ಕಲ್ಪ ಮೀಡಿಯಾ ಹೌಸ್ | ಮೈಸೂರು |
ಈಗ ಎಲ್ಲೆಡೆ ಕೃತಕ ಬುದ್ಧಿಮತ್ತೆಯದ್ದೇ (AI) ಸುದ್ದಿ. ಇದು ನಮ್ಮ ಶಾಲೆಗಳನ್ನು ಕೂಡ ಪ್ರವೇಶಿಸಿವೆ. ಮಕ್ಕಳ ಮನಸ್ಸಿನಲ್ಲಿ ಕುತೂಹಲ ಮೂಡಿಸುವ ಬದಲಿಗೆ ಅವುಗಳು, ಅವರನ್ನು ತಂತ್ರಜ್ಞಾನದ ಅಡಿಯಾಳುಗಳಾಗಿ ಮಾಡುತ್ತಿವೆ ಎನ್ನುವ ಭೀತಿ ಎಲ್ಲೆಡೆ ಶುರುವಾಗಿದೆ. ಮಕ್ಕಳನ್ನು ಮೊಬೈಲ್ ವ್ಯಸನದಿಂದ ಹೊರಗೆ ತರುವುದೇ ಪೋಷಕರ-ಶಿಕ್ಷಕರ ಅತಿ ದೊಡ್ಡ ತಲೆನೋವಾಗಿದೆ.
ಈ ಭೀತಿಯ ನಡುವೆ, ನಗರದ ಎಚ್.ಡಿ. ಕೋಟೆ ರಸ್ತೆಯಲ್ಲಿರುವ ಪೂರ್ಣ ಚೇತನ ಶಾಲೆ ತನ್ನ ಮಕ್ಕಳ ಧ್ವನಿಗೆ ಧ್ವನಿ ಸೇರಿಸಿ, ಅವರ ಕುತೂಹಲ ತಣಿಸುವ ಹೊಸ ವೇದಿಕೆಯೊಂದನ್ನು ಸೃಷ್ಟಿಸಿದೆ.
“ವಿಚಾರ” ಈ ಹೆಸರಿನ ಶಾಲೆಯ ಪಾಡ್‌ಕಾಸ್ಟ್ ಸರಣಿ ಈಗ ಎಲ್ಲೆಡೆ ಧ್ವನಿ ಮಾಡುತ್ತಿದೆ. ಇಲ್ಲಿ ಮಕ್ಕಳೇ ಸಂದರ್ಶಕರು; ಅತಿಥಿಗಳಿಗೆ ಇಲ್ಲಿ ಕೃತಕ ಪ್ರಶ್ನೆಗಳ ಕಾಟವಿಲ್ಲ; ಯಾವುದೇ ಒಂದು ಅತಿರಂಜಿತ ಮಾಹಿತಿಯ ಪ್ರವಾಹವಿಲ್ಲ. ಮಕ್ಕಳು ತಮ್ಮ ಮುಗ್ದ ಪ್ರಶ್ನೆಗಳ ಮೂಲಕ ತಮ್ಮ ವಯಸ್ಸಿನ ಇತರ ಮಕ್ಕಳ ಕುತೂಹಲಕ್ಕೆ ಉತ್ತರ ಕಂಡು ಹುಡುಕುವ ಪ್ರಯತ್ನ ಮಾಡುತ್ತಾರೆ. ಪ್ರಶ್ನೆಗಳು ಸರಳ; ಅತಿಥಿಗಳ ಉತ್ತರ ಕೂಡಾ ಅಷ್ಟೇ ಸರಾಗ.
ಈ ಸನ್ನಿವೇಶವನ್ನು ಊಹಿಸಿ. ನಗರದ ಮಗುವೊಂದು ಹಿರಿಯ ಉರಗ ತಜ್ಞ ‘ಸ್ನೇಕ್ ಶ್ಯಾಮ್’ ಅವರ ಮೂಲಕ ಉರಗ ಲೋಕಕ್ಕೆ ಕೇಳುಗರನ್ನು ಕರೆದೊಯ್ಯುವ ಸನ್ನಿವೇಶ. ಹಾವುಗಳು ಎಲ್ಲಿರುತ್ತವೆ, ಹೇಗೆ ಬದುಕುತ್ತವೆ? ಅವುಗಳನ್ನು ಏಕೆ ರಕ್ಷಿಸಬೇಕು ಅನ್ನುವ ಪ್ರಶ್ನೆಗಳು ಇಲ್ಲಿ ಅತ್ಯಂತ ಸಹಜವಾಗಿ ಕೇಳುವುದು. ಮತ್ತೊಬ್ಬ ವಿರ್ದ್ಯಾರ್ಥಿ ಗಾಯಕ-ಸಂಗೀತಗಾರ ರಘು ದೀಕ್ಷಿತ್ ಅವರ ಮಾತುಗಳಿಗೆ ಕಿವಿಯಾಗಿ, ಕೇಳುಗರನ್ನು ಗಾಂಧರ್ವ ಲೋಕಕ್ಕೆ ಕೊಂಡೊಯ್ಯುವುದು. ಇನ್ನೊಂದು ಸಂಚಿಕೆಯಲ್ಲಿ, ಶ್ರೀ ದತ್ತಪೀಠದ ಕಿರಿಯ ಪೀಠಾಧಿಪತಿಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರನ್ನು “ದೈನಂದಿನ ಜೀವನದಲ್ಲಿ ಆಧ್ಯಾತ್ಮದ ಪ್ರಾಮುಖ್ಯತೆ ಬಗ್ಗೆ ವಿದ್ಯಾರ್ಥಿ ಪ್ರಶ್ನಿಸುತ್ತಾನೆ. ಸೈಬರ್ ಯುದ್ಧ ತಜ್ಞ ವಿವೇಕ್ ಶಂಗಾರಿ “ಡಿಜಿಟಲ್ ಯುಗದ ಯುದ್ಧಗಳ ಭವಿಷ್ಯ”ವನ್ನು ವಿದ್ಯಾರ್ಥಿಗಳ ಮುಂದೆ ಹರಡುತ್ತಾರೆ.
