ನವದೆಹಲಿ: ಭಾರತ ಹಾಗೂ ಪಾಕಿಸ್ಥಾನ ನಡುವೆ ಯುದ್ದದ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೆ, ಮೋದಿ ನೇತೃತ್ವದ ಸರ್ಕಾರ ರಾಜತಾಂತ್ರಿಕ ನಡೆಗೆ ಭರ್ಜರಿ ಜಯ ದೊರೆತಿದ್ದು, ತನ್ನ ಪರಮಾಪ್ತ ರಾಷ್ಟ್ರ ಪಾಕಿಸ್ತಾನಕ್ಕೆ ಕೈಕೊಟ್ಟಿರುವ ಚೀನಾ, ಭಾರತಕ್ಕೆ ಬೆಂಬಲ ಘೋಷಣೆ ಮಾಡಿದೆ.
ಭಾರತದ ದಾಳಿಯಿಂದ ತತ್ತರಿಸಿರುವ ಪಾಕಿಸ್ತಾನ ತನಗೆ ಬೆಂಬಲ ನೀಡುವಂತೆ ಚೀನಾವನ್ನು ಕೋರಿತ್ತು. ಆದರೆ, ಚೀನಾ ಪ್ರವಾಸದಲ್ಲಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ನಡೆಸಿದ ಅತ್ಯಂತ ಮಹತ್ವದ ಮಾತುಕತೆ ಯಶಸ್ವಿಯಾಗಿದ್ದು, ಭಾರತಕ್ಕೆ ರಾಜತಾಂತ್ರಿಕ ಗೆಲುವು ದೊರೆಯುವಲ್ಲಿ ಜಯ ಸಂದಿದೆ.
In the light of continuing refusal of Pakistan to acknowledge & act against terror groups on its territory & based on credible information that JeM was planning other attacks in India,GOI decided to take pre-emptive action:EAM @SushmaSwaraj Remarks at #RIC https://t.co/vSedlv9XHN pic.twitter.com/IZxGn7RDMz
— Raveesh Kumar (@MEAIndia) February 27, 2019
ಈ ಬೆಳವಣಿಗೆಯಿಂದಾಗಿ ಪಾಕಿಸ್ತಾನಕ್ಕೆ ಮತ್ತೊಮ್ಮೆ ದೊಡ್ಡ ಮುಖಭಂಗವಾದಂತಾಗಿದೆ. ಇದೀಗ ಪಾಕಿಸ್ತಾನ ಭಾರತದ ವಿರುದ್ದ ಇದೀಗ ಏಕಾಂಗಿಯಾಗಿಯೇ ಯುದ್ದ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಯಾವ ರೀತಿ ನಿರ್ವಹಿಸುತ್ತದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
Discussion about this post