ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮೊಬೈಲ್ ಫೋನಿನಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಯನ್ನು ಜ್ಞಾನ ಸಂಪಾದನೆಗಾಗಿ ಬಳಸಿದರೆ ಮಾತ್ರ ಪ್ರಗತಿ ಸಾಧ್ಯ ಎಂದು ಮೈಸೂರು ವಿವಿ ಕಂಪ್ಯೂಟರ್ ಸೈನ್ಸ್ #ComputerScience ವಿಭಾಗದ ನಿವೃತ್ತ ನಿರ್ದೇಶಕ ಡಾ. ಎ.ಎಂ. ಸುಧಾಕರ ಹೇಳಿದರು.
ಅವರು ಮೈಸೂರು ವಿಶ್ವವಿದ್ಯಾಲಯದ #MysoreUniversity ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ ಸಂಯುಕ್ತವಾಗಿ ಕೆ.ಎಸ್. ರಂಗಪ್ಪ ಸಭಾಂಗಣದಲ್ಲಿ ಗುರುವಾರ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಎರಡನೇ ಹಂತದ ಪರಿಚಯಾತ್ಮಕ ಕಾರ್ಯಕ್ರಮದಲ್ಲಿ ಸೈಬರ್ ಕ್ರೈಂ, #CyberCrime ಸೆಕ್ಯುರಿಟಿ, ಕೆರಿಯರ್ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಮೊಬೈಲ್ #Mobile ಫೋನಿನಲ್ಲಿ ಜ್ಞಾನಕ್ಕೆ ಸಂಬಂಧಿಸಿದ ವಿಚಾರಗಳನ್ನು ಮಾತ್ರ ಚರ್ಚಿಸಿ. ಅನ್ಯ ಕಾರ್ಯ ಮತ್ತು ಸಲ್ಲದ ಚಟುವಟಿಕೆಗಳಿಗೆ ಬಳಸಿಕೊಂಡರೆ ಅಪಾಯವನ್ನು ನಾವೇ ತಂದುಕೊಂಡಂತಾಗುತ್ತದೆ. ಈ ಬಗ್ಗೆ ಎಚ್ಚರದಿಂದ ಇರುವುದು ಸೂಕ್ತ ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪೊಲೀಸ್ ಇಲಾಖೆಯ ಸೈಬರ್ ಸೆಕ್ಯುರಿಟಿ ಟ್ರೈನರ್ ಎಸ್. ಲಿಂಗರಾಜು ಉಪನ್ಯಾಸ ನೀಡಿ, ಯಾವುದೇ ಸೈಬರ್ ಅಪರಾಧಗಳಿಗೆ ಕ್ಷಮೆ ಇಲ್ಲ. ಕಾನೂನು ಪ್ರಕಾರ ಇದು ಶಿಕ್ಷಾರ್ಹ ಅಪರಾಧವಾಗುತ್ತದೆ. ಈ ಎಚ್ಚರಿಕೆ ಇಟ್ಟುಕೊಂಡೇ ಮೊಬೈಲ್ ಫೋನ್ ಬಳಸಿ ಎಂದು ಕಿವಿಮಾತು ಹೇಳಿದರು.
ಎಷ್ಟೇ ವರ್ಷ ಕಳೆದರೂ, ಎಷ್ಟೇ ಬಾರಿ ಹ್ಯಾಂಡ್ ಸೆಟ್ ಬದಲಾವಣೆ ಮಾಡಿದರೂ ನಾವು ಬಳಸುವ ಮೊಬೈಲ್ ಫೋನ್ ಡೇಟಾಗಳನ್ನು #PhoneData ಪತ್ತೆ ಹಚ್ಚಲು ಸಾಧ್ಯವಿದೆ. ಇಲ್ಲಿ ಮಾಡಿದ ಅಪರಾಧ ಚಟುವಟಿಕೆ ಪತ್ತೆ ಹಚ್ಚಲೂ ಆಧುನಿಕ ತಂತ್ರಜ್ಞಾನ ನಮ್ಮ ಬಳಿ ಇದೆ. ಸುಳ್ಳು ಹೇಳಿ ಜಾರಿಕೊಳ್ಳಲು ಇಲ್ಲಿ ಸಾಧ್ಯವೇ ಇಲ್ಲ. ಹೀಗಿರುವಾಗ ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರುವುದು ಸೂಕ್ತ ಎಂದರು.

ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ ಇರಬೇಕು. ಹಾಗೆಂದ ಮಾತ್ರಕ್ಕೆ ಸೈಬರ್ ಕಳ್ಳರ ಹಿಡಿತಕ್ಕೆ ಸಿಗುವ ಕೆಲಸ ಮಾಡಬಾರದು. ಸೈಬರ್ ಅಪರಾಧಿಗಳ ಪತ್ತೆಗೆ ಸರ್ಕಾರ ಮತ್ತು ಕಾನೂನುಗಳು ಬಿಗಿಯಾಗಿವೆ. ಮೊಬೈಲ್ ಗೀಳಿಗೆ ಬಿದ್ದು, ಫೇಸ್ ಬುಕ್ #Facebook ಬಣ್ಣಗಳಿಗೆ ಮಾರುಹೋಗಿ, ವಾಟ್ಸ್ಆ್ಯಪ್ ಸಂದೇಶಗಳಿಗೆ ಮರುಳಾಗಿ ವ್ಯಕ್ತಿತ್ವ ಹಾಳುಮಾಡಿಕೊಳ್ಳಬಾರದು. ಇದರೊಂದಿಗೆ ಸೈಬರ್ ಕಳ್ಳರ ಜಾಲಗಳಲ್ಲೂ ಸಿಲುಕದಂತೆ ಎಚ್ಚರ ವಹಿಸಬೇಕು ಎಂದರು.
ಸಹಜ ಬದುಕಿನ ಆನಂದವನ್ನು ನಮ್ಮದಾಗಿಸಿಕೊಳ್ಳಬೇಕು ಎಂದು ಪವರ್ ಪಾಯಿಂಟ್ ಪ್ರಸಂಟೇಷನ್ ಮೂಲಕ ಲಿಂಗರಾಜು ವಿಷಯ ನಿರೂಪಣೆ ಮಾಡಿದರು. ಈ ಸಂದರ್ಭ ಅವರು ಸಿನಿಮಾ, ನಾಯಕ ನಟರು, ಸೆಲಬ್ರಿಟಿಗಳ ಜೀವನ, ಸಾಮಾಜಿಕ ಅಭಿವೃದ್ಧಿ, ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಅಂಶಗಳನ್ನು ವಿವರಿಸಿದರು.
ತಾಂತ್ರಿಕ ಶಾಲೆ ನಿರ್ದೇಶಕ ಪ್ರೊ. ಟಿ. ಅನಂತ ಪದ್ಮನಾಭ, ವಿವಿಧ ವಿಭಾಗ ಮುಖಸ್ಥರಾದ ಸಂತೋಷ್, ಸಚಿನ್, ನಿತಿನ್, ರಾಕೇಶ್ ಇತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post