ಗಾಂಧಿನಗರ: 2019ರ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ದಿಗ್ವಿಜಯ ಸಾಧಿಸಿ, ಎರಡನೆಯ ಬಾರಿ ಪ್ರಧಾನಿಯಾಗುತ್ತಿರುವ ನರೇಂದ್ರ ಮೋದಿಯವರು ಇಂದು ತಮ್ಮ ತಾಯಿಯವರನ್ನು ಭೇಟಿಯಾಗಿ ಆರ್ಶೀವಾದ ಪಡೆದರು.
ಗುಜತಾರ್’ನ ಗಾಂಧಿನಗರಕ್ಕೆ ಇಂದು ಭೇಟಿ ನೀಡಿದ ಮೋದಿ ಅವರಿಗೆ ಗಾಂಧಿನಗರದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ಇಡಿಯ ಗಾಂಧಿನಗರ, ಪ್ರಮುಖವಾಗಿ ಮೋದಿ ತಾಯಿ ವಾಸಿಸುತ್ತಿರುವ ಬಡಾವಣೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಎರಡನೆಯ ಬಾರಿ ಪ್ರಧಾನಿಯಾಗುತ್ತಿರುವ ತಮ್ಮೂರಿನ ಪುತ್ರನನ್ನು ಕಾಣಲು ಸಾವಿರಾರು ಮಂದಿ ನೆರೆದಿದ್ದರು. ಎಲ್ಲೆಲ್ಲೂ ಮೋದಿ ಮೋದಿ ಮೋದಿ ಘೋಷಣೆ ಕೇಳಿಬರುತ್ತಿತ್ತು.
Gujarat: Prime Minister Narendra Modi arrives at his mother Heeraben Modi’s residence in Gandhinagar. pic.twitter.com/Khpl5FHy7k
— ANI (@ANI) May 26, 2019
ತಮ್ಮನ್ನು ಕಾಣಲು ನೆರೆದಿದ್ದ ಮಂದಿಯತ್ತ ಕೈಬೀಸುತ್ತಲೇ ಮನೆ ತಲುಪಿದ ಮೋದಿಯವರು ತಮ್ಮ ತಾಯಿ ಹೀರಾಬೆನ್ ಮೋದಿ ಅವರನ್ನು ಭೇಟಿಯಾಗಿ ಅವರ ಪಾದ ಮುಟ್ಟಿ ಆರ್ಶೀವಾದ ಪಡೆದರು. ಹಲವು ನಿಮಿಷಗಳ ಕಾಲ ತಮ್ಮ ತಾಯಿಯೊಂದಿಗೆ ಮೋದಿ ಉಭಯಕುಶಲೋಪರಿ ಮಾತನಾಡಿದರು.
ಮೋದಿ ಭೇಟಿಯ ಹಿನ್ನೆಲೆಯಲ್ಲಿ ಗಾಂಧಿನಗರದಲ್ಲಿ ಅಭೂತಪೂರ್ವ ಭದ್ರತೆ ಕಲ್ಪಿಸಲಾಗಿತ್ತು.
Discussion about this post