ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮೈಸೂರು ರೈಲ್ವೆ ಆಸ್ಪತ್ರೆಯನ್ನು #Mysore Railway Hospital ರೋಗಿಗಳ ಆರೈಕೆ ಮತ್ತು ಚಿಕಿತ್ಸೆ ಉತ್ತಮಗೊಳಿಸುವ ಉದ್ದೇಶದಿಂದ ಆಧುನಿಕ ವೈದ್ಯಕೀಯ ಉಪಕರಣಗಳ ಸೇರ್ಪಡೆಯ ಮೂಲಕ ಮತ್ತಷ್ಟು ಬಲಪಡಿಸಲಾಗಿದ್ದು, ಹೊಸ ಸೌಲಭ್ಯಗಳನ್ನು ನೈಋತ್ಯ ರೈಲ್ವೆಯ ಪ್ರಧಾನ ಮುಖ್ಯ ವೈದ್ಯಕೀಯ ನಿರ್ದೇಶಕ ಡಾ. ಜಿ.ಎಸ್. ರಾಮಚಂದ್ರ ಉದ್ಘಾಟಿಸಿದರು.
ಉದ್ಘಾಟನೆಗೊಂಡ ಸೌಲಭ್ಯಗಳ ವಿವರ ಹೀಗಿದೆ:
- ಆಧುನಿಕ ಡೆಂಟಲ್ ಕುರ್ಚಿ – ದಂತ ಚಿಕಿತ್ಸೆಯಲ್ಲಿ ಹೆಚ್ಚುವರಿ ಆರಾಮ ಮತ್ತು ನಿಖರತೆಗಾಗಿ.
- ಹೀಮಟಾಲಜಿ ಅನಲೈಸರ್ – ಶೀಘ್ರ ಮತ್ತು ನಿಖರ ರಕ್ತ ಪರೀಕ್ಷಾ ಫಲಿತಾಂಶಗಳ ಮೂಲಕ ಉತ್ತಮ ರೋಗನಿರ್ಣಯಕ್ಕಾಗಿ.
- ಮೈಕ್ರೋವೇವ್ ಡಯಾಥರ್ಮಿ ಯಂತ್ರ – ನೋವು ನಿವಾರಣೆ ಮತ್ತು ವೇಗವಾದ ಚೇತರಿಕೆಗಾಗಿ ಅತ್ಯಾಧುನಿಕ ಭೌತಿಕ ಚಿಕಿತ್ಸೆಗಾಗಿ.
ಈ ಸೌಲಭ್ಯವು ರೋಗಿಗಳ ಮತ್ತು ಸಿಬ್ಬಂದಿಗೆ ನೀಡುವ ಪ್ರಯೋಜನಗಳು:
- ವೇಗವಾದ ಮತ್ತು ನಿಖರ ರೋಗನಿರ್ಣಯ, ಉತ್ತಮ ಚಿಕಿತ್ಸೆ ಫಲಿತಾಂಶ, ಹೆಚ್ಚುವರಿ ರೋಗಿಗಳ ಆರಾಮ ಮತ್ತು ಸುರಕ್ಷತೆ,
- ಮೈಸೂರು ರೈಲ್ವೆ ಆಸ್ಪತ್ರೆಯ ಆರೋಗ್ಯ ಮೂಲಸೌಕರ್ಯದ ಬಲವರ್ಧನೆ
ಈ ಸಂದರ್ಭದಲ್ಲಿ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್, ವಿಭಾಗದ ಅಧಿಕಾರಿಗಳು, ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post