ನವದೆಹಲಿ: ಹಿಂದೂ ಯುವತಿಯನ್ನು ವಿವಾಹವಾಗಲು ಯತ್ನಿಸಿದ ಮುಸ್ಲಿಂ ಯುವಕನಿಗೆ ಕೋರ್ಟ್ ಆವರಣದಲ್ಲೇ ಸಾರ್ವಜನಿಕವಾಗಿ ಹೀನಾಯವಾಗಿ ಥಳಿಸಿದ ಘಟನೆ ನಡೆದಿದೆ.
ಗಾಜಿಯಾಬಾದ್ ಕೋರ್ಟ್ ಅವರಣದಲ್ಲಿ ಈ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭೋಪಾಲ್ ನಿವಾಸಿ ಶಾಹಿಲ್ ಹಿಂದೂ ಯುವತಿಯೊಂದಿಗೆ ವಿವಾಹವಾಗಲು ಕೋರ್ಟ್ಗೆ ತೆರಳಿದ್ದಾನೆ. ವಿವಾಹದ ನಿಯಮಾವಳಿಗಳನ್ನು ಕೋರ್ಟ್ನಲ್ಲಿ ವಿಚಾರಿಸಿ, ವಿವಾಹಕ್ಕೆ ಸಿದ್ದನಾಗುತ್ತಿದ್ದ ಆತ. ಈ ವೇಳೆ ಆಗಮಿಸಿದ ಗುಂಪೊಂದು ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿ, ಯುವಕನನ್ನು ರಕ್ಷಿಸಿದ್ದಾರೆ.
ಯುವಕ ಹಾಗೂ ಯುವತಿ ನೋಯ್ಡಾದಲ್ಲಿ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಇಬ್ಬರೂ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಗಾಜಿಯಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.