ಕಲ್ಪ ಮೀಡಿಯಾ ಹೌಸ್ | ಮೈಸೂರು |
ಶ್ರೀರಾಂಪುರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಮೂಕಾಂಬಿಕಾ ಸಮೃದ್ಧಿ ಬಡಾವಣೆಯಲ್ಲಿ ಅದ್ದೂರಿಯಾಗಿ ಸಂಭ್ರಮದ ಹೋಳಿ ಹಬ್ಬ #HoliFestival ಆಚರಿಸಲಾಯಿತು.
ಯುವಕ ಯುವತಿಯರು ವಿಧವಿಧವಾದ ಬಣ್ಣಗಳನ್ನು ಪರಸ್ಪರ ಹಚ್ಚಿ ಹೋಳಿ ಹಬ್ಬವನ್ನು ಆಚರಿಸಲಾಯಿತು. ತದನಂತರ ವರುಣ ದೇವರಲ್ಲಿ ಈ ಬಾರಿ ಮಳೆ ಹೆಚ್ಚು ಬರಲಿ ಎಂದು ಸಾಮೂಹಿಕವಾಗಿ ಪ್ರಾರ್ಥಿಸಿದರು.
ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷರಾದ ಕೆ.ಆರ್. ಗಣೇಶ್, ಪುನೀತ್, ಪೂಜಾ, ವಿಜಯಶ್ರೀ, ಬಾಲಸುಬ್ರಮಣ್ಯ, ಚೈತ್ರ, ದತ್ತಾತ್ರೇಯ ಜೋಯ್ಸ್, ರಾಘವೇಂದ್ರ ಹಾಗೂ ಚಿಣ್ಣರಾದ ಪೃಥು ಪಿ ಅದ್ವೈತ್, ಸ್ವರಾಜ್, ಹಿಂದವಿ, ಉದಯಾದಿತ್ಯ, ವೈಷ್ಣವಿ ಸೇರಿದಂತೆ ಬಡಾವಣೆಯ ನಿವಾಸಿಗಳು ಹಾಜರಿದ್ದರು.



















