ಕಲ್ಪ ಮೀಡಿಯಾ ಹೌಸ್ | ಮೈಸೂರು |
ಸಾಗರಕಟ್ಟೆ ಮತ್ತು ಕೃಷ್ಣರಾಜನಗರ ಯಾರ್ಡ್‌ಗಳ ನಡುವೆ ನಡೆಯುವ ಟ್ರ್ಯಾಕ್ ನಿರ್ವಹಣಾ ಕೆಲಸದ ಹಿನ್ನೆಲೆಯಲ್ಲಿ ಕೆಳಕಂಡ ರೈಲು ಸೇವೆಗಳನ್ನು ಮಾರ್ಗಮಧ್ಯೆ ನಿಯಂತ್ರಿಸಲಾಗುವುದು/ಸಮಯದಲ್ಲಿ ಬದಲಾವಣೆ ಮಾಡಲಾಗುವುದು ಎಂದು ನೈಋತ್ಯ ರೈಲ್ವೆ
ಮೈಸೂರು ವಿಭಾಗದ ಸಾರ್ವಜನಿಕರು ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.
ರೈಲು ಸಂಖ್ಯೆ 16222 ಮೈಸೂರು – ತಾಳಗುಪ್ಪ ಎಕ್ಸ್‌ಪ್ರೆಸ್, ಮೇ 29 ಮತ್ತು 30, 2025 ರಂದು ಪ್ರಯಾಣ ಆರಂಭಿಸುವ ರೈಲು ಮಾರ್ಗ ಮಧ್ಯೆ 20 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ. ಇದೇ ರೈಲು, ಮೇ 31 ಮತ್ತು ಜೂನ್ 1, 2025 ರಂದು 25 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

ರೈಲು ಸಂಖ್ಯೆ 56208 ಮೈಸೂರು – ಚಿಕ್ಕಮಗಳೂರು ಎಕ್ಸ್‌ಪ್ರೆಸ್, ಮೇ 31 ಮತ್ತು ಜೂನ್ 1, 2025 ರಂದು ಪ್ರಯಾಣ ಆರಂಭಿಸುವ ರೈಲು, ಮೈಸೂರು ನಿಲ್ದಾಣದಿಂದ 30 ನಿಮಿಷಗಳ ವಿಳಂಬದಿಂದ ಪ್ರಾರಂಭವಾಗುತ್ತದೆ.

ಕೋರವಂಗಲ ಯಾರ್ಡ್‌ನಲ್ಲಿ ನಡೆಯುವ ಸುರಕ್ಷಾ ಮತ್ತು ನಿರ್ವಹಣಾ ಕೆಲಸದ ಹಿನ್ನೆಲೆಯಲ್ಲಿ ಕೆಳಕಂಡ ರೈಲು ಸೇವೆಗಳನ್ನು ಸಂಪೂರ್ಣವಾಗಿ ಮತ್ತು ಭಾಗಶಃ ರದ್ದುಗೊಳಿಸಲಾಗಿದೆ:
ಸಂಪೂರ್ಣ ರದ್ದತಿ:
ರೈಲು ಸಂಖ್ಯೆ 56267 ಅರಸೀಕೆರೆ – ಮೈಸೂರು ಪ್ಯಾಸೆಂಜರ್ ರೈಲು ಜೂನ್ 1, 2025 ರಂದು ರದ್ದುಗೊಳಿಸಲಾಗುತ್ತದೆ.

ರೈಲು ಸಂಖ್ಯೆ 16225 ಮೈಸೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲು ಮೈಸೂರು ಮತ್ತು ಅರಸೀಕೆರೆ ನಡುವಿನ ಮಾರ್ಗದಲ್ಲಿ ಭಾಗಶಃ ರದ್ದುಗೊಳಿಸಲಾಗುತ್ತದೆ. ಜೂನ್ 1, 2025 ರಂದು ಈ ರೈಲು ಅರಸೀಕೆರೆಯಿಂದ ಶಿವಮೊಗ್ಗ ಟೌನ್‌ವರೆಗೆ ಮಾತ್ರ ಓಡಿಸಲಾಗುತ್ತದೆ ಮತ್ತು ಅರಸೀಕೆರೆಯಲ್ಲಿ ನಿಗದಿತ ವೇಳೆಯಲ್ಲಿ ಹೊರಡುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post