ಕಲ್ಪ ಮೀಡಿಯಾ ಹೌಸ್ | ಮೈಸೂರು |
ಭಾರೀ ಸಂಚಲನ ಸೃಷ್ಠಿಸಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿ ಶೀಟರ್ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿಯನ್ನು Santro Ravi 11 ದಿನಗಳ ಬಳಿಕ ಖಾಕಿ ಪಡೆ ಬಲೆಗೆ ಕೆಡವಿದೆ.
2ನೆಯ ಪತ್ನಿಯ ದೂರು ಆಧರಿಸಿ ರವಿ ಬಂಧನಕ್ಕೆ ಬಲೆ ಬೀಸಿದ ಮೈಸೂರು ಪೊಲೀಸರು ಗುಜರಾತ್’ನಲ್ಲಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರವಿ ಬಿಜೆಪಿ ಹಾಗೂ ಪ್ರಸ್ತುತ ರಾಜ್ಯ ಸರ್ಕಾರದಲ್ಲಿ ಪ್ರಭಾವ ಹೊಂದಿದ್ದ ಎಂಬ ಆರೋಪವನ್ನು ಕಾಂಗ್ರೆಸ್ ಮಾಡಿತ್ತು. ಈ ಹಿನ್ನೆಲೆಯಲ್ಲಿ ಈತನನ್ನು ಹೇಗಾದರೂ ಮಾಡಿ ಬಲೆಗೆ ಕೆಡವಲೇ ಬೇಕು ಎಂದು ಖುದ್ಧು ಸಿಎಂ ಸೂಚನೆ ನೀಡಿದ್ದರು ಎಂದು ಹೇಳಲಾಗಿದೆ.
ಸ್ಯಾಂಟ್ರೋ ರವಿ ಬಂಧನಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಲೋಕ್ ಕುಮಾರ್ ಅವರು ಪತ್ರಿಕಾಗೋಷ್ಠಿ ನಡೆಸಲಿದ್ದು, ಸಂಫೂರ್ಣ ಮಾಹಿತಿ ನೀಡಲಿದ್ದಾರೆ.

- ರವಿ ಜೊತೆ ಸಂಪರ್ಕವಿದ್ದರವರ ವಿಚಾರಣೆ
- ಕಾರಿನಲ್ಲೇ ಎಸ್ಕೇಪ್ ಆಗಿದ್ದ ರವಿಯ ಜಾಲಕ್ಕೆ ಬಲೆ
- ರವಿ ಆಪ್ತರಿಂದ ಮಾಹಿತಿ ಸಂಗ್ರಹ
- ಸಂಪರ್ಕಿತರ ಮಾಹಿತಿ ಆಧರಿಸಿ ಬಲೆ
- ರವಿ ಬಂಧನಕ್ಕೆ ಆರು ಹಿರಿಯ ಅಧಿಕಾರಿಗಳ ನೇತೃತ್ವದ ತಂಡ
- ಗುಜರಾತ್ ಪೊಲೀಸರನ್ನು ಸಂಪರ್ಕಿಸಿ, ಮಾಹಿತಿ ಸಂಗ್ರಹ
- ಗುಜರಾತ್ ಪೊಲೀಸರ ನೆರವಿನೊಂದಿಗೆ ಬಂಧನ
- ರವಿಯನ್ನು ಬೆಂಗಳೂರಿಗೆ ಕರೆತರುತ್ತಿರುವ ಪೊಲೀಸರು












Discussion about this post