ಕಲ್ಪ ಮೀಡಿಯಾ ಹೌಸ್ | ಮೈಸೂರು |
ನಗರದ ರಿಂಗ್ ರಸ್ತೆಯಲ್ಲಿನ ಲೈಟ್ ವಿಚಾರದಲ್ಲಿ ಕಳೆದ ತಿಂಗಳು ತಾವೇ ನೀಡಿದ್ದ ಗಡುವಿನ ಅವಧಿಯಲ್ಲಿ ತಾವು ನೀಡಿದ ಮಾತಿನಂತೆ ಸಂಸದ ಪ್ರತಾಪ್ ಸಿಂಹ MP Prathap Simha ನಡೆದುಕೊಂಡಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಮಣಿಪಾಲ್ ಆಸ್ಪತ್ರೆಯಿಂದ ನಂಜನಗೂಡು ಜಂಕ್ಷನ್’ವರೆಗೂ (ದೇವೇಗೌಡ ವೃತ್ತ ಮುಖಾಂತರವಾಗಿ) 18 ಕಿಮೀ ಮೈಸೂರು ರಿಂಗ್ ರಸ್ತೆಯ ಲೈಟ್’ಗಳನ್ನು ಆನ್ ಮಾಡಿದ್ದೇವೆ. ಇನ್ನು ಉಳಿದ ಮಾರ್ಗದ ಲೈಟ್’ಗಳನ್ನು 10 ದಿನದ ಒಳಗೆ ಆನ್ ಮಾಡಲಾಗುವುದು ಎಂದಿದ್ದಾರೆ.
ಸಂಪೂರ್ಣ 43 ಕಿಮೀ ರಿಂಗ್ ರಸ್ತೆಯ ಲೈಟ್’ಗಳನ್ನು 10 ದಿನದ ಒಳಗೆ ಆನ್ ಮಾಡಲಾಗುವುದು. ಉಳಿದ ಮಾರ್ಗದಲ್ಲಿ ಲೈಟ್’ಗಳನ್ನು ಅಳವಡಿಸಲಾಗಿದ್ದು, ಕಂಟ್ರೋಲ್ ಪ್ಯಾನಲ್’ಗಳನ್ನು ಅಳವಡಿಸಲಾಗುತ್ತಿದೆ ಎಂದಿದ್ದಾರೆ.
Also read: ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ: ಸಿಎಂ ಬೊಮ್ಮಾಯಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post