ಕಲ್ಪ ಮೀಡಿಯಾ ಹೌಸ್ | ಮೈಸೂರು |
ನಗರದ ವಿಜಯನಗರದಲ್ಲಿರುವ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾರ್ಚ್ 20 ಮತ್ತು 21ರಂದು ಮೈಸೂರು ಸಂಸ್ಥಾನದಲ್ಲಿ ಮಹಿಳೆಯರ ಸಬಲೀಕರಣ: ಐತಿಹಾಸಿಕ ಒಳನೋಟಗಳು, ಸಾಮಾಜಿಕ ಬದಲಾವಣೆ ಮತ್ತು ಭವಿಷ್ಯದ ನಿರೀಕ್ಷೆಗಳು’ ಕುರಿತಂತೆ ಎರಡು ದಿನಗಳ ಬಹು-ಶಿಸ್ತಿನ ರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ನಟರಾಜ ಜಿ ಆರ್ ಈ ವಿಷಯ ತಿಳಿಸಿದ್ದಾರೆ.
ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆ ಕೋಶ (ಐಕ್ಯುಎಸಿ), ಕರ್ನಾಟಕ ರಾಜ್ಯ ಪತ್ರಾಗಾರ, ವಿಭಾಗೀಯ ಪತ್ರಾಗಾರ ಕಛೇರಿ, ಮೈಸೂರು ಇದರ ಸಹಭಾಗಿತ್ವದಲ್ಲಿ ಈ ಸಮ್ಮೇಳನ ನಡೆಯಲಿದೆ.
ಗುರುವಾರ ಮಾರ್ಚ್ 20ರಂದು ಬೆಳಗ್ಗೆ 10. 30 ಕ್ಕೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ, ಗೌರವಾನ್ವಿತ ಶ್ರೀ ಜಿ ಟಿ ದೇವೇಗೌಡ ಅವರು ಈ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಜಮುನಾ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಡಾ. ಗವಿಸಿದ್ದಯ್ಯ (ನಿರ್ದೇಶಕರು, ಕರ್ನಾಟಕ ರಾಜ್ಯ ಪತ್ರಾಗಾರ, ಬೆಂಗಳೂರು), ಡಾ. ಬಿ. ಚಂದ್ರಶೇಖರ, ಜಂಟಿ ನಿರ್ದೇಶಕ, ಆರ್‌ಜೆಡಿಸಿಇ, ಮೈಸೂರು, ಹಾಗು ನವದೆಹಲಿಯ ಜೆ ಎನ್ ಯು ನ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಪ್ರೊ. ಹಿರಿಸಾವೆ ಶ್ರೀನಿವಾಸ್ ರಾವ್ ಪ್ರಭಾಕರ್, ಹಾಗು ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಹಿರಿಯ ಪ್ರಾಧ್ಯಾಪಕಿ ಪ್ರೊ. ಎಂ. ವಿ. ಉಷಾದೇವಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕಾಲೇಜಿನ ಪ್ರಾಂಶುಪಾಲ ನಟರಾಜ ಜಿ ಆರ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
Also read: ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ಡಿಜಿಟಲ್ ಡಿಟಾಕ್ಸ್ ಸೆಂಟರ್ ಬಿಯಾಂಡ್ ಸ್ಕ್ರೀನ್ಸ್
ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆ ಕೋಶ (ಐಕ್ಯುಎಸಿ) ಸಂಯೋಜಕ ಭದ್ರಗಿರಿಯಯ್ಯ ಕೆ ಸಿ, ಸಮ್ಮೇಳನದ ಸಂಯೋಜಕಿ ಪ್ರೊ. ಅನಿತಾ ಎಂ ಎಸ್ (ಕಾಲೇಜಿನ ಇತಿಹಾಸ ಪ್ರಾಧ್ಯಾಪಕಿ), ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಆನಂದ ಕುಮಾರ್ ಎಸ್ (ಸಹಾಯಕ ಪ್ರಾದ್ಯಾಪಕ, ವಾಣಿಜ್ಯ ವಿಭಾಗ) , ಹಾಗು ಸಹ ಸಂಘಟನಾ ಕಾರ್ಯದರ್ಶಿ ಮೀರಾ ಓಂಕಾರ್ ಶೆಟ್ಟಿ (ಸಹ ಪಾಧ್ಯಾಪಿಕೆ, ವಾಣಿಜ್ಯ ವಿಭಾಗ) ಈ ಸಂದರ್ಭದಲ್ಲಿ ಉಪಸ್ಥಿತರಿರುವರು.
ಶುಕ್ರವಾರ, ಮಾರ್ಚ್ 21ರಂದು ಸಂಜೆ 3.45ಕ್ಕೆ ನಡೆಯಲಿರುವ ಸಮಾರೋಪದಲ್ಲಿ ನವದೆಹಲಿಯ ಜೆ ಎನ್ ಯು ನ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಪ್ರೊ. ಹಿರಿಸಾವೆ ಶ್ರೀನಿವಾಸ್ ರಾವ್ ಪ್ರಭಾಕರ್ ಹಾಗು ಡಾ.ಮಂಜುನಾಥ್ ಹೆಚ್.ಎಲ್, ಹಿರಿಯ ಸಹಾಯಕ ನಿರ್ದೇಶಕರು, ವಿಭಾಗೀಯ ಪತ್ರಾಗಾರ ಕಚೇರಿ, ಮೈಸೂರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನಟರಾಜ ಜಿ ಆರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಸಮ್ಮೇಳನದಲ್ಲಿ ಮೈಸೂರು ಸಂಸ್ಥಾನದಲ್ಲಿ ಮಹಿಳಾ ಶಿಕ್ಷಣ, ಸಾಮಾಜಿಕ ಸುಧಾರಣೆಗಳು, ಹಾಗು ಹಕ್ಕುಗಳು, ರಾಜಕೀಯ ಹಾಗು ಆಡಳಿತದಲ್ಲಿ ಮಹಿಳೆಯರ ಸ್ಥಾನಮಾನ ಹಾಗು ಅವಕಾಶಗಳು, ಮಹಿಳೆ ಮತ್ತು ಉದ್ಯಮ, ಆರ್ಥಿಕ ಚಟುವಟಿಕೆಗಳು, ಧಾರ್ಮಿಕ ಹಕ್ಕುಗಳು, ಹೀಗೆ ಮಹಿಳಾ ಸಬಲೀಕರಣದ ಬಹು ಆಯಾಮಗಳ ಬಗ್ಗೆ ಇಲ್ಲಿ ತಜ್ಞರು, ಸಂಶೋಧಕರು ವಿಷಯ ಮಂಡಿಸಿ, ಚರ್ಚಿಸಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















