ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮಕ್ಕಳು ಧೈರ್ಯವಂತರಾಗಿರಬೇಕು, ಬದುಕಿನಲ್ಲಿ ಹಲವಾರು ಘಟನೆಗಳು ನಮ್ಮನ್ನು ಕುಗ್ಗಿಸುತ್ತವೆ. ಅಂತಹ ಸಮಯದಲ್ಲಿ ನಾವು ಎಂದಿಗೂ ವಿಚಲಿತರಾಗಬಾರದು ಎಂದು ಆದರ್ಶ ಸೇವಾ ಸಂಘದ ಅಧ್ಯಕ್ಷ ನಾಗರಾಜ್ ಮಕ್ಕಳಿಗೆ ಕಿವಿಮಾತು ಹೇಳಿದರು.
ನಗರದ ಕೃಷ್ಣಮೂರ್ತಿಪುರಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಗುಬ್ಬಚ್ಚಿ ಶಾಲೆ)ಯಲ್ಲಿ ವಿದ್ಯಾಸ್ಪಂದನ ಸಂಸ್ಥೆಯಿಂದ ಆಯೋಜಿಸಲಾಗಿದ್ದ ಪಠ್ಯ ಪರಿಕರಗಳ ವಿತರಣೆಯ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾಥಿ೯ಗಳು ತಮ್ಮ ವಯಸ್ಸಿನ ವಿವಿಧ ಹಂತದಲ್ಲಿ ಮಾನಸಿಕ ಚಿಂತನೆಗಳಿಗೆ ಒಳಗಾಗುತ್ತಾರೆ ಆಗ ಸಮಾಜದಲ್ಲಿ ಅವರನ್ನು ಗುರುತಿಸಿ ಪೋಷಿಸಬೇಕು, ಅವರ ಅಂದಿನ ಸಮಸ್ಯೆಯನ್ನೇ ಅವರು ದೊಡ್ಡ ಸಮಸ್ಯೆ ಎಂದು ಭಾವಿಸಿರುತ್ತಾರೆ ಅವರ ಜೊತೆ ಸಮಾಲೋಚನೆ ನೆಡೆಸಿ ಅವರಿಗೆ ಸ್ಫೂರ್ತಿ ನೀಡಿದರೆ ನಂತರ ಅವರೇ ದೊಡ್ಡವ್ಯಕ್ತಿ ಆಗುತ್ತಾರೆ. 70 ವರ್ಷಗಳ ಹಿಂದೆ ತಮ್ಮ ತಾತ ಈ ಗುಬ್ಬಚ್ಚಿ ಶಾಲೆಯಲ್ಲಿ ಮುಖ್ಯೋಪಧ್ಯಾಯರಾಗಿದ್ದು ತಮಗೂ ಈ ಶಾಲೆಗೂ ಭಾವನಾತ್ಮಕ ಸಂಬಂಧವಿದೆ ಎಂದರು.
Also read: ಡಾ. ಧನಂಜಯ ಸರ್ಜಿ 65ನೇ ಬಾರಿ ರಕ್ತದಾನ
ವಿದ್ಯಾಸ್ಪಂದನ ಅಧ್ಯಕ್ಷ ಪುನೀತ್ ಜಿ ಮಾತನಾಡಿ, ಮಕ್ಕಳು ಶಾಲೆಯಲ್ಲಿ ಶಿಸ್ತಿನಿಂದ ಇರಬೇಕು. ಮಕ್ಕಳು ಭಾರತ ಸೈನಿಕರನ್ನು, ಪೋಷಕರು ಮತ್ತು ಶಾಲೆಯ ಶಿಕ್ಷಕರನ್ನು ತಮ್ಮ ಜೀವನದಲ್ಲಿ ಗೌರವಿಸಬೇಕು. ಮಕ್ಕಳು ತಮ್ಮ ಜೀವನದಲ್ಲಿ ಸ್ವಚ್ಛತೆಗೆ ಮಹತ್ವ ಕೊಡಬೇಕು. ಸ್ವಚ್ಛ ಭಾರತಕ್ಕೆ ಮಕ್ಕಳು ಹೆಚ್ಚು ಪ್ರಾಮುಖ್ಯತೆ ಕೊಡಬೇಕು. ಪ್ರತಿ ದಿನ ಕನ್ನಡ ದಿನಪತ್ರಿಕೆ ಹಾಗೂ ಪಠ್ಯವನ್ನು ತಪ್ಪದೆ ಓದಬೇಕು ಎಂದು ಹೇಳಿದರು.
ಭಾರತ ಇಂದು ಪ್ರಪಂಚದ ಅತ್ಯಂತ ಪ್ರಭಾವಶಾಲಿ ದೇಶವಾಗಿ ಹೊರಹೊಮ್ಮುತ್ತಿದೆ. ಅದನ್ನು ಮುಂದೆ ಕಾಪಾಡುವ ಜವಾಬ್ದಾರಿ ಇಂದಿನ ವಿದ್ಯಾರ್ಥಿಗಳ ಕೈಲಿದೆ ನೀವು ಚೆನ್ನಾಗಿ ಓದಿದರೆ ಮುಂದೆ ಉತ್ತಮ ಭವಿಷ್ಯವಿದೆ. ನೀವು ಉತ್ತಮ ಪ್ರಜೆಗಳಾದರೆ ಭಾರತದ ಇಂದಿನ ಪ್ರಗತಿಯನ್ನು ಕಾಪಾಡಬಹುದು ಎಂದು ಹೇಳಿದರು.
ಯುವ ಮುಖಂಡ ಅಜಯ್ ಶಾಸ್ತ್ರಿ ಮಾತನಾಡಿ, ಶತಮಾನದ ಇಂತಹ ಶಾಲೆಗಳು ಉಳಿಯ ಬೇಕಾದರೆ, ಮಕ್ಕಳು ಶಾಲೆಗೆ ಬರಬೇಕು. ಇಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಇಂದು ಉತ್ತಮ ಅಧಿಕಾರಿಗಳಾಗಿ ನಿವೃತ್ತರಾಗಿದ್ದಾರೆ. ಕನ್ನಡಶಾಲೆಗಳ ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿ.ಆರ್. ನಾಗರಾಜ್ ರವರು ವಿದ್ಯಾಥಿ೯ಗಳಿಗೆ ಸರಸ್ವತಿ ಭಾವಚಿತ್ರದ ಉಡುಗರೆ ನೀಡಿ, ಮಕ್ಕಳು ಸರಸ್ವತಿಯ ಅನುಗ್ರಹದಿಂದ ಚೆನ್ನಾಗಿ ಓದಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ರೇಷ್ಮೆ ಮಂಡಳಿಯ ಕೆ.ಆರ್. ಗಣೇಶ್, ಪ್ರತಿಭೆ ವೇದಿಕೆಯ ರಾಜರತ್ನಂ, ಭಾಜಪ ಯುವ ಮುಖಂಡ ಅಜಯ್ ಶಾಸ್ತ್ರಿ, ಪೂಜಾ, ಎನ್. ನೂತನ್, ಮುಖ್ಯೋಪಾದ್ಯಾಯರಾದ ಮೋಹನ್ ಕುಮಾರ್, ಶಾಲೆಯ ಸಹ ಶಿಕ್ಷಕಿ ಚಂಪಾ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post