ಕಲ್ಪ ಮೀಡಿಯಾ ಹೌಸ್
ಮೈಸೂರು: ಸಿಎಂ ಆಡಳಿತಾತ್ಮಕವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ರಾಜ್ಯಪಾಲರಿಗೆ ಪತ್ರ ಬರೆದಿರುವುದನ್ನ ಸಮರ್ಥಿಸಿಕೊಂಡ ಸಚಿವ ಈಶ್ವರಪ್ಪ ಇದು ನಿಯಮ ಪಾಲನೆ ವಿರುದ್ಧದ ಧ್ವನಿಯೇಹೊರತು ಸಿಎಂ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಅಲ್ಲವೆಂದು ಸ್ಪಷ್ಟಪಡಿಸಿದರು.
ನಮ್ಮ ಇಲಾಖೆಗೆ ಬಿಡುಗಡೆಯಾದ ಹಣವನ್ನು ಇಲಾಖೆಯವರೆ ವೆಚ್ಚ ಮಾಡಬೇಕು. ಇಲಾಖೆಯ ಮಂತ್ರಿ ಗಮನಕ್ಕೆ ಬಾರದೆ ಶಾಸಕರಿಗೆ ಕೊಡಲಾಗಿದೆ ಎಂದು ಆರೋಪಿಸಿ ರಾಜ್ಯಪಾಲರಿಗೆ ಪತ್ರಬರೆದಿದ್ದು ಬಿಟ್ಟರೆ ಸಿಎಂ ಬಿಎಸ್ ವೈ ಅವರ ವೈಯುಕ್ತಿಕವಾಗಿ ಅಲ್ಲವೆಂದು ಮೈಸೂರಿನಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ಗೆ 65 ಕೋಟಿ ರೂ ಕೊಡಲಾಗಿದೆ. ಇದು ನನ್ನ ಗಮನಕ್ಕೆ ಬಂದಿಲ್ಲ. ಇದು ಕಾನೂನು ಉಲ್ಲಂಘನೆ ಎಂದು ಆರೋಪಿಸಿದ ಸಚಿವರು ಇದು ನನ್ನ ಮತ್ತು ಯಡಿಯೂರಪ್ಪ ಅವರ ನಡುವಿನ ವೈಯಕ್ತಿಕ ವಿಚಾರವಲ್ಲ ಎಂದಿದ್ದಾರೆ.
ಇದು ನಿಯಮಗಳನ್ನು ಮೀರಬಾರದು ಎಂಬುದರ ಕಾಳಜಿ ಅಷ್ಟೆ. ಈ ವಿಚಾರದಲ್ಲಿ ಕೆಲವರಿಗೆ ಗೊಂದಲವಿದೆ. ಸಿಎಂ ಹಣ ಬಿಡುಗಡೆಗೆ ಆದೇಶ ಹೊರಡಿಸಿದ ನಂತರ ನನ್ನ ಗಮನಕ್ಕೆ ತರಲಾಯಿತು. ಆರ್ ಡಿ ಪಿ ಆರ್ ಪ್ರಿನ್ಸಿಪಲ್ ಸೆಕ್ರೆಟರಿ ಇದನ್ನು ಈಗ ತಡೆ ಹಿಡಿದಿದ್ದಾರೆ. ಇಲಾಖೆಯ ಹಣದ ವಿನಿಯೋಗ ನನ್ನ ಗಮನಕ್ಕೆ ಬಾರದೆ ನಡೆಸಲಾಗಿದೆ. ಇದು ತಪ್ಪಾಗಿದೆ ಅಂತಾ ಆರ್ಥಿಕ ಇಲಾಖೆ ಒಪ್ಪಿಕೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನು ಸಿಎಂ ಅವರ ಗಮನಕ್ಕೂ ತಂದೆ, ಬಿಜೆಪಿ ಉಸ್ತುವಾರಿ ಅವರ ಗಮನಕ್ಕೂ ತಂದಿದ್ದೀನಿ. ಸಿಎಂ ಯಾವ ಶಾಸಕರಿಗೆ ಹೇಳುತ್ತಾರೋ ಅವರಿಗೆ ಹಣ ಬಿಡುಗಡೆ ಮಾಡುತ್ತೇನೆ. ಸಿಎಂ ನನ್ನ ಗಮನಕ್ಕೆ ತರದೆ ಹಣ ಬಿಡುಗಡೆ ಮಾಡಿರೋದರಿಂದ ಇದನ್ನು ತಡೆ ಹಿಡಿಯಲಾಗಿದೆ ಎಂದರು.
ಸಿ.ಟಿ. ರವಿ, ಕಟೀಲು ಎಲ್ಲರಿಗೂ ಇದು ಗೊತ್ತಿದೆ. ನಾನು ರೆಬೆಲ್ ಅಲ್ಲ. ನಾನು ಪಕ್ಷಕ್ಕೆ ಲಾಯಲ್. ನಾನು ಧ್ವನಿ ಎತ್ತಿರೋದು ನಿಯಮ ಪಾಲನೆ ಬಗ್ಗೆ ಮಾತ್ರ, ಮಂತ್ರಿಗಳು, ಶಾಸಕರು ಪತ್ರಿಕಾಗೋಷ್ಠಿ ಮಾಡಿದ್ದಾರೆ ಮಂತ್ರಿ ಸ್ಥಾನ ಬದಲಾವಣೆ ಮಾಡ್ತಿವಿ ಅಂತಾ ಹೇಳಿದ್ದಾರೆ. ಇದಕ್ಕೆ ನಾನು ಜಗ್ಗಲ್ಲ ಪತ್ರಿಕಾಗೋಷ್ಠಿ ಮಾಡಿದವರೆ ನಾವು ಒತ್ತಡದಿಂದ ಪತ್ರಿಕಾಗೋಷ್ಠಿ ಮಾಡಿದ್ದೇವೆ ಅಂತಾ ನನಗೆ ಕರೆ ಮಾಡಿ ಹೇಳಿದ್ದಾರೆ. ಈಶ್ವರಪ್ಪ – ಯಡಿಯೂರಪ್ಪ ಯಾವತ್ತಿದ್ದರೂ ಒಂದೇ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post