ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಾಮರಾಜನಗರ: ಸದ್ದಿಲ್ಲದೇ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಮೈಸೂರಿನ ವಿದ್ಯಾಸ್ಪಂದನ ಸಂಸ್ಥೆ ವತಿಯಿಂದ ನಗರದ ಜೆಎಸ್’ಎಸ್ ಅನಾಥಾಲಯಕ್ಕೆ ಹಲವು ವಸ್ತುಗಳನ್ನು ಕೊಡುಗೆಯಾಗಿ ನೀಡಲಾಯಿತು.
ಜೆಎಸ್’ಎಸ್ ಅನಾಥಾಲಯ ಹಾಗೂ ದಿವ್ಯ ದೀಪ ಅಂಧ ಮಕ್ಕಳ ಶಾಲೆಗೆ ಅಡುಗೆ ಪಾತ್ರೆಗಳು, ಯುಪಿಎಸ್, 4 ಬೀರು, 3 ಮುಂಚ, ಇಸ್ತ್ರಿ ಪೆಟ್ಟಿಗೆ, ಹಾಸಿಗೆ, ದಿಂಬು, ಡೈನಿಂಗ್ ಟೇಬಲ್, ಚೇರ್’ಗಳು, ಕಂಪ್ಯೂಟರ್ ಯುಪಿಎಸ್, ಕಿಟಕಿ ಸ್ಕ್ರೀನ್’ಗಳು, ನೀರಿನ ಬಾಟಲ್’ಗಳು, 4 ಒಲೆಯ ಗ್ಯಾಸ್ ಸ್ಟವ್, ಕುಕ್ಕರ್, ಫ್ಯಾನ್, ಬೆಡ್ ಶೀಟ್ ಮತ್ತು ಹೊದಿಕೆಗಳನ್ನು ಕೊಡುಗೆಯಾಗಿ ನೀಡಲಾಯಿತು.
ಸಂಸ್ಥೆಯ ಪರವಾಗಿ 2020ನೆಯ ವರ್ಷದ ಸಾಮಾಜಿಕ ಚಟುವಟಿಕೆಗಳ ಕಾರ್ಯಕ್ರಮದಲ್ಲಿ ನೀಡಲಾಯಿತು. ಕೊರೋನಾ ಮಾರ್ಗಸೂಚಿಗಳನ್ನು ಪಾಲನೆಯೊಂದಿಗೆ ಮೈಸೂರಿನ ಸರಸ್ವತಿಪುರಂ ನಲ್ಲಿ ಜೆಎಸ್’ಎಸ್ ಅನಾಥಾಲಯದ ವಾರ್ಡನ್ ಹಾಗೂ ದೈಹಿಕ ಶಿಕ್ಷಕರಾದ ಉಮೇಶ್ ಅವರಿಗೆ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಪುನೀತ್ ಜಿ, ಕಾರ್ಯದರ್ಶಿಗಳಾದ ಅಶ್ವಿನ್ ಕೆ.ಎನ್. ಗೌರವ ಅಧ್ಯಕ್ಷರಾದ ಕೆ.ಆರ್. ಗಣೇಶ್, ದಾನಿಗಳಾದ ಸುನೀತಾ ಮತ್ತು ಕವಿತಾ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post