ಮೈಸೂರು: ಜಮ್ಮು ಕಾಶ್ಮೀರದಲ್ಲಿ ಹುತಾತ್ಮರಾದ ವೀರಯೋಧರಿಗೆ ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ನಗರದ ಇಟ್ಟಿಗೆಗೂಡಿನಲ್ಲಿರುವ ಸಂಘದ ಕಚೇರಿ ಮುಂಭಾಗ ಇಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ಧಾರ್ಮಿಕ ಮುಖಂಡರಾದ ಭಾನುಪ್ರಕಾಶ್ ಶರ್ಮ, ಹಿರಿಯ ಸಮಾಜಸೇವಕರಾದ ಕೆ. ರಘು ರಾಮ್, ಬ್ರಾಹ್ಮಣ ಸಮಾಜದ ಗ್ರಾಮಾಂತರ ಅಧ್ಯಕ್ಷರಾದ ಗೋಪಾಲರಾವ್, ವೇಣುಗೋಪಾಲ್, ಶಂಕರ್ ನಾರಾಯಣ್, ಡಿ.ಎನ್. ಕೃಷ್ಣಮೂರ್ತಿ, ಮಹಿಳಾ ಮುಖಂಡರಾದ ಸೌಭಾಗ್ಯ ಮೂರ್ತಿ, ಬ್ರಾಹ್ಮಣ ಯುವ ವೇದಿಕೆಯ ವಿಕ್ರಂ ಅಯ್ಯಂಗಾರ್, ಜಗದೀಶ್, ಹರೀಶ್, ಕೆ ಎಂ ನಿಶಾಂತ್, ಅಜಯ್ ಶಾಸ್ತ್ರಿ , ವಿಜಯ್ ಕುಮಾರ್, ಸುಚಿಂದ್ರ, ಫೋಟೋ ಗಣೇಶ್, ರಂಗನಾಥ್, ಜೈ ಸಿಂಹ, ಮುಂತಾದವರು ಶ್ರದ್ಧಾಂಜಲಿ ಸಲ್ಲಿಸಿ , ಹುತಾತ್ಮ ಯೋಧರ ಸೇವೆ ಸ್ಮರಿಸಿದರು.
ಇದೇ ವೇಳೆ ಮೇಣದ ಬತ್ತಿ ಬೆಳಗಿಸಿ ‘ಅಮರ್ ರಹೆ ಅಮರ್ ರಹೇ ವೀರ ಜವಾನ್ ಅಮರ್ ರಹೇ “ಎಂಬ ಘೋಷಣೆ ಕೂಗಿದರು. ಮೌನಾಚರಣೆ ಮೂಲಕ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ನಂತರ ಮಾತನಾಡಿದ ಡಿ ಟಿ ಪ್ರಕಾಶ್ ಅವರು ಪಾಕಿಸ್ತಾನದ ಪಾಪದ ಕೊಡ ತುಂಬಿದೆ. ತಾಳ್ಮೆಗೂ ಮಿತಿ ಇದೆ. ಭಯೋತ್ಪಾದನೆಯನ್ನು ಸಹಿಸಿಕೊಳ್ಳುವ ರಾಜಕೀಯ ನೇತೃತ್ವ ದೇಶದಲ್ಲಿ ಇಲ್ಲ. ಉಗ್ರರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಅವಕಾಶ ದೇಶದ ಸೈನ್ಯಕ್ಕೆ ಇದೆ ಎಂದರು.
ಭಾನುಪ್ರಕಾಶ್ ಶರ್ಮಾ ಅವರು ಮಾತನಾಡಿ, ಇಸ್ರೇಲ್ ಮಾದರಿಯ ಹೋರಾಟ ನಮ್ಮದಾಗಬೇಕಾಗಿದೆ. ನಮ್ಮ ಸೈನಿಕರ ಬಲಿದಾನ ವ್ಯರ್ಥವಾಗಬಾರದು. ಭಾರತವನ್ನು ಪ್ರೀತಿಸುವ ಪ್ರತಿಯೊಬ್ಬರು ಕುದಿಯುತ್ತಿದ್ದಾರೆ. ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತೆಸೆಯುವ ರಾಜಕೀಯ ನಾಯಕತ್ವದ ಬೆಂಬಲಕ್ಕೆ ನಮ್ಮ ಬ್ರಾಹ್ಮಣ ಸಮುದಾಯವು ಸೇರಿದಂತೆ ಇಡೀ ದೇಶ ನಿಂತಿದೆ ಎಂದರು.
ಯೋಧರ ಬಲಿದಾನ ವ್ಯರ್ಥ ವಾಗುವುದಿಲ್ಲ ಎನ್ನುವ ಸಂಕಲ್ಪವನ್ನು ನಾವೆಲ್ಲರೂ ಕೈಗೊಳ್ಳೋಣ ಎಂದು ಯುವ ಕಾರ್ಯಕರ್ತರಿಗೆ ಮೈಸೂರು ಜಿಲ್ಲಾ ಯುವ ಬ್ರಾಹ್ಮಣ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ್ ಅಯ್ಯಂಗಾರ್ ಅವರು ಕರೆ ನೀಡಿದರು.
Discussion about this post