ಕಲ್ಪ ಮೀಡಿಯಾ ಹೌಸ್ | ಮೈಸೂರು |
ಕೃಷ್ಣರಾಜ ಕ್ಷೇತ್ರದಿಂದ ಟಿಕೇಟ್ ಕೈತಪ್ಪಿದ ಹಾಲಿ ಶಾಸಕ ಎಸ್.ಕೆ. ರಾಮದಾಸ್ S K Ramdas ಬಿಜೆಪಿಯಲ್ಲಿಯೇ ಉಳಿಯುವ ನಿರ್ಧಾರಕ್ಕೆ ಬಂದಿದ್ದು, ಈ ಮೂಲಕ ಕ್ಷೇತ್ರದಲ್ಲಿ ಉಲ್ಭಣಗೊಂಡಿದ್ದ ಬಂಡಾಯದ ಆತಂಕ ಶಮನಗೊಂಡಂತಾಗಿದೆ.
ಈ ಬಾರಿಯ ಟಿಕೇಟ್ ದೊರೆಯದ ಹಿನ್ನೆಲೆಯಲ್ಲಿ ಬೆಂಬಲಿಗರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ರಾಮದಾಸ್ ವಿಶ್ವವೇ ತಿರುಗಿ ನೋಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ನನ್ನ ಬೆನ್ನು ತಟ್ಟಿದ್ದಾರೆ. ದೇಶದ ಪ್ರಧಾನಿಯೊಬ್ಬರು ಸಾಮಾನ್ಯ ಶಾಸಕನೊಬ್ಬನ ಬೆನ್ನು ತಟ್ಟಿ ಪ್ರಶಂಶಿಸಿದ ಋಣ ನನ್ನ ಮೇಲಿದೆ. ಇದಕ್ಕೆ ವಂಚನೆ ಮಾಡುವ ಕೆಲಸವನ್ನು ನಾನೆಂದು ಮಾಡುವುದಿಲ್ಲ ಎಂದರು.
ನಿಮ್ಮ ಶಾಸಕ ಕೊನೆಯುಸಿರಿರುವವರೆಗೂ ನಿಮ್ಮೊಂದಿಗೆ ಇರುತ್ತಾನೆ. ನನ್ನ ಕಚೇರಿ ಬಾಗಿಲು ಕ್ಷೇತ್ರದ ಜನತೆಗೆ ಎಂದಿಗೂ ತೆರೆದಿರುತ್ತದೆ. ನಾನು, ಬೂತ್ ಪ್ರಮುಖರು ಸೇರಿ ಪ್ರತಿಯೊಬ್ಬರು ಕ್ಷೇತ್ರಕ್ಕಾಗಿ ನಿರಂತರವಾಗಿ ದುಡಿಯುತ್ತೇವೆ. ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ಮುಖ್ಯ. ದೇಶಕ್ಕಾಗಿ ಎಂತಹದ್ದೇ ತ್ಯಾಗಕ್ಕೆ ನಾನು ಸಿದ್ಧನಾಗಿದ್ದೇನೆ. ದೇಶದ ಒಳಿತಿಗಾಗಿ ಪಕ್ಷ ತೆಗೆದುಕೊಂಡ ನಿರ್ಧಾರ ಹಾಗೂ ನೀಡಿರುವ ಸೂಚನೆಗೆ ಎಂದಿಗೂ ಬದ್ಧನಾಗಿರುತ್ತೇನೆ ಎಂದು ವ್ಯಕ್ತಿನಿಷ್ಠೆ ಮೆರೆದರು.
Also read: ಬೀದರ್ ದಕ್ಷಿಣದಿಂದ ಬಂಡೆಪ್ಪ ಖಾಶೆಂಪುರ್ ನಾಮಪತ್ರ ಸಲ್ಲಿಕೆ: ಹರಿದುಬಂದ ಜನಸಾಗರ
ಬಿಜೆಪಿ ನಮ್ಮ ತಾಯಿ ಎಂದು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇನೆ. ಅದಕ್ಕೆ ತಕ್ಕಂತೆ ನಡೆದುಕೊಂಡಿದ್ದೇನೆ. ಇಂತಹ ತಾಯಿಗೆ ದ್ರೋಹ ಮಾಡಲಾಗದು. ಅದನ್ನು ತೊರೆಯುವ ಪ್ರಶ್ನೆಯೇ ಇಲ್ಲ. ದೇವಾನುದೇವತೆಗಳಿಗೆ ವನವಾಸ ತಪ್ಪಿಲ್ಲ. ಹೀಗಿರುವಾಗ ಈ ರಾಮದಾಸ ಕೆಲಕಾಲ ಅಜ್ಞಾತ ವಾಸಕ್ಕೆ ಹೋದರೂ ಆಶ್ಚರ್ಯವೇನಿಲ್ಲ ಎಂದು ಹೇಳುವ ಮೂಲಕ ಮುಂದಿನ ದಿನಗಳಲ್ಲಿ ನಿರ್ಲಿಪ್ತವಾಗಿರುವ ಸೂಚನೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post