋಲಾರ #Kolar ಮೂಲದ ಶಾಲಾ ವಿದ್ಯಾರ್ಥಿನಿಯರ ಸಾವಾದ ನಂತರ ಜಿಲ್ಲಾಡಳಿತ ಕಡಲ ತೀರಕ್ಕೆ ನಿರ್ಬಂಧ ವಿಧಿಸಿತ್ತು. ಇದೀಗ ಕಡಲ ತೀರದಲ್ಲಿ #Beach ಪ್ರವಾಸಿಗರ ಸುರಕ್ಷತೆ ಕ್ರಮ ಕೈಗೊಳ್ಳಲಾಗಿದ್ದು, ಸಮುದ್ರಕ್ಕೆ ಇಳಿಯುವರಿಗೆ ಸ್ವಿಮಿಂಗ್ ಜೋನ್ ವ್ಯವಸ್ಥೆ ಮಾಡಲಾಗಿದೆ.
ಏನೆಲ್ಲಾ ಸುರಕ್ಷತೆ ಕ್ರಮ ಕೈಗೊಳ್ಳಲಾಗಿದೆ?
ಪ್ರವಾಸಿಗರ ಸುರಕ್ಷತೆಗಾಗಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಹಲವು ಕ್ರಮಗಳನ್ನು ಕೈಗೊಂಡಿದೆ.
ಹೆಚ್ಚುವರಿಯಾಗಿ 6 ಲೈಫ್ ಗಾರ್ಡ್’ಗಳ #LifeGuard ನೇಮಕ ನೇಮಕ ಮಾಡಲಾಗಿದ್ದು ಲೈಫ್ ಗಾರ್ಡ್’ಗಳಿಗೆ ವಿಶೇಷ ಜೀವ ರಕ್ಷಕ ಸಾಧನ ಪೂರೈಕೆ ಮಾಡಲಾಗಿದೆ.
ಇದರ ಜೊತೆಗೆ ಕಡಲ ತೀರದಲ್ಲಿ 70 ಕ್ಕೂ ಹೆಚ್ಚು ಅನಧಿಕೃತ ಗೂಡಂಗಡಿ ತೆರವು ಮಾಡಿದ್ದು, ಕಾರು ಮತ್ತು ಭಾರಿ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಸುರಕ್ಷತೆಗಾಗಿ ವಾಚ್ ಟವರ್, ಸೈರನ್ ಹಾಗೂ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಕಲ್ಪಿಸಲಾಗಿದೆ.
21 ದಿನಗಳ ಬಳಿಕ ನಿರ್ಬಂಧ ತೆರವು ಮಾಡಿದ ಒಂದೇ ಗಂಟೆಯಲ್ಲಿ ಬೀಚ್’ಗೆ ಸಾವಿರಕ್ಕೂ ಹೆಚ್ಚು ಜನ ಪ್ರವಾಸಿಗರು ಭೇಟಿ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post