ನವದೆಹಲಿ: ನನ್ನ ಮೂಲ ಸಿದ್ದಾಂತ ಹಾಗೂ ಮೌಲ್ಯಗಳು ಎಂದಿಗೂ ಬದಲಾಗಲು ಸಾಧ್ಯವಿಲ್ಲ ಹಾಗೂ ಯಾವುದೇ ರೀತಿಯ ಆಂತರಿಕ ಶಕ್ತಿಗಳ ಇದನ್ನು ಅಲುಗಾಡಿಸಲೂ ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ಯಾವುದೇ ರೀತಿಯ ಬಾಹ್ಯ ಶಕ್ತಿಗಳು ನನ್ನನ್ನು ಹಾಗೂ ನನ್ನ ಸಿದ್ದಾಂತಗಳನ್ನು ಬದಲಿಸುವುದು ಅಸಾಧ್ಯದ ಮಾತು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ತಾವು ಪ್ರಾಮಾಣಿಕ ಹಿನ್ನೆಲೆಯಿಂದ ಬಂದವರು ಹಾಗೂ ಪ್ರಾಮಾಣಿಕತೆಯೇ ತಮ್ಮ ನಂಬಿಕೆ, ಭೂಮಿ ತಾಯಿಯ ಆರ್ಶೀವಾದದಿಂದ ನಾನು ಬೆಳೆದು, ಸಾಧನೆ ಮಾಡುತ್ತಿದ್ದೇನೆ ಎಂಬ ನಂಬಿಕೆ ತಮಗಿದೆ. ತಾವು ಎಂದಿಗೂ ತಮ್ಮ ಭೂಮಿತಾಯಿಗೆ ಗೌರವ ಹಾಗೂ ನಂಬಿಕೆಯಿಂದಿರಲು ಇಷ್ಟಪಡುತ್ತೇನೆ ಎಂದಿದ್ದಾರೆ.
ತಾವು ಪ್ರಾಮಾಣಿಕ ಕಾಮ್‌ದಾರ್ ಆಗಿದ್ದು, ಎಂದಿಗೂ ತಾವು ನಾಮ್‌ದಾರ್ ಅಲ್ಲ ಹಾಗೂ ತಾವು ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡು ಜನಿಸಿಲ್ಲ. ತಮ್ಮ ಮೂಲ ಬೇರುಗಳೇ ತಮ್ಮ ಶಕ್ತಿ. ಇದನ್ನು ಯಾವುದೇಙ ರೀತಿಯ ಆತಂರಿಕ ಶಕ್ತಿಗಳು ಬದಲಾಯಿಸಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ತಮ್ಮ ಪ್ಲಾಟ್ ಫಾರಂ ಎಂದಿಗೂ ಅಭಿವೃದ್ಧಿಯನ್ನೇ ಹೊಂದಿರುತ್ತದೆ. ದೇಶದ ಅದರಲ್ಲೂ ಪ್ರಮುಖವಾಗಿ ಈಶಾನ್ಯ ರಾಜ್ಯಗಳಲ್ಲಿ ಸಂಕಷ್ಟದಲ್ಲಿರುವ ಬಡ ಮಹಿಳೆಯರಿಗೆ ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ ಎಂದಿದ್ದಾರೆ.
Discussion about this post