ಕಲ್ಪ ಮೀಡಿಯಾ ಹೌಸ್ | ಮೈಸೂರು |
ನೈರುತ್ಯ ರೈಲ್ವೆ, ಮೈಸೂರು ವಿಭಾಗದಲ್ಲಿ #South Western Railway Mysore division ಇಂದು ಸಂವಿಧಾನ ದಿನವನ್ನು ಗೌರವಪೂರ್ಣ ಹಾಗೂ ಅರ್ಥಪೂರ್ಣ ಕಾರ್ಯಕ್ರಮದೊಂದಿಗೆ ಆಚರಿಸಲಾಯಿತು.
ಮೈಸೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ನಿರ್ವಾಹಕರಾದ ಶಮ್ಮಾಸ್ ಹಮೀದ್ ಅವರು ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಭಾರತ ಸಂವಿಧಾನದ ಪ್ರಸ್ತಾವನೆಯನ್ನು ಇಂಗ್ಲಿಷ್’ನಲ್ಲಿ ಪಠಿಸಿದರು. ಹಿರಿಯ ವಾಣಿಜ್ಯ ವ್ಯವಸ್ಥಾಪಕರಾದ ಲೋಹಿತೇಶ್ವರ ಅವರು ಕನ್ನಡದಲ್ಲಿ ಪಠಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಶಮ್ಮಾಸ್ ಹಮೀದ್ ಅವರು, ರಾಷ್ಟ್ರದ ಪ್ರಗತಿಗೆ ಮಾರ್ಗದರ್ಶಕವಾಗಿರುವ ಪ್ರಸ್ತಾವನೆಯ ಮಹತ್ವವನ್ನು ಒತ್ತಿ ಹೇಳಿದರು.
ಸಂವಿಧಾನಾತ್ಮಕ ತತ್ವಗಳನ್ನು ನಿತ್ಯಕೃತ್ಯಗಳಲ್ಲಿ ಕಾಪಾಡುವ ಜವಾಬ್ದಾರಿ ಎಲ್ಲ ನೌಕರರ ಮೇಲಿದೆ ಎಂದು ಅವರು ನೆನಪಿಸಿದರು. ದೇಶ ನಿರ್ಮಾಣದಲ್ಲಿ ನಿಷ್ಠೆ, ಪಾರದರ್ಶಕತೆ ಮತ್ತು ಏಕತೆಯೊಂದಿಗೆ ಕೆಲಸ ಮಾಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post