ಕಲ್ಪ ಮೀಡಿಯಾ ಹೌಸ್ | ಮೈಸೂರು |
ದೇಶ ಮೊದಲು ಎನ್ನುವುದು ನಮ್ಮ ಬದುಕಿನ ಮೌಲ್ಯವಾಗಬೇಕು. ದೇಶಕ್ಕಿಂತ ಮಿಗಿಲಾದ ಸಂಗತಿ ಇನ್ನೊಂದಿಲ್ಲ ಎಂದು ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ #Yaduveer Krishnadatta chamaraja odeyar ತಿಳಿಸಿದ್ದಾರೆ.
ನಗರದ ಪೂರ್ಣ ಚೇತನ ಶಾಲೆಯ ಒಂದರಿಂದ ಹತ್ತನೇ ತರಗತಿಯವರೆಗಿನ ಸುಮಾರು 530 ವಿದ್ಯಾರ್ಥಿಗಳು ಕಣ್ಣಿಗೆ ಬಟ್ಟೆ ಕಟ್ಟಿ ನಡೆಸಿದ ಐದು ನಿಮಿಷಗಳ ಕವಾಯತು ಹಾಗು ಪುನರ್ ಬಳಕೆಯ ಒರಿಗಾಮಿ ಚೆಂಡುಗಳ ಮೂಲಕ 12 ಮೀಟರ್ x 8 ಮೀಟರ್ ಅಳತೆಯ ಅತಿ ದೊಡ್ಡ ರಾಷ್ಟ್ರ ದ್ವಜವನ್ನು 4 ಗಂಟೆ 5 ನಿಮಿಷದಲ್ಲಿ ತಯಾರಿಸಿದರು. ಈ ವಿಶ್ವದಾಖಲೆಯ ಸಮಾವೇಶದಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಅವರು ಮಾತನಾಡುತ್ತಿದ್ದರು.

Also read: ತೀರ್ಥಹಳ್ಳಿಯಲ್ಲಿ ವಿಮೆ ಇಲ್ಲದೆ ಓಡಾಡುತ್ತಿರುವ ಸರ್ಕಾರಿ ವಾಹನ!
ನಮ್ಮ ಹೆಮ್ಮೆಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಜೀಯವರು ವಿಕಸಿತ ಭಾರತದ ಕನಸನ್ನು ನಮಗೆ ನೀಡಿದ್ದಾರೆ. ಇದನ್ನು ಸಾಧಿಸುವ ನಿಟ್ಟಿನಲ್ಲಿ ಯುವಕರ ಪಾತ್ರ ಅತಿ ಹಿರಿದಾದದ್ದು. ಮುಂದಿನ ಪ್ರಜೆಗಳಾದ ನೀವೆಲ್ಲರೂ ಈ ದೇಶಕ್ಕೆ ನಿಮಗೆ ಸಾಧ್ಯವಾದಷ್ಟು ಸೇವೆ ಸಲ್ಲಿಸಬೇಕು ಎಂದು ಶ್ರೀ ಯದುವೀರ್ ಈ ಸಂದರ್ಭದಲ್ಲಿ ಕರೆ ನೀಡಿದರು.

“ಈ ದೇಶದ ಇತಿಹಾಸದಲ್ಲಿ ಮೈಸೂರಿಗೆ ಅತಿ ಪ್ರಮುಖ ಸ್ಥಾನವಿದೆ. ಅದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಮುಂದಿನ ಪೀಳಿಗೆ ಮೇಲಿದೆ,” ಎಂದು ಅವರು ತಿಳಿಸಿದರು.
ಎಲೈಟ್ ವರ್ಲ್ಡ್ ರೆಕಾರ್ಡ್ಸ್‌ನ ತೀರ್ಪುಗಾರರಾದ ಭಾವನಾ ನವನೀತ್, ಏಷ್ಯನ್ ರೆಕಾರ್ಡ್ಸ್ ಅಕಾಡೆಮಿ ಮತ್ತು ಇಂಡಿಯಾ ರೆಕಾರ್ಡ್ಸ್ ಅಕಾಡೆಮಿಯ ತೀರ್ಪುಗಾರರಾದ ಪಿ ಜಿ ಪ್ರತಿಭಾ ಅವರು ವಿಶ್ವ ದಾಖಲೆಗಳನ್ನು ಅಧಿಕೃತವಾಗಿ ಪ್ರಮಾಣೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ ದರ್ಶನ್ ರಾಜ್ ಈ ದೇಶದ ಭವಿಷ್ಯ ಬರೆಯಲು ಸಾಧ್ಯವಿರುವುದು ಇಂದಿನ ವಿದ್ಯಾರ್ಥಿಗಳಿಗೆ. ಅವರಲ್ಲಿ ದೇಶ ಪ್ರೇಮದ ಸಂಸ್ಕಾರ ಮೂಡಿಸುವುದು ನಮ್ಮ ಬಹು ಮುಖ್ಯ ಗುರಿ ಎಂದು ತಿಳಿಸಿದರು.

ಶಾಲೆಯ ಮುಖ್ಯ ಆಡಳಿತಾಧಿಕಾರಿ ಮಾಧುರ್ಯ ರಾಮಸ್ವಾಮಿ ಮಾತನಾಡಿ, ವಿಶ್ವದಲ್ಲೇ ಭಾರತೀಯತೆಯ ಕಲ್ಪನೆಯಂತಹ ಇನ್ನೊಂದು ಪವಿತ್ರ ಕಲ್ಪನೆ ಇಲ್ಲ. ಇಂದಿನ ವಿದ್ಯಾರ್ಥಿಗಳಲ್ಲಿ ಭಾರತೀಯತೆಯ ಸಂಸ್ಕಾರ, ಕಲ್ಪನೆಯನ್ನು ಮೂಡಿಸಿ, ಅವರನ್ನು ದೇಶದ ಭವ್ಯ ಪ್ರಜೆಗಳಾಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಡೀನ್ ಲಾವಣ್ಯ, ಪ್ರಾಂಶುಪಾಲರಾದ ಪ್ರಿಯಾಂಕ ಬಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post