ಕಲ್ಪ ಮೀಡಿಯಾ ಹೌಸ್ | ಮೈಸೂರು |
ನಗರದ ವಿವೇಕ ವಿದ್ಯಾ ವಾಹಿನಿ ಟ್ರಸ್ಟ್ ವತಿಯಿಂದ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಏ. 21ರಿಂದ 23ರವರೆಗೆ ವಿವೇಕ ಶಿಬಿರ ಆಯೋಜಿಸಲಾಗಿದೆ.
ಮೂರು ದಿನಗಳ ಸಾಂಸ್ಕೃತಿಕ, ನೈತಿಕ ಮತ್ತು ಆಧ್ಯಾತ್ಮಿಕ ಶಿಬಿರವು ರಾಮಕೃಷ್ಣ ನಗರ, ಐ ಬ್ಲಾಕ್, ನಂದನ ಉದ್ಯಾನವನದ ರಾಮಕೃಷ್ಣ ಸಭಾ ಮಂಟಪದಲ್ಲಿ ಬೆಳಿಗ್ಗೆ 9:30ರಿಂದ ಸಂಜೆ 4:30ರವರೆಗೆ ಉಚಿತ ಶಿಬಿರ ನಡೆಯಲಿದ್ದು, ಮೊದಲು ಹೆಸರು ನೋಂದಾಯಿಸುವ 30 ಜನರಿಗೆ ಮಾತ್ರ ಅವಕಾಶ ಲಭಿಸಲಿದೆ.
ಹೆಚ್ಚಿನ ಮಾಹಿತಿಗಾಗಿ 9880649290, 7019796153, 7259369893 ಸಂಪರ್ಕಿಸಬಹುದು.
ಶಿಬಿರದಲ್ಲಿ ಯೋಗ, ಪ್ರಾಣಾಯಾಮ, ವಿಷ್ಣು ಸಹಸ್ರನಾಮ, ಭಗವದ್ಗೀತೆ, ರಾಮಾಯಣ, ಮಹಾಭಾರತ, ಸಂಸ್ಕೃತ ಶ್ಲೋಕಗಳು, ಆಹಾರ ಪದ್ಧತಿ, ಚಿತ್ರಕಲೆ, ಸಂಗೀತ, ನೃತ್ಯ, ಅರಣ್ಯ, ಪರಿಸರ, ವನ್ಯಜೀವಿಗಳು, ಸಾಮಾಜಿಕ ಜವಾಬ್ಧಾರಿ, ಪುಸ್ತಕಗಳು, ಭಾಷಣ, ಬರವಣಿಗೆ, ನೀತಿಕಥೆ, ಜೀವನಚರಿತ್ರೆ, ಸೈನ್ಯ, ಸ್ವಾತಂತ್ರ್ಯ ಹೋರಾಟ, ಆಡಗಳು, ಹವ್ಯಾಸಗಳು, ನಕ್ಷೆಗಳು, ಪ್ರವಾಸ, ಗಾದೆಗಳು, ಒಗಟುಗಳ ಬಗ್ಗೆ ಮೂಲಭೂತ ಹಾಗೂ ಸಂಕ್ಷಿಪ್ತ ಪರಿಚಯ ಮಾಡಿಕೊಡಲಾಗುವುದು.
ವಿಶೇಷ ಸೂಚನೆ: ಮಧ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















