ಕಲ್ಪ ಮೀಡಿಯಾ ಹೌಸ್
ಮೈಸೂರು: ಯೋಗಾಸನದಲ್ಲಿ ಸಾಧನೆ ಮಾಡಿರುವ ಮಾಜಿ ಗವರ್ನರ್ ರಂಗರಾವ್ ಕೃಷ್ಣ ಅವರಿಗೆ ಇಂಧನ ಮತ್ತು ಕನ್ನಡ-ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಶಾಲುಹೊದೆಸಿ ಸನ್ಮಾನಿಸಿದರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಶ್ರೀ ವೇದವ್ಯಾಸ ಯೋಗ ಪ್ರತಿಷ್ಠಾನದ ಆಶ್ರಯದಲ್ಲಿ ನಗರದ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ರೋಟರಿ ಮಾಜಿ ಗವರ್ನರ್ ಶ್ರೀರಂಗರಾವ್ ಕೃಷ್ಣ ಅವರು ತಮ್ಮ 70ನೇ ವಯಸ್ಸಿನಲ್ಲಿ ಯೋಗ ಗುರು ಡಾ. ರಾಘವೇಂದ್ರ ಪೈ ಅವರ ಮಾರ್ಗದರ್ಶನದಲ್ಲಿ ಪ್ರತಿದಿನ 108 ಸೂರ್ಯ ನಮಸ್ಕಾರದಂತೆ 108 ದಿನಗಳು ಅಭ್ಯಾಸ ನಡೆಸಿ, 1,39,968 ಯೋಗಾಸನಗಳನ್ನು ಮಾಡಿ ಇತರರಿಗೆ ಪ್ರೇರಣೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಯೋಗ ಸಾಧನೆಗೆ ಸಂಕಲ್ಪ ಪ್ರೇರಣೆ ನೀಡಿದ ಸುಮಾಕೃಷ್ಣ ಹಾಗೂ ಸಂಯೋಜಕಿ, ಮಹಾನಗರಪಾಲಿಕೆ ಸದಸ್ಯೆ ವಿದ್ಯಾ ಅರಸ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post