ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮಕ್ಕಳಿಗೆ ಶಿಕ್ಷಣದ ಮಹತ್ವವನ್ನು ವಿವರಿಸಿ, ಶಾಲೆಯ ಶಿಕ್ಷಕರು ಮನೆ ಮನೆ ಭೇಟಿ ನೀಡಿ ದಾಖಲಾತಿ ಹೆಚ್ಚಿಸಬೇಕು ಹಾಗೂ ವಿದ್ಯಾರ್ಥಿಗಳ ಮನೆಗಳಿಗೆ ಶಿಕ್ಷಕರು ಬೇಟಿ ನೀಡಿ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಶಿಕ್ಷಣದ ಅರಿವು ಮೂಡಿಸಿ ವಿದ್ಯಾರ್ಥಿಗಳಿಗೆ ಹೆಚ್ಚು ಓದಲು ಪ್ರೋತ್ಸಾಹಿಸಬೇಕು ಎಂದು ಶ್ರೀರಾಂಪುರ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಶ್ರೀಧರ್ ಕರೆ ನೀಡಿದರು.
ಇಂದು ವಿದ್ಯಾಸ್ಪಂದನ ಪುಸ್ತಕ ವಿತರಣೆಯ ದಶಮಾನೋತ್ಸವ ಕಾರ್ಯಕ್ರಮ -2023 ಪ್ರಯುಕ್ತ ವಿದ್ಯಾಸ್ಪಂದನ ಸಂಸ್ಥೆಯ ವತಿಯಿಂದ ಮೈಸೂರಿನ ಪರಸಯ್ಯನ ಹುಂಡಿಯಲ್ಲಿ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಮೂವತ್ತಕ್ಕೂ ಹೆಚ್ಚು ಮಕ್ಕಳಿಗೆ ನೋಟ್ ಪುಸ್ತಕ, ಪೆನ್ , ಪೆನ್ಸಿಲ್ ಕಿಟ್ , ಊಟದ ತಟ್ಟೆ ಹಾಗೂ ಚಾಪೆಗಳನ್ನು ವಿತರಿಸಿ ಅವರು ಮಾತನಾಡಿದರು.

Also read: ಆನೆ ದಾಳಿಯಿಂದ 2 ಸಾವು: ಸಚಿವ ಈಶ್ವರ ಖಂಡ್ರೆ ಸಂತಾಪ
ಪಟ್ಟಣ ಪಂಚಾಯಿತಿಯ ಆರೋಗ್ಯಾಧಿಕಾರಿ ಪರಮೇಶ್ವರ್ ಮಾತನಾಡಿ, ಮಕ್ಕಳಿಗೆ ಶುಚಿತ್ವದ ದಿಂದ ಆರೋಗ್ಯ ಸಾಧ್ಯ ಮಕ್ಕಳು ಯಾವಾಗಲೂ ಶುಚಿತ್ವದ ಬಗ್ಗೆ ಗಮನ ಹರಿಸಲು ತಿಳಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ರೇಷ್ಮೆ ಮಂಡಳಿಯ ಕೆ.ಆರ್. ಗಣೇಶ್, ಅಕುನ ಟೆಕ್ನಾಲಜಿಯ ಪೂಜಾ , ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಜಗದಾಂಬ, ಸಹ ಶಿಕ್ಷಕರು, ಸಿಬ್ಬಂದಿ, ಪೋಷಕರು , ಕ್ಷೇತ್ರ ಸಂಪನ್ಮೂಲ ಅಧಿಕಾರಿ ಅನಿಲ್ ಹಾಜರಿದ್ದರು.










Discussion about this post