ಇಲ್ಲಿ ಪೂರ್ಣ ಚೇತನ ಶಾಲೆಯ ತರಗತಿಯೇ ಮಕ್ಕಳ ಸ್ಟುಡಿಯೋ. ಎರಡು ಕ್ಯಾಮೆರಾ, ಒಂದು ಮೈಕ್, ಮತ್ತು ಅದಕ್ಕಿಂತ ಮುಖ್ಯವಾಗಿ—ಮಕ್ಕಳ ಕುತೂಹಲ ಇವಿಷ್ಟು ಈ ಪಾಡ್ ಕಾಸ್ಟ್ ನ ಹಿಂದಿರುವ ಸಂಗತಿಗಳು.
“ಪಾಡ್‌ಕಾಸ್ಟ್ ಪ್ರಪಂಚದಲ್ಲಿ ಮಕ್ಕಳಿಗೆ ಹೆಚ್ಚು ಅವಕಾಶ ಈಗ ಲಭ್ಯವಿಲ್ಲ ಈ ಸವಾಲಿಗೆ ಉತ್ತರ ನಮ್ಮ ಪಾಡ್ ಕಾಸ್ಟ್. ಇಲ್ಲಿ ಮಕ್ಕಳು ತಮ್ಮ ತೆರನಾದ ಮಕ್ಕಳ ಪರವಾಗಿ ಮಕ್ಕಳಂತೆಯೇ ಪ್ರಶ್ನೆ ಕೇಳುತ್ತಾರೆ. ಸಾಮಾನ್ಯವಾಗಿ ಮಕ್ಕಳು ವಯಸ್ಕರಿಗಿಂತ ವಿಭಿನ್ನವಾಗಿ ಯೋಚಿಸುತ್ತಾರೆ. ಅವರ ಪ್ರಶ್ನೆಗಳೇ ಬೇರೆ- ಅವರು ನಿರೀಕ್ಷಿಸುವ ಉತ್ತರಗಳೇ ಬೇರೆ. ಇದನ್ನು ಗಮನದಲ್ಲಿಟ್ಟುಕೊಂಡು ನಾವು ಈ ಪಾಡ್ ಕಾಸ್ಟ್ ಸರಣಿ ಆರಂಭಿಸಿದೆವು,” ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ದರ್ಶನ ರಾಜ್ ವಿವರಿಸಿದರು.
“ನಿರೂಪಣೆಯಲ್ಲಿ ಮಕ್ಕಳ ಆಸಕ್ತಿಯ ಆಧಾರದ ಮೇಲೆ ಆಯ್ಕೆ ಮಾಡಿ, ಅವರಿಗೆ ಸಂದರ್ಶನ ತರಬೇತಿ ನೀಡಲಾಯಿತು. ಉದಾಹರಣೆಗೆ ಶ್ವಾಸಕೋಶ ತಜ್ಞ ಡಾ. ಲಕ್ಷ್ಮಿ ನರಸಿಂಹನ್ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದಾಗ, ವಿದ್ಯಾರ್ಥಿಗಳ ಕೊರೊನಾ ಕುರಿತ ಪ್ರಶ್ನೆಗಳು ವಯಸ್ಕರು ಕೇಳಿದ್ದಕ್ಕಿಂತ ತುಂಬಾ ವಿಭಿನ್ನವಾಗಿದ್ದವು. ಮಕ್ಕಳ ಭಾಷೆಯಲ್ಲಿ ತಜ್ಞ ವೈದ್ಯರೊಬ್ಬರು ಗಂಭೀರ ವಿಷಯಗಳನ್ನು ವಿವರಿಸುತ್ತಿರುವುದು ಅತ್ಯಂತ ವಿಶೇಷವಾಗಿತ್ತು.” ಎಂದು ದರ್ಶನ ರಾಜ್ ವಿವರಿಸುತ್ತಾರೆ. ಅದೇ ರೀತಿ, ದಂತ ವೈದ್ಯ ಡಾ. ರವಿ ಶಾಂತರಾಜ್ ಅವರನ್ನು ದಂತ ಆರೋಗ್ಯ ಕುರಿತಂತೆ ಮಕ್ಕಳು ಸಂದರ್ಶಿಸಿದಾಗ ಅವರು ಕೇಳಿದ ಪ್ರಶ್ನೆಗಳು ವಿಶಿಷ್ಟವಾಗಿದ್ದವು,” ಎನ್ನುತ್ತಾರೆ ಶಾಲೆಯ ಆಡಳಿತಾಧಿಕಾರಿ ಶ್ರೀಮತಿ ಮಾಧುರ್ಯ ರಾಮಸ್ವಾಮಿ.
