ಕಲ್ಪ ಮೀಡಿಯಾ ಹೌಸ್ | ಮೈಸೂರು |
ಕೃಷ್ಣನ ಜೀವನ ಸಂದೇಶವನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕು ಹಾಗೂ ಮಕ್ಕಳ ಪ್ರತಿ ದಿನ ಕನಿಷ್ಠ ಭಗವದ್ಗೀತೆಯ ಒಂದು ಶ್ಲೋಕವನ್ನಾದರು ಕಲಿಯ ಬೇಕು ಎಂದು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಮಹೇಶ್ ಕಾಮತ್ ತಿಳಿಸಿದರು.
ಮೈಸೂರಿನ ಕುವೆಂಪುನಗರದ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ ಮೈಸೂರು ವತಿಯಿಂದ ಆಯೋಜಿಸಿದ್ದ ಅಂತರಶಾಲಾ ಕೃಷ್ಣ ವೇಷ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.
ಕೃಷ್ಣ #Krishna ವೇಷ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪೂರ್ಣ ಚೇತನ ಪಬ್ಲಿಕ್ ಶಾಲೆಯ ಡಾ. ಪೃಥು ಪಿ ಅದ್ವೈತ್ ಪಡೆದರು, ದ್ವಿತೀಯ ಬಹುಮಾನ ವಿಜಯ ವಿಠಲ ಶಾಲೆಯ ರುತೌನ್ಷಿ ಪಡೆದರು, ತೃತೀಯ ಬಹುಮಾನ ಕರ್ನಾಟಕ ಪಬ್ಲಿಕ್ ಶಾಲೆಯ ಮೋಹಿತಾ ಪಡೆದರು. ವಿವಿಧ ಶಾಲೆಗಳಿಂದ 60ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.
ಈ ಸ್ಪರ್ಧೆಯ ತೀರ್ಪುಗಾರರಾಗಿ ಡಾ. ಭಾವನ, ಡಾ. ವಿಜಯ ರಮೇಶ್, ಡಾ. ವಿಜಯ, ಸುರೇಂದ್ರ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ನ ವಿವಿಧ ಪದಾಧಿಕಾರಿಗಳಾದ ಮಧುಶಂಕರ್, ಪುನೀತ್ ಜಿ, ಜಯಶ್ರೀ ಶಿವರಾಂ, ಅರುಣಾಚಲಂ, ಲೋಕೇಶ್, ವಿಜೇಂದ್ರ, ಅನಂತ ಪದ್ಮನಾಭ, ಕುಮುದಾ ಸೇರಿದಂತೆ ಹಲವು ಗಣ್ಯರು, ಪೋಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post