ನವದೆಹಲಿ: ಲೋಕಸಭಾ ಚುನಾವಣೆಯ ಕಾವು ಹೆಚ್ಚಾಗಿರುವಂತೆಯೇ ನರೇಂದ್ರ ಮೋದಿಯವರೇ ಮತ್ತೆ ಪ್ರಧಾನಿಯಾಗಬೇಕು ಎಂಬ ಜನಾಭಿಪ್ರಾಯದ ಸಮೀಕ್ಷೆಯೊಂದು ಹೊರಬಿದ್ದಿದೆ.
ಈ ಕುರಿತಂತೆ ಸಿ ವೋಟರ್ಸ್-ಐಎನ್’ಎಸ್ ಪೋಲ್ ಟ್ರ್ಯಾಕರ್ ನಡೆಸಿರುವ ಸಮೀಕ್ಷೆಯಂತೆ, ಮತ್ತೆ ಪ್ರಧಾನಿಯಾಗಲು ಮೋದಿಯವರೇ ಸೂಕ್ತವಾಗಿದ್ದು, ರಾಹುಲ್ ಗಾಂಧಿ ಬಗೆಗಿನ ಒಲವು ಮೊದಲಿಗಿಂತಲೂ ಕಡಿಮೆಯಾಗಿದೆ ಎಂದು ವರದಿಯಾಗಿದೆ.
ಶೇ. 63.6 ರಷ್ಟು ನಿರುದ್ಯೋಗಿ ಯುವಕರು ನರೇಂದ್ರ ಮೋದಿ ಮುಂದಿನ ಮತ್ತೆ ಪ್ರಧಾನಿಯಾಗಲಿ ಎಂದಿದ್ದರೆ, ಕೇವಲ ಶೇ. 26ರಷ್ಟು ಮಂದಿ ರಾಹುಲ್ ಗಾಂಧಿ ಪ್ರಧಾನಿ ಆಗಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಗೃಹಿಣಿಯರ ವರ್ಗದಲ್ಲಿ ಶೇ. 43.3 ಮಂದಿ ಮೋದಿ ಪ್ರಧಾನಿಯಾಗಿವುದನ್ನು ನೋಡಲು ಬಯಸಿದ್ದರೆ ಶೇ. 37.2 ರಷ್ಟು ಮಂದಿ ರಾಹುಲ್ ಗಾಂಧಿ ಮುಂದಿನ ಪ್ರಧಾನಿ ಆಗಲಿ ಎಂದಿದ್ದಾರೆ.
ಇನ್ನು ಶೇ.61.1ರಷ್ಟು ಸರ್ಕಾರಿ ನೌಕರರು ಸಹ ಮೋದಿ ಪರವಾಗಿ ಮಾತನಾಡಿದ್ದು, ರಾಹುಲ್’ಗೆ ಇಲ್ಲಿ ಕೇವಲ ಶೇ.26ರಷ್ಟು ಮಂದಿ ಮಾತ್ರ ಬೆಂಬಲ ಸೂಚಿಸಿದ್ದಾರೆ.
Discussion about this post