ಯುವ ಪಾಡ್‌ಕಾಸ್ಟರ್‌ಗಳಿಗೆ ಈ ಪ್ರಯಾಣ-ಪ್ರಯೋಗ ಅವಕಾಶದ ಹೊಸ ಜಗತ್ತನ್ನು ತೆರೆದಿದೆ. ಪ್ರತಿಯೊಂದು ಸಂಚಿಕೆಯಲ್ಲಿ ಅವರ ಮುಗ್ದತನ, ತಪ್ಪನ್ನು ಒಪ್ಪಿಕೊಂಡು ಸರಿಪಡಿಸಿಕೊಳ್ಳುವ ಅವರ ಗುಣ ಪ್ರತಿಫಲಿತಗೊಂಡಿವೆ. ಈ ಅನುಭವವು ಅವರ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿದೆ. ವಿದ್ಯಾರ್ಥಿ-ನಿರೂಪಕ ಆದಿತ್ಯ ತನ್ನ ರಘು ದೀಕ್ಷಿತರೊಂದಿನ ಸಂದರ್ಶನ ತನ್ನೊಳಗೆ ಆತ್ಮವಿಶ್ವಾಸ ಮೂಡಿಸಿ, ಸಂಗೀತವನ್ನು ಗಂಭೀರವಾಗಿ ತೆಗೆದುಕೊಳ್ಳುವ ಪ್ರೇರಣೆಯಾಯಿತು ಎಂದು ಹೇಳುತ್ತಾರೆ. ಮತ್ತೊಬ್ಬ ನಿರೂಪಕಿ ಮಾನ್ವಿ, “ನಾನು ಎಂದಿಗೂ ಆಳವಾಗಿ ಯೋಚಿಸದಿದ್ದವಿಷಯಗಳ ಬಗ್ಗೆ ಪಾಡ್ ಕಾಸ್ಟ್ ನಲ್ಲಿ ತಿಳಿದುಕೊಂಡೆ,” ಎಂದು ತಿಳಿಸಿದರು.
ಈ ಮಕ್ಕಳ ಪಾಡ್ ಕಾಸ್ಟ್ ಅತಿಥಿಗಳಿಗೂ ಹೊಸ ಅನುಭವ. . “ಮಕ್ಕಳ ಪ್ರಶ್ನೆಗಳ ಹಿಂದಿನ ಮುಗ್ದತೆ ನನ್ನನ್ನು ಗಾಢವಾಗಿ ತಟ್ಟಿತು. ಹಾವುಗಳ ಜಗತ್ತನ್ನು ಮಕ್ಕಳಿಗೆ ವಿವರಿಸುವುದು ಸವಾಲಾಗಿದ್ದರೂ ಇದು ನನಗೆ ವಿಶಿಷ್ಟ ಅನುಭವ ನೀಡಿತು ಎನ್ನುತ್ತಾರೆ,” ಸ್ನೇಕ್ ಶ್ಯಾಮ್.
ಮಕ್ಕಳ ಧ್ವನಿ ಮತ್ತು ಸಂಭಾಷಣೆಗಳನ್ನು ಕೆಳಗೆ ನೀಡಿದ ವಿಚಾರ ಪಾಡ್‌ಕ್ಯಾಸ್ಟ್ ಲಿಂಕ್ ಗಳಲ್ಲಿ ವೀಕ್ಷಿಸಿ.
Child’s Curiosity on God, Creation and life answered by Sri Datta Vijayananda Teertha Swamiji
https://youtu.be/GoaDTkgL-l8?
War From A Line of Code? – Explained by Cyber Warfare expert Ace Hacker – Mr. Vivek Shangari
https://youtu.be/yoKY4w9UeSM?
State of Cyber Warfare Weapons in India – Insights by CW Expert – Mr. Vivek Shangari
https://youtu.be/yD5_SC4ENAw?
Secrets of the Lungs || Conversation with Pulmonologist || Dr. Lakshmi Narasimhan
https://youtu.be/7_fymMj4Ww0?
Oral Health Demystified | A Child interacts with Dr. Ravi Shantaraj
https://youtu.be/-3Lk7zXaxEw?
Raghu Dixit on Vchar | Microbiologist to Lungi Rockstar | Music, Identity & Inspiration
https://youtu.be/IGAQVXHyxog?
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post