ಕಲ್ಪ ಮೀಡಿಯಾ ಹೌಸ್ | ಮೈಸೂರು |
ಅದ್ದೂರಿ, ಆಡಂಬರಕ್ಕೇ ಆದ್ಯತೆ ನೀಡುವ ರಾಜಕಾರಣಿಗಳ ನಡುವೆ ಪಾಲಿಕೆ ಸದಸ್ಯೆ ಶೋಭಾ ಸುನೀಲ್ ಅವರ ಜನ್ಮದಿನವನ್ನು ವಿಭಿನ್ನ ರೀತಿಯಲ್ಲಿ ಆಚರಿಸುವ ಮೂಲಕ ಮಾದರಿ ಕಾರ್ಯಮಾಡಲಾಗಿದೆ.
61ನೆಯ ವಾಡ್ ಪಾಲಿಕೆ ಸದಸ್ಯರಾಗಿರುವ ಶೋಭಾ ಅವರು, ಸ್ವಚ್ಛ ನಗರ ಸ್ವಚ್ಛ ಮೈಸೂರು ಧ್ಯೇಯದಡಿ ವಿದ್ಯಾರ್ಥಿಗಳ ಮೂಲಕ ಹಸಿಕಸ, ಒಣಕಸ ಬೇರ್ಪಡಿಸಿ ಪಾಲಿಕೆ ವಾಹನಕ್ಕೆ ನೀಡುವುದು, ಪ್ಲಾಸ್ಟಿಕ್ ನಿಷೇಧದ ಬಗ್ಗೆ ರಸ್ತೆಗಳ ಸಂಚರಿಸುವ ಮೂಲಕ ಜಾಗೃತಿ ಮೂಡಿಸುವ ಮೂಲಕ ತಮ್ಮ ಜನ್ಮದಿನವನ್ನು ಆಚರಿಸಲಾಯಿತು.
ಇದೇ ವೇಳೆ ಪ್ರತಿನಿತ್ಯ ಕಸ ಸುರಿಯುತ್ತಿದ್ದ ಸಾರ್ವಜನಿಕ ಹಾಸ್ಟೆಲ್ ರಸ್ತೆಯ ಸ್ಥಳವೊಂದರಲ್ಲಿ ವಿವಿಧ ಬಣ್ಣದ ಚಿತ್ತಾರ ಮೂಡಿಸುವ ಮೂಲಕ ಸೆಲ್ಫಿ ಸ್ಪಾಟ್ ಮಾಡಿ ಆಕರ್ಷಿತ ಕೇಂದ್ರವನ್ನಾಗಿ ಮಾಡಲಾಗಿದ್ದು ಅದೇ ಸ್ಥಳದಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಿಸಲಾಯಿತು.
ಜಾಗೃತಿ ಜಾಥದಲ್ಲಿ ಮಾಜಿ ಶಾಸಕರಾದ ಎಂ.ಕೆ. ಸೋಮಶೇಖರ್, ಪಾಲಿಕೆ ಉಪಮಹಾಪೌರರಾದ ರೂಪ, ಮಾಜಿ ಮಹಾಪೌರರುಗಳಾದ ಭೈರಪ್ಪ, ಪುಷ್ಪಲತಾ ಜಗನ್ನಾಥ್, ಉದ್ಯಮಿ ಸತ್ಯನಾರಾಯಣ್, ಮಾಜಿ ಪಾಲಿಕೆ ಸದಸ್ಯರಾದ ಎಂ. ಸುನೀಲ್, ವೀರಶೈವ ಮುಖಂಡರಾದ ರವಿಶಂಕರ್, ಶಂಕರ್, ಕೆಂ.ಪಿ. ನವೀನ್, ಗಣೇಶ್ ಮತ್ತಿತರರು ಪಾಲ್ಗೊಂಡಿದ್ದರು.
ಜಾಥದ ಉದ್ದಕ್ಕೂ ವಿದ್ಯಾರ್ಥಿಗಳು, ಸ್ವಚ್ಛತಾ ಸೇನಾನಿಗಳಾದ ಪೌರಕಾರ್ಮಿಕರು ಹೆಜ್ಜೆ ಹಾಕಿದರು. ವಿದ್ಯಾರ್ಥಿಗಳು ವಿವಿಧ ಜಾಗೃತ ಫಲಕಗಳನ್ನು ಹಿಡಿದು ಬ್ಯಾಂಡ್ ಸದ್ದಿಗೆ ಹೆಜ್ಜೆ ಹಾಕಿ ಪರಿಸರ ಜಾಗೃತಿ ಘೋಷಣೆಗಳನ್ನು ಕೂಗಿದರು.
(ವಿಶೇಷ ವರದಿ: ಪುನೀತ್ ಜಿ. ಕೂಡ್ಲೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post