ಕಲ್ಪ ಮೀಡಿಯಾ ಹೌಸ್ | ಮೈಸೂರು |
ರಾಮಜನ್ಮಭೂಮಿ #Ayodhya ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮಚಂದ್ರ ದೇವರ ನಿರ್ಮಾಣದಿಂದ ಭಾರತೀಯ ಪರಂಪರೆ ಪುನರುಜ್ಜೀವನಗೊಂಡಂತಾಗಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು #PejavaraSri ಸಂತಸ ವ್ಯಕ್ತಪಡಿಸಿದರು.
ಜ.22 ರಂದು ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮದೇವರ ಪ್ರತಿಷ್ಠಾಪನೆಯ 2ನೇ ವರ್ಷದ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಲಕ್ಷ ದೀಪೋತ್ಸವ ನಡೆಯಲಿದ್ದು, ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಇದೊಂದು ಅತ್ಯಂತ ಸಂತೋಷದ ವಿಷಯ. ಸಮಸ್ತ ಭಾರತೀಯ ಆಕಾಂಕ್ಷಿಯಾಗಿದ್ದ ಅಯೋಧ್ಯೆ ಶ್ರೀ ರಾಮ ಮಂದಿರ #RamaMandira ನಿರ್ಮಾಣಗೊಂಡು ಎರಡನೇ ವರ್ಷಕ್ಕೆ ಕಾಲಿಡುತ್ತಿದ್ದು, ರಾಮ ಮಂದಿರ ನಿರ್ಮಾಣವು ಭಾರತೀಯ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಕೆಲಸವಾಗಿತ್ತು. ಅಯೋಧ್ಯೆ ಬಾಲ ರಾಮನ ಆಶೀರ್ವಾದ ಎಲ್ಲರ ಮೇಲೂ ಇರಲಿ ಎಂದು ಆಶೀರ್ವದಿಸಿದರು.
ವಿದ್ವಾನ್ ಪ್ರಹ್ಲಾದ್ ರಾವ್ ವಿಶ್ವದೆಲ್ಲೆಡೆ ರಾಮಭಕ್ತರ ಆಚರಿಸುವಂತಹ ಸಂತೋಷದ ದಿನ ಸಂಭ್ರಮಿಸುವಂತಹ ದಿನ ಇದಾಗಿದೆ. ರಾಮದೇವರ ಪ್ರತಿಷ್ಠಾಪನೆಯಾಗಿ ಅಯೋಧ್ಯೆಯಲ್ಲಿ 2 ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಜನತೆ ಪ್ರತಿ ಮನೆಯಲ್ಲೂ ದೀಪ ಬೆಳಗಿಸುವಂತಹ ದಿವಸವಾಗಿದೆ. ಅದರ ಹಿನ್ನೆಲೆಯಲ್ಲಿ ಈ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಪ್ರತಿಯೊಬ್ಬರೂ ಈ ಲಕ್ಷ ದೀಪೋತ್ಸವಕ್ಕೆ ಮೈಸೂರಿನ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕೆಂದು ಮನವಿ ಮಾಡಿದರು.
ಶ್ರೀ ರಾಮದೇವರ ಪ್ರತಿಷ್ಠೆಯಾಗಿ 2ನೇವರ್ಷದ ವಾರ್ಷಿಕೋತ್ಸವ ಹಾಗೂ ಮೈಸೂರಿನಲ್ಲಿ ಸಂಭ್ರಮದಿಂದ ಆಚರಿಸುತ್ತಿರುವ 3ನೇ ವರ್ಷದ ಲಕ್ಷದೀಪೋತ್ಸವ ಕಾರ್ಯಕ್ರಮವು ಜನವರಿ 22ರಂದು ಸಂಜೆ 6:30ಕ್ಕೆ ನಡೆಯಲಿದೆ. ಮೈಸೂರಿನ ಮುಖ್ಯ ದ್ವಾರದ ಅಶೋಕ ರಸ್ತೆಯ ವೀರ ಗಣಪತಿ ದೇವಸ್ಥಾನ ವೀರನಗಿರಿಯಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರ ಪ್ರಚಾರ ಸಾಮಗ್ರಿಯನ್ನು ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣಧಾಮದಲ್ಲಿ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ 9845128450 ಈ ಸಂದರ್ಭದಲ್ಲಿ ವಿದ್ವಾನ್ ಪ್ರಹ್ಲಾದ್ ರಾವ್, ಶ್ರೀ ಕೃಷ್ಣ ಟ್ರಸ್ಟ್ ಉಪಾಧ್ಯಕ್ಷರಾದ ರವಿ ಶಾಸ್ತ್ರಿ, ಮಂಜುನಾಥ್, ಎಸ್.ಎನ್. ರಾಜೇಶ್, ಶ್ರಿನಿವಾಸ್, ನಕ್ಷತ್ರ ವಿಜಯ್, ಪುನೀತ್ ಕೂಡ್ಲೂರು, ಗಣೇಶ್, ಅಮಿತ್, ಕೃಷ್ಣ ದಾಸ್ ಪುರಾಣಿಕ್, ಶ್ಲೋಕ ಪಠಣೆಯಲ್ಲಿ ವಿಶ್ವ ದಾಖಲೆ ನಿರ್ಮಿಸಿರುವ ಬಾಲಕ ಪೃಥು ಪಿ. ಅದ್ವೈತ್ ಹಾಗೂ ಇನ್ನಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















