ಕಲ್ಪ ಮೀಡಿಯಾ ಹೌಸ್ | ಮೈಸೂರು |
ಆಷಾಢ ಮಾಸದ ಹಿನ್ನೆಲೆಯಲ್ಲಿ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ Minister S T Somashekar ಭಾನುವಾರ ಶ್ರೀ ಚಾಮುಂಡೇಶ್ವರಿ Shri Chamundeshwari ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಇದೇ ವೇಳೆ ಸಚಿವರು ವೈಯಕ್ತಿಕವಾಗಿ 50 ಸಾವಿರ ಲಾಡು ಪ್ರಸಾದ್ ಮಾಡಿಸಿ, ಭಕ್ತಾಧಿಗಳಿಗೆ ಸ್ವತಃ ನಿಂತು ಪ್ರಸಾದ ವಿತರಣೆ ಮಾಡಿದರು. ದೇವರ ದರ್ಶನ ಮಾಡಿ ಬರುವ ಎಲ್ಲಾ ಭಕ್ತಾಧಿಕಾಧಿಗಳಿಗೆ ಪ್ರಸಾದ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಜಿ.ಟಿ. ದೇವೇಗೌಡ, ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ. ರಾಜೀವ್, ಮುಖಂಡರಾದ ಶ್ರೀವತ್ಸ, ಮಂಗಳ ಸೋಮಶೇಖರ್, ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ. ಶಶಿಶೇಖರ್ ದೀಕ್ಷಿತ್, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಸಿ.ಜಿ. ಕೃಷ್ಣ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
Also read: ‘ಸೂಪರ್ 30’ಗಾಗಿ ‘RETE’ ಯೋಜನೆಗೆ 14 ಸರ್ಕಾರಿ, 16 ಖಾಸಗಿ ಬಿಇ ಕಾಲೇಜುಗಳ ಆಯ್ಕೆ: ಸಚಿವ ಅಶ್ವತ್ಥ ನಾರಾಯಣ್
ಚಾಮುಂಡಿ ಬೆಟ್ಟದಲ್ಲಿ ಆಷಾಡ ಶುಕ್ರವಾರ ಯಶಸ್ವಿ ಆಚರಣೆ ಹಿನ್ನೆಲೆ ಮೈಸೂರಿನ ಜನತೆಗೆಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಕೃತಜ್ಞತೆ ಸಲ್ಲಿಸಿದರು.
ಆಷಾಡ ಶುಕ್ರವಾರಕ್ಕೆ ಲಕ್ಷಾಂತರ ಭಕ್ತರು ಆಗಮಿಸಿದ್ದು ಆಷಾಡ ಶುಕ್ರವಾರ ಕಾರ್ಯಕ್ರಮ ಯಶಸ್ವಿಯಾಗಿದೆ. ಈ ವೇಳೆ ಯಾವುದಾದರೂ ಅಡಚಣೆ ಉಂಟಾಗಿದ್ದಲ್ಲಿ ಕ್ಷಮೆ ಯಾಚಿಸುತ್ತೇನೆ. ಈ ಬಾರಿ ಪಾಸ್ ನಿಂದ ಗೊಂದಲವಾಯ್ತು ಆದರಿಂದ ಪಾಸ್ ಕ್ಯಾನ್ಸಲ್ ಮಾಡಿದ್ದೆವು. ಇದೆ ರೀತಿ ಮುಂದಿನ ದಸರಾ ವೇಳೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥಿತವಾಗಿ ಜಿಲ್ಲಾಡಳಿತ ನಡೆಸಲಿದೆ. ಎಲ್ಲಾ ಇಲಾಖೆಗಳು, ಎಲ್ಲಾ ಪಕ್ಷಗಳು ಸೇರಿದಂತೆ ಮೈಸೂರಿನ ಜನತೆ ಸಹಕಾರ ನೀಡಿದ್ದಾರೆ ಎಂದು ಚಾಮುಂಡಿಬೆಟ್ಟದಲ್ಲಿ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post