ಕಲ್ಪ ಮೀಡಿಯಾ ಹೌಸ್ | ಮೈಸೂರು |
ತರಬೇತಿ-ಅನುಭವ ಹೊಂದಿರುವ ಭಾರತೀಯ ಬಾಣಸಿಗರಿಗೆ ಇಂದು ವಿಶ್ವಾದ್ಯಂತ ಅಪಾರ ಉದ್ಯೋಗ ಅವಕಾಶಗಳು ಲಭ್ಯವಾಗುತ್ತಿದ್ದು, ಯುವ ಜನತೆ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದಿರುವ ಮೈಸೂರು ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ & ಕಲಿನರಿ (ಎಂಐಎಚ್ಎಂಸಿ) #Mysuru Institute of Hotel Management & Culinary ಬಾಣಸಿಗ ಸತೀಶ್ ನಾಗರಾಜ್ ತಿಳಿಸಿದ್ದಾರೆ.
ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು (ಸ್ವಾಯತ್ತ) ವಿದ್ಯಾರ್ಥಿನಿಯರಿಗೆ ಎಂಐಎಚ್ಎಂಸಿ
“ಭಾರತೀಯ ಬಾಣಸಿಗರಿಗೆ ಇಂದು ವಿಶ್ವ ಮಟ್ಟದಲ್ಲಿ ಅವರ ಕೌಶಲ್ಯದ ಕಾರಣಕ್ಕೆ ಬಹಳ ಬೇಡಿಕೆ ಇದೆ. ಕೃತಕ ಬುದ್ದಿಮತ್ತೆ ಈ ಕ್ಷೇತ್ರಕ್ಕೆ ತಟ್ಟುವುದಿಲ್ಲ. ಆಹಾರ ವಿಜ್ಞಾನ ವಿದ್ಯಾರ್ಥಿಗಳು ಈ ಕೋರ್ಸ್ ಮೂಲಕ ಅವಕಾಶಗಳನ್ನು ಇನ್ನಷ್ಟು ವಿಸ್ತರಿಸಿಕೊಳ್ಳಬಹುದು,” ಎಂದು ಅವರು ತಿಳಿಸಿದರು.
“ಇಂದು ಪ್ರತಿಯೊಬ್ಬರೂ ಕೂಡಾ ತಾವು ಸೇವಿಸುವ ಆಹಾರ, ಡಯಟ್, ಪೌಷ್ಟಿಕಾಂಶಗಳ ಬಗ್ಗೆ ಹೆಚ್ಚು ಹೆಚ್ಚು ಜಾಗೃತರಾಗುತ್ತಿದ್ದರೆ. ಇದು, ಈ ಕ್ಷೇತ್ರದಲ್ಲಿನ ಉದ್ಯೋಗಾವಕಾಶವನ್ನು ಇನ್ನಷ್ಟು ಹೆಚ್ಚಿಸಿದೆ. ಮೆನು ಪ್ಲಾನರ್ ನಿಂದ ಆರಂಭಗೊಳ್ಳುವ ಉದ್ಯೋಗಾವಕಾಶಕ್ಕೆ ಅವಾಕಾಶಗಳು ಉಜ್ವಲವಾಗಿವೆ. ಕಾರ್ಪೊರೇಟ್ ಕಿಚನ್, ಡಯಟ್ ಚೆಫ್ ಗಳು, ಹೀಗೆ ಈ ಕ್ಷೇತ್ರ ವಿಸ್ತೃತಗೊಳ್ಳುತ್ತಿದೆ,” ಎಂದು ಅವರು ತಿಳಿಸಿದರು.
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು (ಸ್ವಾಯತ್ತ) ಇದರ ಆಹಾರ ವಿಜ್ಞಾನ ಹಾಗು ಪೌಷ್ಟಿಕತೆ ವಿಭಾಗದ ಪ್ರಾಧ್ಯಾಪಕಿ ಡಾ. ರಾಜೇಶ್ವರಿ ಜೆ ಮಾತನಾಡಿ, ಆಹಾರ-ಪೌಷ್ಟಿಕಾಂಶ ಕ್ಷೇತ್ರ ಅನೇಕ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದ್ದು, ವಿದ್ಯಾರ್ಥಿನಿಯರು ತಮ್ಮ ಕೌಶಲ್ಯ ವೃದ್ಧಿಸಿಕೊಂಡರೆ ಅವರಿಗೆ ಅಪಾರ ಉದ್ಯೋಗವಾಕಾಶ ದೊರೆಯುತ್ತದೆ. “ನೀವು ಕೌಶಲ್ಯ ಬೆಳೆಸಿಕೊಂಡರೆ ನಿಮ್ಮ ಕನಸುಗಳನ್ನು ನನಸಾಗಿಸುವುದು ಕಷ್ಟವಲ್ಲ,” ಎಂದು ಅವರು ತಿಳಿಸಿದರು.
ಎಂಐಎಚ್ಎಂಸಿ ಆಡಳಿತ ಮಂಡಳಿಯ ಅರ್ಪಿತ ಧರ್ಮವೀರ್ ಈ ಸಂದರ್ಭದಲ್ಲಿ ಮಾತನಾಡಿ, ಆಹಾರ ವಿಜ್ಞಾನ ಕ್ಷೇತ್ರ ಮಹಿಳೆಯರಿಗೆ ಹೆಚ್ಚು ಸೂಕ್ತ.ಅವರಿಗೆ ಈ ಕ್ಷೇತ್ರದ ಕೌಶಲ್ಯಗಳನ್ನು ಕಲಿಯುವುದು ಸುಲಭ ಏಕೆಂದರೆ ಅದು ರಕ್ತಗತವಾಗಿ ಬಂದಿರುತ್ತದೆ ಎಂದರು.
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು (ಸ್ವಾಯತ್ತ) ಇದರ ಆಹಾರ ವಿಜ್ಞಾನ ಹಾಗು ಪೌಷ್ಟಿಕತೆ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ನಮ್ರತಾ ಎಂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಎಂಐಎಚ್ಎಂಸಿ ಪ್ರಾಂಶುಪಾಲರಾದ ಶ್ರೀ ವಿಕ್ಟರ್ ಹೇಮಂತ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















