ಕಲ್ಪ ಮೀಡಿಯಾ ಹೌಸ್ | ಮೈಸೂರು |
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಮೋದಿ ಮುಂದೆ ನಿಂತು ಕೇಳಲು ಬಿಜೆಪಿ, ಜೆಡಿಎಸ್ ಸಂಸದರಿಗೆ ನಡುಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ #CM Siddaramaiah ಕುಹಕವಾಡಿದ್ದಾರೆ.
ನಗರದಲ್ಲಿ ಆಯೋಜಿಸಿದ್ದ ಸಾಧನ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಆರೋಪ ಮಾಡುತ್ತಾರೆ. ಸರ್ಕಾರ ದಿವಾಳಿ ಆಗಿದ್ದರೆ, ಅಭಿವೃದ್ಧಿ ಯೋಜನೆ ಮಾಡುಲು ಆಗುತ್ತಿತ್ತಾ? ಸರ್ಕಾರ ದಿವಾಳಿ ಆಗಿಲ್ಲ ಎಂದರಲ್ಲದೇ ಇದು ಸಿದ್ದರಾಮಯ್ಯನ ಶಕ್ತಿ ಪ್ರದರ್ಶನ ಅಲ್ಲ. ಇದು ಅಭಿವೃದ್ಧಿಯ ಶಕ್ತಿಯನ್ನು ಜನರ ಮುಂದೆ ಇಡುವ ಸಮಾವೇಶ. ಮತ್ಸರ ಇರಬೇಕು. ಆದ್ರೆ ಬಿಜೆಪಿ, ಜೆಡಿಎಸ್‌ಗೆ ಇರುವಷ್ಟು ಮತ್ಸರ ಇರಬಾರದು. ಬಿಜೆಪಿ, ಜೆಡಿಎಸ್ ಸುಳ್ಳು ಹೇಳುತ್ತಾ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಒಂದೇ ವೇದಿಕೆಗೆ ಬಂದಿದ್ದರೆ ಅವರೇನೂ ಅಭಿವೃದ್ಧಿ ಮಾಡಿದ್ದಾರೆ? ನಾವೇನು ಅಭಿವೃದ್ಧಿ ಮಾಡಿದ್ದೇವೆ ಗೊತ್ತಾಗ್ತಿತ್ತು. ಚರ್ಚೆಗೆ ನಾನು ಬರ್ತಿನಿ, ನೀವೂ ಬನ್ನಿ ಚರ್ಚೆ ಮಾಡೋಣ ಅಂತ ಜೆಡಿಎಸ್ – ಬಿಜೆಪಿಗೆ ಬಹಿರಂಗ ಸವಾಲು ಹಾಕಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post