ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮಳಲಿ ಮಸೀದಿಯ Malali Mosque ಜಾಗದಲ್ಲಿ ಮೂಲ ದೇವಸ್ಥಾನ ನಿರ್ಮಾಣ ಶತಸಿದ್ಧ ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ Pramod Muthalik ಹೇಳಿದ್ದಾರೆ.
ನಗರದಲ್ಲಿಂದು ಮಾದ್ಯಮದವರೊಂದಿಗೆ ಮಾತನಾಡಿರು ಅವರು, ಬಾಬ್ರಿ ಮಸೀದಿ ಜಾಗದಲ್ಲಿ ರಾಮಮಂದಿರ ಕಟ್ಟಿದ ರೀತಿಯಲ್ಲೇ ಮಳಲಿ ಮಸೀದಿ ಜಾಗದಲ್ಲಿ ದೇವಾಲಯ ನಿರ್ಮಾಣ ಮಾಡುತ್ತೇವೆ. ರಾಜ್ಯದ 30 ಸಾವಿರ ಮಸೀದಿಗಳ ಮೂಲದಲ್ಲಿ ದೇವಸ್ಥಾನಗಳಿವೆ. ಅವುಗಳನ್ನು ವಾಪಸ್ ಪಡೆದೇ ತೀರುತ್ತೇವೆ ಎಂದು ಹೇಳಿದ್ದಾರೆ.
Also read: ರಾಜ್ಯದಲ್ಲಿ ಮುಂಗಾರು ಆರಂಭ ಯಾವಾಗ ಗೊತ್ತಾ? ಇಲ್ಲಿದೆ ಮಾಹಿತಿ
ಜೂನ್ 12ರಂದು ನಡೆಯಲಿರುವ ಹೋರಾಟಕ್ಕೆ ಶ್ರೀರಾಮಸೇನೆ ಬೆಂಬಲವಿದೆ. ಪೀರ್ ಪಾಷಾ ಬಂಗ್ಲೆಯನ್ನು ಅನುಭವ ಮಂಟಪವಾಗಿ ಮತ್ತೆ ಬದಲಾಯಿಸಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post